ಕಿಡಿಯೊಂದೆ!
ಅದನು ಸಿಡಿಸುವ ಕೈಯೊಂದೆ!!
ಆದರೆ ಪರಿಣಾಮ –
ಯಾರು ಬಲಿಯಾದರೆ ಏನಂತೆ?
ಊರೇ ಉರಿದರೂ ಏನಂತೆ??

ಸ್ವಾರ್ಥದ ಕಿಚ್ಚು
ಹೊರಗೆ ಮುಖವಾಡ
ಹೆಜ್ಜೆ ಹೆಜ್ಜೆಗೂ ನರಿಯ ನಾಚಿಸುವ
ಅಗಣಿತ ಲೆಕ್ಕಾಚಾರ

ಮಾತಲಿ ಜೇನು
ಕಣ್ಣಲಿ ಹೊಗೆ
ನಾಭಿ ಮೂಲದಲಿ ