ಸವೆದರೂ ಚಪ್ಪಲಿ

ಸವೆದರೂ ಚಪ್ಪಲಿ ಎರಡು ಜೊತೆ
ಆಗಲಿಲ್ಲ ಕೆಲಸ
ಆದರೂ ಇಲ್ಲಿಯ ಅಧಿಕಾರಿಗಳಿಗೆ
ಪ್ರಮೋಷನ್ ವಿಲಾಸ
ಇದು ತಬರನ ಪ್ರಲಾಪ
ಜನಗಳ ಕಲಾಪ //ಪ//

ಬಂದರೆ ಯಾವುದೆ ಅರ್ಜಿ
ಹುಳ ಹಿಡಿಯುವುದಿಲ್ಲ
ಟಿಪ್ಪಣಿ, ಚರ್ಚಿಸಿಗಳಲಿ
ಕಡತ ಬೆಳೆವುದಲ್ಲ
ಕಡೆಗೂ ಹತ್ತನೆ ತಿಂಗಳಿಗೆ
ಆಗುವ ಸಂತಾನ
ಕುರೂಪ ಮಗುವಿನ ಜನನ
ಇಲ್ಲವೆ ಮಗುವಿನ ನಿಧನ!

ಕಛೇರಿಗಿಲ್ಲ ಬೇಲಿ
ಇದ್ದರೆ ಅದುವೆ ಮೇಯುತ್ತದೆ
ಮೇಯದೆ ಕೆಲಸಕೆ ಬಲವೆಲ್ಲಿ
ತರ್ಕವ ಅದು ಮುಂದಿಡುತ್ತದೆ
ಇದು ಟೇಬಲ್‌ಗಳ ಭಾಷೆ
ಒಳ ವ್ಯಾಕರಣದ ಭಾಷೆ
ಜನಗಳ ಕಾಲಿನ ಚಪ್ಪಲಿ ಕೈಯಿಗೆ
ಬರುವವರೆಗಿನ ಭಾಷೆ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಾವಿಗೆ ಬಿದ್ದವಳು
Next post ನಗೆ

ಸಣ್ಣ ಕತೆ

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

cheap jordans|wholesale air max|wholesale jordans|wholesale jewelry|wholesale jerseys