
ವಿಲೀನನಾದನು ವೇಣುನಾದದಲಿ ಭೀಷ್ಮ ಇದು ಅವಳೇ ಇರಬಹುದೆ? ಹಾಗೆ ಅಂದು ನನ್ನೆದುರು ನಿಂತು ಮೊದಲ ಬಾರಿಗೆ ನನ್ನನ್ನು ಏಕವಚನದಲ್ಲಿ ಕರೆದು ಪ್ರತಿಜ್ಞೆಯಂತಹ ಮಾತುಗಳನ್ನಾಡಿ ಧಗಧಗನೆ ಉರಿಯುತ್ತಿದ್ದ ಚಿತೆಯನ್ನು ಪ್ರವೇಶಿಸಿದಳಲ್ಲಾ, ಆ ಅಂಬೆಯೇ ಹೀಗೆ ಶಿ...
ಅಜ್ಜಿ…. ಊಟದ ಘಂಟೆ! ಅಜ್ಜ…. ಪಾಠದ ನಿಘಂಟು! ಅಕ್ಕ…. ಫ್ಯಾಷನ್ ಸೆಂಟು! ಅಮ್ಮ…. ಪ್ರೀತಿ ನಂಟು! ಅಪ್ಪ…. ಆಸ್ತಿಯ ಗಂಟು!! *****...
ಮಾವಿನ ಮರದಡಿನಿಂತ ಸುಂದರಿ ಮಂದಹಾಸ ಬೀರಿದ ಮದನಾರಿ ಹೂ ಬಳ್ಳಿಯಂತೆ ಮರವ ನೀ ಆಸರಿಸಿ ಅರಳಿ ನಲಿವ ಚಲುವೆ ನೀ ಸಿಂಗಾರಿ ಹುಣ್ಣಿಮೆಯ ಚಂದ್ರನಂತೆ ನಿನ್ನ ಮೊಗವು ಹರಡಿದೆ ಎಲ್ಲೆಡೆ ಬೆಳದಿಂಗಳ ಹೊನಲು ಕೋಗಿಲೆಯ ಜೊತೆಗೂಡಿ ನೀ ಹಾಡಲು ವಸಂತನು ನಿನ್ನ ಜೊ...
ಮೊನ್ನೆ ಕಾಶಿಗೆ ಹೋಗಿದ್ದೆ ಗಂಗೆಯಲ್ಲೊಂದು ಮುಳುಗು ಹಾಕಿ ಕೋಪ ಬಿಟ್ಟು ಬಂದೆ! ಬಡವನ ದವಡೆಗೆ ಮೂಲವಾದ ಈ ಪ್ರಳಯಾಂತಕ ಕೋಪವನ್ನ ಇಟ್ಟುಕೊಳ್ಳುವುದಕ್ಕಿಂತ ಬಿಟ್ಟು ಬಿಡುವುದೇ ಮೇಲಲ್ಲವೇ ? ಅಷ್ಟೇ ಅಲ್ಲದೆ, ಕೋಪ ಬಿಡುವುದು ಅನಿವಾರ್‍ಯವೂ ಆಗಿತ್ತು! ...
‘ಜಾತ್ಯತೀತತೆ’ಯನ್ನು ಪ್ರತಿಪಾದಿಸುವ ಕೆಲವು ವಿಚಾರವಂತರನ್ನು ಸರಳವಾಗಿ, ಸುಲಭವಾಗಿ ಲೇವಡಿ ಮಾಡುವ ಮತ್ತೊಂದು ವರ್ಗದ ವಿಚಾರವಂತರೂ ನಮ್ಮಲ್ಲಿದ್ದಾರೆ. ಇಂಥವರು ಈ ದೇಶದ ಸಂಕೀರ್ಣ ಸ್ವರೂಪವನ್ನು ಅರ್ಥಮಾಡಿಕೊಂಡಿದ್ದಾರೆಯೆ ಎಂಬ ಅನುಮಾನವುಂಟಾಗುತ್ತದ...
ಅವಳ ಪುಟ್ಟ ಕೀಟಲೆ ದಹಿಸುವುದು ನನ್ನ ಅಹಂ ಟನ್ನುಗಟ್ಟಲೆ *****...
ಮೂರುಸಾವಿರ ಮಠದ ಆರು ಮೀರಿದ ಸಾಮಿ ಮಾರಾಯ ಹುಚ್ಚಯ್ಯ ಮಾತುಕೇಳ ಹುಬ್ಬಳ್ಳಿ ಹೂವಾತು ನಿನಪಾದ ಜೇನಾತು ದೊಡ್ಡ ಕಂಬದ ಸಾಮಿ ಮಾತು ಕೇಳ ಯಾಕ ಗವಿಯಲ್ಲಿ ಕುಂತಿ ಕಂಡು ಕಾಣದ ನಿಂತಿ ಮನಿಮನಿಯ ಬಾಗಿಲಕ ದೀಪ ತಾರ ನಗಿಮಾರಿ ಗರತೇರು ನಗುವಿನಾರತಿ ತಂದ್ರು ಮ...
ಗುಂಡನಿಗೆ ಬೆಟ್ಟಿಂಗ್ ಕಟ್ಟುವ ಚಟ. ಯಾವ ವಿಚಾರದಲ್ಲೂ ಅವನು ಬೆಟ್ಟಿಂಗ್ ಮಾಡುತ್ತಿದ್ದ. ಅವನ ತಂದೆ ಅವನ ಈ ಚಟ ಬಿಡಿಸಬೇಕೆಂದು ತೀರ್ಮಾನಿಸಿದ್ದರು. ಒಂದು ದಿವಸ ಗುಂಡ ಹೇಳಿದ – “ಅಪ್ಪ ಊರಿನ ಗದ್ದೆ ಬ್ಯಲಿನಲ್ಲಿ ನೀನು ಬರಿ ಚಡ್ಡಿಯಲ...
ಬದುಕಿನ ದೀರ್ಘ ಪಯಣದಲ್ಲಿ ಹೊಳೆದಂಡೆಗೆ ಕುಳಿತು ನೀನು ಯೋಚಿಸುವೆ ಏನನ್ನು? ನೀನೆಲ್ಲಿ ಹೋದರೂ ಹಿಂದೆಯೇ ಬರುತ್ತವೆ ನಿನ್ನ ಭೂತದ ನೆನಪುಗಳು. ಘೋರ ರಾತ್ರಿ ಕಳೆದು ಮುಂಜಾವಿನ ನಸುಕು ನಿನ್ನ ಗೋಳನ್ನು ಮೀರಿ ಉದಯಿಸುತ್ತಿರುವ ಸೂರ್ಯ ಕಾಲನ ಕೈಗೆ ಸಿಕ್...
ಸಾವಯವವೆಂದೊಡದು ಸಂಗೀತದಂತೆ ಸತ್ತ್ವದೊಳೊಂದೆ. ಮೊದಲಕ್ಷರವು ಸಾಕಾರವಾದಂತೆ ಸೌಂದರ್‍ಯಕ್ಕುಂ, ಸ್ವರ್ಗಕ್ಕುಂ ಸಾವಯವ ಸಂಯಮವು ಸಾನುರಾಗದ ಸೊಪಾನಗಳದರೊಳೇರಿದೊಡೆ ಸ್ವಾವಲಂಬೀ, ಮತ್ತಿಳಿದೊಡದು ಸ್ವದೇಶೀ – ವಿಜ್ಞಾನೇಶ್ವರಾ *****...
ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...
ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...
“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...
“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...
ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...
ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...















