ಕೃಪಾಶಂಕರ ನಿನಗೆ ಅವಧಾನಿಗಳ ಕೃಪೆಯಾಗಲಿಲ್ಲ
ಮಂತ್ರಿ ಪದ ಬರಲಿಲ್ಲ
ಜನಮತಗಳಿಸಿ
ನಿನ್ನ ಮರ್ಯಾದೆ ಉಳಿಸಿದರೂ
ಪದ ಪಡೆಯುವ ಆಸೆ ಭರವಸೆ ಇದ್ದರೂ
ಮೇಲಿನವರು ಕಡೆಗಣಿಸಿದರು.
ಇದು ನಿನಗೆ ಸಂದ
ಎಣಿಸದೆಯೆ ಬಂದ
ಬಹುಮಾನ!
ಅಹವಾಲು ತಲುಪಲಿಲ್ಲ
ಒಲೈಕೆ- ಫಲಿಸಲಿಲ್ಲ
ಗೈದ ಕುಕೃತಿ – ಅನಧಿಕೃತ
ತಿರುಗಿದ ಬಾಣವಾಯಿತು-
ಇಡು ಶಂಕರನಲ್ಲಿ ನಂಬಿಕೆ
ಮುಂದೊಂದು ದಿನ
ಮನೆಮಂತ್ರಿಯಾಗುವೆ ಪುನಃ
ಶಂಕರ ನಿನ್ನ ಕೃಪಾಕಟಾಕ್ಷದ
ಅಡಿಯಲ್ಲಿ
ನಾನು ಬಂಜೆಯಾದೆ-
ಏಕಾಯಿತು ಹೀಗೆ-ಹೀನಾಯ ತಗಾದೆ
ನಾನು ತಿಳಿಯದಾದೆ.
ಧರ್ಮದಾರುಣವಾಯಿತು
ಕರ್ಮಕಾರಣವಾಯಿತು
ಯುಗ ಯುಗದಲ್ಲಿಯೂ
ಧರ್ಮರಕ್ಷಣೆಗೆ ಸಂಭವಿಸುವೆನೆಂದು
ಇತ್ತ ಆಶ್ವಾಸನೆ ಎಲ್ಲಿ ಹೋಯಿತು
ಮಠಪೀಟ ಧನ ದಾಹದಿಂದ
ನೀನು ಮೇಲೇಳಲಿಲ್ಲ
ಎಲ್ಲರಂತಲ್ಲ ನೀನೆಂದು
ಜಗದೊಡೆಯ ಬಲ್ಲಹನೆಂದು
ಚರಣಧೂಳಿಯನು ಹಣೆಗೆ ಹಚ್ಚಿಯಾಯಿತು
ನೀನು ಮೇಲೇಳಲಿಲ್ಲ – ಮಾನಹಾನಿಗಳ ಡಾವಪೇಚಿನಲ್ಲಿ
ಮನುವಾಗಿಯೆ ಉಳಿದೆ.
*****