ಕೆಲವರು ಬಯಸುತ್ತಾರೆ
ತಾವು ಇಡುವ
ಪಾದಗಳ ಕೆಳಗೆ
ಇರಬೇಕೆಂದು ರತ್ನಕಂಬಳಿಗಳು
ಅಮೃತ ಶಿಲೆಗಳು
ಡಾಂಬರಿನ
ನಯ ನಾಜೂಕಿನ ರಸ್ತೆಗಳು
ಆದರೆ
ತಮ್ಮ ಕಾಲುಗಳ ಕೆಳಗೆ
ಹಿಮಾಲಯ ಪರ್‍ವತಗಳ ಶಿಖರಗಳೆ
ಇರಬೇಕೆಂದು ಮೆಟ್ಟಿದವರು
ತೇನಸಿಂಗ್, ಹಿಲೇರಿಗಳು
*****