ಬಾ ತಾಯೆ ಬಾ

ಓಂ ಬ್ರಹ್ಮಾನಂದಂ ನಾದ ರೂಪಂ
ಆನಂದಂ ಸತ್ಯ ನಿತ್ಯ ಸ್ವರೂಪಂ
ನಮೋ ನಮೋ ಭುವನ ಮನೋಹರೀ
ಶಂಕರೀ ಧನ್ಯಂ ಮಾನ್ಯಂ ಭುವನೇಶ್ವರೀ

ಜೀವದುಸಿರ
ನರನಾಡಿಗಳಲಿ
ನಿನ್ನ ಆವಾಹನೆ ||ತಾಯಿ||

ನೀ ಬಾ ಎನ್ನ
ಹೃದಯದಾಲಯಕೆ
ನೆಲೆಸು ಬಾ ಹರಸು ಬಾ ||ತಾಯಿ||

ಬಾ ತಾಯೆ ಮಂತ್ರ
ಗಣಾತೀತ ಚಾರಣ
ಪರಾತ್ಪದಾಲಯಕೆ ಬಾ ||ತಾಯಿ||

ಶ್ವೇತ ವರ್ಷಿಣಿ
ವೇದಾಂತ ರೂಪಿಣಿ
ಮಂತ್ರ ತಾತೀತದಾಲಯಕೆ ಬಾ ||ತಾಯಿ||

ವಿಜ್ಞಾನ ವಿಸ್ಮಯ
ಡಂಭ ಆಡಂಬರ
ಮನೋ ವಿಕಾಸದಾಲಯಕೆ ||ತಾಯಿ||

ಜಲದಿ ತರಂಗಿಣಿ
ಭೂ ವಿಹಂಗಿಣಿ
ವಿಮಲ ಚರಿತ್ರಾಲಯಕೆ ||ತಾಯಿ||

ಓಂಕಾರ ರೂಪಿಣಿ
ಮಹಾನಂದ ಸ್ವರೂಪಿಣಿ
ಸತ್ಯ ನಿತ್ಯಾಲಯಕೆ ನಿನ್ನ
ಆವಾಹನೆ ||ಬಾ||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾರುವೆ ಜನಾಃ ಸುಖಿನೋಭವಂತು!
Next post ಕೃಪಾಶಂಕರ

ಸಣ್ಣ ಕತೆ

 • ತನ್ನೊಳಗಣ ಕಿಚ್ಚು

  ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

 • ಆವಲಹಳ್ಳಿಯಲ್ಲಿ ಸಭೆ

  ಪ್ರಕರಣ ೯ ಹಿಂದೆಯೇ ನಿಶ್ಚೈಸಿದ್ದಂತೆ ಆವಲಹಳ್ಳಿಯಲ್ಲಿ ಉಪಾಧ್ಯಾಯರ ಸಂಘದ ಸಭೆಯನ್ನು ಸೇರಿಸಲು ಏರ್ಪಾಟು ನಡೆದಿತ್ತು. ರಂಗಣ್ಣನು ಹಿಂದಿನ ದಿನ ಸಾಯಂಕಾಲವೇ ಆವಲಹಳ್ಳಿಗೆ ಬಂದು ಮೊಕ್ಕಾಂ ಮಾಡಿದನು. ಸಭೆಯಲ್ಲಿ… Read more…

 • ಹುಟ್ಟು

  ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

 • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

  ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

 • ಟೋಪಿ ಮಾರುತಿ

  "ಏ ಕಾಗಿ, ಕಾಳೀ ಮಗನ! ಯಾಕ ಕೂಗ್ತೀಯಾ?" ಭಾವಿಯಲ್ಲಿಯ ಹಗ್ಗ ಮೇಲೆ ಕೆಳಗೆ ಹೋಗುತ್ತಿರುತ್ತದೆ. ಒಂದು ಮೊಳ ಹಗ್ಗ ಸೇದಿದರೆ ಅರ್‍ಧ ಮೊಳ ಒಳಗೆ ಸೇರಿರುತ್ತದೆ. "ಥೂ… Read more…