ಮೊಳಕೆ ಬಂದ ಬೀಜವೊಂದು ಹುಳುವು ಹತ್ತಿ ಬೆಳೆಯದಾತು ಒಳಗೆ ಒಳಗೆ ಅಳುಕುತಳುತ ಕೊಳೆಯತೊಡಗಿತು. ಮಳೆಯು ಭರನೆ ಬಂದಿತೊಮ್ಮೆ ಹುಳುವು ಅದುರಿ ಬಿದ್ದು ಹೋತು ; ಹಳೆಯ ಜಾಡ್ಯ ಕೊಡವಿ ಬೀಜ ಬೆಳೆಯಲೆಸಗಿತು. ಬೆಳೆಯುತಿದ್ದ ಬೀಜ ಕಂಡು ಹುಳುವು ಹೆದರಿ ಗದರಿಕೊಂಡು ಗಳನೆ ನುಂಗಲೆಂದು ತನ್ನ ಕೈಯ ಚಾಚಿತು. ಬೆಳೆವ ಭರದಲಿದ್ದ...

ನಾನಿನ್ನು ಮರೆತ್ತಿಲ್ಲ. ೧೯೯೭ರಲ್ಲಿ ನಾನು ಹುಬ್ಬಳ್ಳಿಯ ಕೇಂದ್ರಿಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ನರಕ ಅನುಭವಿಸಿದೆ. ಎಲ್ಲೆಲ್ಲೋ ಬರೀ ಲಾಬಿನೇ ನಡೆಸಿರುವಾಗ ನನ್ನಂಥವರ ಪಾಡು ಕೇಳುವವರಾರು? ಇದೇ ಟೈಮಿನಲ್ಲಿ ನನ್ನ ಸಂಶೋಧನಾ...

ಗಂಧ ಕಸ್ತುರಿ ಪುನಗಽ | ಗೌರವ್ವನ | ಕಂದಗ ಧರಿಸಿದರಽ | ಅಂದದ ಬಿಳಿ‌ಎಲಿ ಆಡಕಿ ಕಾಚವು ಸುಣ್ಣ | ಮುಂದ ಮಡೆಚಿನಿಟ್ಟು ಮಲ್ಲಿಽಗಿ ಮಳೆಗರೆದ | ಮತಿಯ ಪಾಲಿಸೊ ಎನಗಽ | ಶ್ರೀಗಣರಾಯಾ | ಸ್ತುತಿಮಾಡಿ ಉಣಿಸುಽವೆನೊ ||೧|| ರಾಜಾನ್ನ ಕೆನೆಮಸರಽ | ರುಚಿಗಾ...

ಮಾಡದಿದ್ದರೆ ಮುನೇಶ್ವರ ಹೆಗಲೇರುವನು ಶನೇಶ್ವರ ಇದು ನಂಬಿಕೆ ಜನರದ್ದು ವರುಷದ ಒಂದು ಹರುಷದ್ದು /ಪ// ಜನಗಳು ಸೇರುವರು ಇಲ್ಲಿ ಬಾಡೂಟದ ಸಂಭ್ರಮದಲ್ಲಿ ಗಟ್ಟಿಯಾಯಿತು ಸಂಬಂಧ ಜಾತ್ರೆ ಪಡೆಯಿತು ಈ ಅಂದ ಮುನೇಶ್ವರನ ಹೆಸರಲ್ಲಿ ಶನೇಶ್ವರನ ಭೀತಿಯಲಿ! ಕು...

ಅಬ್ಬೆಪಾರಿಗಳು ಮನೆವಾಳ್ತನಕಿರಬಾರದು ಕೈ ಹಿಡಿದವಳು ಸೇರಿದಂತೆ ಎಲ್ಲರಿಗೂ ಸದರ ಮನೆ ಅಳಿಯ ಅತ್ತ ಮಗನೂ ಅಲ್ಲದ ಇತ್ತ ನೆಂಟನೂ ಅಲ್ಲದ ಆಟಕ್ಕುಂಟು ಲೆಕ್ಕಕ್ಕಿಲ್ಲದ ಮುಲಾಜು ಬದುಕಿನ ವ್ಯಕ್ತಿ ಸರಿಕಂಡದ್ದ ಮಾಡುವ ಹಾಗಿರಲ್ಲ ಸ್ವತಂತ್ರವಾಗಿ ನಡೆಯೋ ಹಾ...

ಬಜಾರಿನಲ್ಲಿ ಇದ್ದ ಬುದ್ಧ ರಾಮ, ಕೃಷ್ಣ, ಶಿವ, ಗಾಂಧಿ ಅಂಬೇಡ್ಕರ್ ಅವರ ಜೊತೆಗೆ ಕುಳಿತಿದ್ದ. ಮೊಂಡು ಕೈ, ಹರಿದ ಅಂಗವಸ್ತ್ರ…. ಬುದ್ಧ ಹೌದೋ ಅಲ್ಲವೋ ಎಂದು ಅನುಮಾನಿಸುವಷ್ಟು ಚಿಂದಿಯಾಗಿದ್ದ. ಆದರವೇ ಜಾಜ್ವಲ್ಯಮಾನ ಕಣ್ಣುಗಳು ಸೆಳೆದವು, ಹೊ...

ಸುಮೋಗಾಡಿ ಮನೆ ಬಿಡುವಾಗ ಬೆಳಗಿನ ಯಾಮದ ಚುಮುಚುಮು ಚಳಿ ಇನ್ನೂ ಬಿಟ್ಟಿರಲಿಲ್ಲ. ವಿಹಾರ ಹೊರಟಿದ್ದ ನಮಗೆ ಚಳಿಯ ಅನುಭವದ ಸಂಭವವೇ ಇರಲಿಲ್ಲ. ಅಷ್ಟೊಂದು ಉಮೇದಿನಲ್ಲಿದ್ದೆವು. ರಸ್ತೆಯ ಎರಡೂ ಕಡೆಗಳಲ್ಲಿ ಹಸಿರಿನಿಂದ ತೊನೆಯುವ ಹೆಮ್ಮರಗಳನ್ನು ಹಿಂದೆ ...

ಕಛೇರಿ ಎದುರು ಹೆದ್ದಾರಿ ಪಕ್ಕದಲಿ ಇತಿಹಾಸವಿದ್ದ ಮಾಮರವೊಂದು ಬೆಳೆದಿತ್ತು ಆಗಸದೆತ್ತರ; ಚಳಿ ಮಳೆ ಗಾಳಿಗಲುಗದೇ ಸಹಸ್ರಾರು ಜೀವಿಗಳಿಗದು ನೀಡಿತ್ತು ಆಶ್ರಯ, ಹೊರಹಾಕಿದ ಪ್ರಾಣವಾಯುವಿನ ತೂಕ ಅದೆಷ್ಟೋ? ಇದ್ದಕ್ಕಿದ್ದ ಹಾಗೆ ಕನಸಿನಲಿ ಎಲ್ಲೋ ಏಟು ಬಿ...

ಜೀವನದಲ್ಲೇನಿದೆ ಎಲ್ಲಾ ಇದ್ದೂ ಒಂದು ಕ್ಷಣ ಮೈಮರೆತು ನಿಂತು ಕಣ್ಣೆಟಕುವಷ್ಟು ದೂರದವರೆಗೆ ದೃಷ್ಟಿ ಹಾಯಿಸಲು ಬಿಡುವಿಲ್ಲದ ಮೇಲೆ? ಹಸಿರು ಹೊದ್ದ ಮರದ ನೆರಳಲಿ ನಿಂತು ದನಕರು, ಕುರಿಮಂದೆ ಮೇಯುತ್ತಿರುವಷ್ಟು ದೂರದವರೆಗೆ ಕಣ್ಣು ಹಿಗ್ಗಿಸಿ ನೋಡಲು ಬಿ...

ಶಾಂತವಾಗಿರು; ಕ್ರೂರ ಕಾಲ ನನ್ನನ್ನು ಸೆರೆ- ಹಿಡಿದು ಜಾಮೀನಿರದೆ ಕೊಂಡೊಯ್ಯುತಿರುವಾಗ. ಈ ಬರೆಹ ತಾಗಿಕೊಂಡಿದೆ ನನ್ನ ಬಾಳಿಗೆ, ಇರಲಿ ಇದು ನಿನ್ನ ಬಳಿ, ನಿನಗಿತ್ತ ಸ್ಮಾರಕ. ಇವನು ನೋಡುತ್ತಿರಲು ಮೊಳೆಯುವುದು ತಾನಾಗಿ ನಿನಗಾಗಿ ಹರಸಿಟ್ಟ ಮುಡಿಪು ಇ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...