Home / ಕವನ / ಕವಿತೆ / ಹಬ್ಬ

ಹಬ್ಬ

ಹುಟ್ಟೂರು
ಹೆತ್ತವರು, ಒಡಹುಟ್ಟಿದವರು, ನೆಂಟರಿಷ್ಟರ ಬಗ್ಗೆ ಮಾತಾಡುವಾಗ
ಹೊಟ್ಟೆ ತುಂಬಿದಂತಾಗುತ್ತೆ
ಹಿಟ್ಟು ಕಾರವನ್ನೇ ತಿಂದರೂ
ಒಂದ್ಸಾರಿ ನೋಡಿಕೊಂಡು ಬರಬೇಕೆನಿಸುತ್ತೆ
ಯಾವ ಕಾಲನೂ ಹೇಳಬೇಡ ಮಹಾನವಮಿ ಕಾಲವೊಂದು
ಬಿಟ್ಟ ಮೇಲೆ

ದಿಣ್ಣೆ, ದೀಪಾಂತರ ತುಂಬಾ
ಆಸೆಯೆ ಆಕಾರ ತಳೆದಂತೆ ಬೆಳೆದ
ಹೂಪೀಸು, ವಡೆತಲೆಯ ಫಲ ಪೈರು
ಗಾಳಿಗೆ ತೊನೆದಾಡುತ್ತಿರುವಾಗ
ಬಯಲಾದ ಬಯಲೆಲ್ಲಾ ಸಂಗೀತ ನೃತ್ಯದಲ್ಲಿ ತೇಲುವುದು,

ದೊಡ್ಡವಳು ತಾಯಿ ಗಂಗಮ್ಮ ಕೃಪೆಮಾಡಿ ಬಂದು
ನೆರೆ ತೊರೆ ಹಳ್ಳ ಕೊಳ್ಳಗಳಲ್ಲಿ ಅತ್ತಿತ್ತ ಆಡ್ಡಾಡುವ
ಕೆರೆ ಕಟ್ಟೆಗಳಲ್ಲಿ ವಿಶ್ರಾಂತಿ ಪಡೆಯುವ
ಬೆಟ್ಟ ಗುಡ್ಡಗಳ ನೆತ್ತಿಯನ್ನು ಜಾರುಬಂಡಿ ಮಾಡಿಕೊಂಡು
ಆಟವಾಡುವ ದೃಶ್ಯ
ಕಣ್ಣಿಗೆ ಬೀಳಲು ಪುಣ್ಯ ಮಾಡಿರಬೇಕು.
ಸರ್ತಿ ಸರ್ತಿಗೆ ಬರುವ ಈ ಹಿರಿಯರ ಹಬ್ಬಕ್ಕೆ ಕರೆಯದಿದ್ದರೂ
ನಿಲ್ಲಲಾರೆ

ಗಂಡ ಮಕ್ಕಳ ಕೂಡಿಕೊಂಡು
ಪುಟ್ಟ ಮೆರವಣಿಗೆಯಲ್ಲಿ ಸಾಗಿ ಬರುವೆ
ಜೀವನಾ ದ್ರವ್ಯವನು ಕೂಡಿಸಿ ಕೊಳ್ಳುವೆನು
ದೂರದಲ್ಲಿರುವಾಗಲೇ ಕೂನು ಹಿಡಿದ ಚಿಕ್ಕವರು
ಓಡೋಡಿ ಬಂದು
ಅತ್ತೆ, ಮಾವ ಬಂದರೆಂದು ಡಂಗುರ ಸಾರುವುದು
ಹಿರಿಯರು, ಎಲ್ಲರೂ ಬಾಗಿಲಿಗೆ ಬಂದು
ಉಲ್ಲಾಸದ ನಗೆಯಲ್ಲಿ ಸ್ವಾಗತದ ಸೆಳೇವು ನೀಡುವುದು
ಜೀವನದಿ ಮರೆಯಲಾಗದ ಸುಖಾನುಭವವ ತರುವುದು.

