ದೀಪ

ನಮ್ಮ ಊರಿನ
ಅಕ್ಕರೆಯ ಸಕ್ಕರೆ ಗೊಂಬೆ
ಕಾಂಕ್ರೀಟ್ ಕಾಡು
ಬೆಂಗಳೂರು ಸೇರುತಿಹಳು

ಮಲೆನಾಡು ಮೈಸಿರಿ
ಉದ್ಯಮಿಯೊಬ್ಬನ ಕೈಹಿಡಿಯುತಿಹಳು
ಇಲ್ಲಿನ ನಯ ವಿನಯಗಳ
ಬಿತ್ತಲಲ್ಲಿಗೆ ನಡೆಯುತಿಹಳು

ಪ್ರೀತಿಯ ಸಿಂಚನ ನೀಡುವಳು
ಅಲ್ಲಿನ ಮರ ಗಿಡ ಬಳ್ಳಿಗಳಿಗೆ
ನಮ್ಮೂರಿನ ಐಸಿರಿ
ಬೊಗಸೆ ತುಂಬ ಮಲ್ಲಿಗೆಯಾ ಚೆಲ್ಲಿ

ಹೆಸರಾಗುವಳಲ್ಲಿ
ಈ ಕನ್ನಡತಿ
ಹಚ್ಚುವಳಲ್ಲಿ ಕನ್ನಡದ ದೀಪ
ಆಕೆಯ ಪ್ರತಿ ಹೆಜ್ಜೆ ಹೆಜ್ಜೆಯಲಿ
ಗೆಜ್ಜೆಯ ನಿನಾದದಲಿ
ಈ ನಾಡಿನ ಕಂಪ ಸೂಸುತಿರಲಿ

ಈ ಅಚ್ಚು ಬೆಲ್ಲದಚ್ಚು
ಅಲ್ಲಿನವರಿಗೆ ಸಿಹಿಯಾಗಲಿ
ಶಾಲಿನಿ-ವಿಲಿಯಂ ರ ವಿವಾಹದ
ಬೆಳ್ಳಿ ಹಬ್ಬದ ಪ್ರತೀಕ

ಈ ಬಾಗಿನ ಕನ್ನಡದ ದೀಪ
ಅರಳಿ ಬೆಳಗಲಲ್ಲಿ ಈ ದೀಪ
ದೂರದ ನಾಡೊಂದರಲಿ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚಿಂತನೆ
Next post ಸುಡುಗಾಡು ಸಿದ್ದನ ಪ್ರಸಂಗ

ಸಣ್ಣ ಕತೆ

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…