೧ ಬಂದನು ಅಗೊ ಹೃನ್- ಮಂದಿರದಲಿ ಇಗೊ ನಿಂದನು ನನ್ನಯ ರಾಮಾ ಇನ್ನು ಎಂದಿಗೂ ಜನುಮಕೆ ಕ್ಷೇಮಾ! ೨ ಮನವೇ ಗರ್ಜಿಸು ತನುವೇ ಗರ್ಜಿಸು ಸ್ನೇಹಸಿಂಧುವಿನ ನಾಮಾ! ನನ್ನಾ ಧರ್ಮಬಂಧುವಿನ ನಾಮಾ! ೩ ಎನಿತು ಮಧುರವೋ ಇನಿಯನ ನಾಮಾ| ರಾಮಚಂದಿರನ ನಾಮಾ ಘನ್ನಾ ಪ್ರೇಮಸುಂದರನ ನಾಮಾ| ೪ ಕೂಡಿದೆನೀಗಲೆ ಹಾಡುವೆನೀಗಲೆ ಉಳುಹಿತು ...

ಹುಟ್ಟೂರು ಹೆತ್ತವರು, ಒಡಹುಟ್ಟಿದವರು, ನೆಂಟರಿಷ್ಟರ ಬಗ್ಗೆ ಮಾತಾಡುವಾಗ ಹೊಟ್ಟೆ ತುಂಬಿದಂತಾಗುತ್ತೆ ಹಿಟ್ಟು ಕಾರವನ್ನೇ ತಿಂದರೂ ಒಂದ್ಸಾರಿ ನೋಡಿಕೊಂಡು ಬರಬೇಕೆನಿಸುತ್ತೆ ಯಾವ ಕಾಲನೂ ಹೇಳಬೇಡ ಮಹಾನವಮಿ ಕಾಲವೊಂದು ಬಿಟ್ಟ ಮೇಲೆ ದಿಣ್ಣೆ, ದೀಪಾಂತರ...

ಕಿಡಿಯೊಂದೆ! ಅದನು ಸಿಡಿಸುವ ಕೈಯೊಂದೆ!! ಆದರೆ ಪರಿಣಾಮ – ಯಾರು ಬಲಿಯಾದರೆ ಏನಂತೆ? ಊರೇ ಉರಿದರೂ ಏನಂತೆ?? ಸ್ವಾರ್ಥದ ಕಿಚ್ಚು ಹೊರಗೆ ಮುಖವಾಡ ಹೆಜ್ಜೆ ಹೆಜ್ಜೆಗೂ ನರಿಯ ನಾಚಿಸುವ ಅಗಣಿತ ಲೆಕ್ಕಾಚಾರ ಮಾತಲಿ ಜೇನು ಕಣ್ಣಲಿ ಹೊಗೆ ನಾಭಿ ಮೂಲದ...

ಮಂಗಳೂರಿಗೆ ಹೋದನೆಂದರೆ ರಾಮರಾಯನು ಹೊತ್ತಾರೆ ಕದ್ರೆಗೆ ಹೋಗದೆ ಇಲ್ಲ. ಬೆಟ್ಟದಾಚೆಯಿಂದ ಮೂಡಿಬರುವ ಸೂರ್ಯ, ಆ ಎಳೆ ಬಿಸಿಲಲ್ಲಿ ನಗುವ ಬೆಟ್ಟ, ಅದರ ಬುಡದಲ್ಲಿ ತಿಳಿನೀರಿಂದ ಕಂಗೊಳಿಸುವ ಕೆರೆ, ಕೆಳಗೆ ದೇವಸ್ಥಾನ, ಇವುಗಳ ಸೊಬಗನ್ನು ಮನದಣಿಯೆ ಕಂಡು ...

ನಿನ್ನಲ್ಲಿ ಲಕ್ಷೋಪಲಕ್ಷ ಛಾಯೆಗಳುಂಟು ! ಯಾವ ಸತ್ವವ ಬಳಸಿ ನೀನು ಮೂಡಿರುವೆ ? ಬೇರೆಲ್ಲರಿಗು ಒಂದು ಛಾಯೆ ಮಾತ್ರದ ನಂಟು, ನೀನೊ ಎಲ್ಲಾ ಛಾಯೆಗಳಿಗು ನೆಲೆಯಾಗಿರುವೆ. ‘ಅಡೋನಿಸ್’ ನಿಜದಲ್ಲಿ ಬಲು ಚೆಲುವ ಆದರೂ ನಿನ್ನ ರೂಪದ ಸತ್ವಹೀನ ಅನುಕರಣೆ, ರೂಪ...

ಬದಲಾದ ವಾತಾವರಣ ಮದುವೆಯ ನಂತರ ಮನೆಯ ತಿಳಿಯಾದ ವಾತಾವರಣದಲ್ಲಿ ಒಂದು ರೀತಿಯ ಬಿಗಿತ ಕಂಡುಬರುತ್ತಿತ್ತು. ಎಲ್ಲರ ಮೌನದ ಮಧ್ಯೆ ತಮಾಷೆ ಬೆರೆಸುತ್ತಾ ಸುತ್ತುತ್ತಿದ್ದವನು ಅಚಲ ಮಾತ್ರ. ತಾಯಿಯ ಮಾನಸಿಕ ಆಂದೋಲನವನ್ನು ಅರಿಯುವ ವಯಸ್ಸು ಅವನದಲ್ಲ. ತಂದೆ...

ಅರಿಯದವರು ನಾವು ಬಾಳ ಅರಿಯದವರು ತೋರಿಸುವ ಜಗಕೆ ನಾವು ಕೂಡಿ ಬಾಳುವ ನೀತಿಯನು ನನ್ನಲ್ಲಿಯೂ ಏನೂ ಇಲ್ಲ ನಿನ್ನಲ್ಲಿಯೂ ಏನೂ ಇಲ್ಲ ಅನ್ನಕ್ಕಿಂತ ಇನ್ನೊಂದು ದೇವರಿಲ್ಲ ಎನ್ನುವುದು ನಾವುಗಳು ಬಲ್ಲೆವಲ್ಲ ಬನ್ನಿ ಗೆಳೆಯರೆಲ್ಲ ಇಲ್ಲಿ ಬನ್ನಿ ಇದ್ದುದನ್ನ...

ಆ ದಿನ ಮುಂಜಾವಿನಿಂದ ಸಂಜೆಯ ತನಕ ಬೀದಿಯಲ್ಲಿ, ಬಸ್ ನಿಲ್ದಾಣದಲ್ಲಿ, ಆಫೀಸಿನಲ್ಲಿ, ಪೇಟೆಯಲ್ಲಿ ಎಲ್ಲೆಡೆ ಕಂಡ ಹಲವು ಹತ್ತು ಮುಖಗಳು ಎಲ್ಲ ಪರಿಚಿತ! ಕೊನೆಗೆ – ಹೋಗಿ ಮನೆಗೆ ನಿಂತಾಗ ಕನ್ನಡಿಯ ಮುಂದೆ, ಕಂಡ ಪ್ರತಿಬಿಂಬ ಪರಿಚಿತ ತುಂಬ! ಬರಿ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...