ಊಟ ಉಪಚಾರ ಮುಗಿದು
ಎರಡೂ ಕಡೆಯ ಮಕ್ಕಳ ಪ್ರತಿಭಾ ಪಾಠಗಳ ವರದಿಯ ಜೊತೆಜೊತೆಗೆ
ಪರಸ್ಪರ ಸುಖ ಸಂಕಥಾ, ಆಮೋದ ಪ್ರಮೋದದ ನೆರಿಕೆಯಲ್ಲಿ
ಇಣುಕುವಾಗ

ಮಾತಿಗೆ ನೂರು ಮುಖವಾಗಿ
ಸರಿಹೊತ್ತಾದರೂ ಕೊಡುಹ ಮುಗಿಯುವುದಿಲ್ಲ
ಒಬ್ಬೊಬ್ಬರೆ ನೆಂಟರು ಬಂದು ಸೇರಿದ ಹಾಗೆ ಉದ್ದುದ್ದ ಬೆಳೆವುದು
ಹಬ್ಬವೇ ಮುಗಿದು ಊರಿಗೆ ಹೊರಟು ಅರ್ಧ ದಾರಿಗೆ ಬಂದರೂ
ಮುಗಿಯುವ ಲಕ್ಷಣ ಕಣುವುದಿಲ್ಲ.

ಬಿಡುವಾಗಿ ಊರು, ಹೊಲಗಳ ಸುತ್ತ
ಒಂದು ಸುತ್ತು ಹಾಕಿ ಬರುವಾಗ
ಬಾಲ್ಯವು ಮರುಕಳಿಸುವುದು
ಎಲ್ಲಾ ಮುಗಿದು ಹೊರಟು ನಿಂತಾಗ
ಕ್ಷಣ ಕಾಲ
ಎಂದಿನಂತೆ ಕಣ್ಣು ಮಂಜಾಗುವವು.
*****

Tagged:

Leave a Reply

Your email address will not be published. Required fields are marked *

ನೀವು ದೊಡ್ಡ ಪಟ್ಟಣವೊಂದರ ಬಹು ಜನ ನಿಬಿಡ, ವಾಹನ ನಿಬಿಡ ಪ್ರದೇಶದಲ್ಲಿ ರಸ್ತೆ ದಾಟುತ್ತಿದ್ದಿರಿ. ನಿಮಗರಿವಿಲ್ಲದಂತೆ ಸಂಚರಿಸುವ ವಾಹನಗಳ ಬಹು ಚಾಲಾಕಿತನದಲ್ಲಿಯೇ ನಿಮ್ಮ ಸುಪ್ತಮನಸ್ಸಿನ ಪ್ರೇರಣೆಗೆ ಒಳಗಾದಂತೆ ಅದರ ನಿರ್ದೇಶನದಂತೆ ಸುರಕ್ಷಿತವಾಗಿ ರಸ್ತೆಯನ್ನು ದಾಟಿ ಸಮಾಧಾನದ ನಿಟ್ಟ...

ಅವಸಾನಕಾಲದಲ್ಲಿ ಸರ್ವಾಧಿಕಾರಿ ನಂಜರಾಜಯ್ಯನು ಪಶ್ಚಾತ್ತಾಪಪಡುತ್ತ ರಾಜರಿಗೆ “ನನ್ನ ತರುವಾಯ ನನ್ನ ಪದವಿಗೆ ದೇವರಾಜಯ್ಯನ ತಮ್ಮ ಕರಾಚೂರಿ ನಂಜರಾಜಯ್ಯನನ್ನು ನಿಯಮಿಸಿದರೆ ಅನರ್ಥಗಳು ಸಂಭವಿಸುತ್ತವೆ” ಎಂದು ಎಚ್ಚರಿಕೆ ಕೊಟ್ಟನಷ್ಟೆ. ರಾಜರಿಗೆ ಹೆಚ್ಚು ಅಧಿಕಾರವಿಲ್ಲದೆ ದೇ...

ನಾನು ಕೂಡಾ ಕೊಂಚ ಕೊಂಚವಾಗಿ ಸಾಯುತ್ತಿದ್ದೇನೆ ಎಂದು ಆ ಹಣ್ಣು ಮುದುಕನಿಗೆ ಅನಿಸತೊಡಗಿದ್ದೇ ಅವನ ಕೆಲವು ಗೆಳೆಯರು ಸತ್ತಾಗಲೇ. “ತೇಹಿನೋ ದಿವಸಾ ಗತಾಃ”. ಅಂತಹ ಮಧುರ ನೆನಪುಗಳ ದಿನಗಳು ಕಳೆದು ಹೋಗಿ ಎಷ್ಟೋ ದಶಮಾನಗಳು ಅವನೆದುರು ಜೀವಂತವಾಗಿ ಕರಗಿ ಹೋಗಿವೆ. ಅವನು ತನ್ನನ...

೧೭೩೪ರಲ್ಲಿ ಚಾಮರಾಜ ಒಡೆಯರನ್ನು ಹಿಡಿದು ಕಬ್ಬಾಳ ದುರ್ಗಕ್ಕೆ ಕಳುಹಿಸಿ ರಾಜದ್ರೋಹವನ್ನು ಮಾಡಿದವರು ಇಬ್ಬರು ಜ್ಞಾತಿಗಳು-ದಳವಾಯಿ ದೇವರಾಜಯ್ಯ ಮತ್ತು ಸರ್ವಾಧಿಕಾರಿ ನಂಜರಾಜಯ್ಯ. ಬಾಲಕರಾದ ಇಮ್ಮಡಿ ಕೃಷ್ಣರಾಜ ಒಡೆಯರನ್ನು ಪಟ್ಟದಲ್ಲಿ ಕೂರಿಸಿದ ಮೇಲೆ ಈರ್ವರೂ ಪ್ರಧಾನಿಯ ಕೆಲಸದಲ್ಲಿದ್ದ...

ಅಮ್ಮಾ! ಹಾಲಿಗೆ ತೊಡಿ ನೀರ ಕಮ್ಮಿ ಹಾಕೇ, ನೀರ ರಾಶಿ ಕುಡಿತಿದೇ ನಿಮ್ಮೆಮ್ಮೆ ಅಂತೇ ಡೇರಿ ಸಾತಕ್ಕ ದಿನಾ ಹೀಂಯಾಳಿಸ್ತಿದ. ಇಲ್ಲದಿರೆ ನಾ ಹಾಲ ಕುಡುಕೆ ಹೋಗುಲಾ ನೋಡ್ ಅಳುಮುಂಜಿ ಮುಖದಲ್ಲಿ ಪರಿಮಳ ಕೂಗುತ್ತಾ ಬರುವುದ ಕಂಡ ಭವಾನಿ, ಸಾಕ್ ಸುಮ್ನೀರೇ! ನಿನ್ನ ನೋಡೆ ಹೇಳ್ತಿದ ಅದ. ಬಾಯ್ಮು...

ದೊಡ್ಡ ಕೃಷ್ಣರಾಜ ಒಡೆಯರಿಗೆ ಮಕ್ಕಳಿರಲಿಲ್ಲ. ಅವರು ತೀರಿಹೋದ ತರುವಾಯ ಅವರ ಹಿರಿಯರಸಿ ದೇವಾಜಮ್ಮಣ್ಣಿಯವರು ಮುಖ್ಯಾಧಿಕಾರಿಗಳಾಗಿದ್ದ ದಳವಾಯಿ ದೇವರಾಜಯ್ಯ, ಸರ್ವಾಧಿಕಾರಿ ನಂಜರಾಜಯ್ಯಂದಿರನ್ನು ಕರೆಯಿಸಿ “ನಮ್ಮ ಜ್ಞಾತಿಯಾದ ಅಂಕನಹಳ್ಳಿ ದೇವರಾಜೇ ಅರಸಿನವರ ಪುತ್ರ ೨೮ ವರ್ಷ ವಯಸ...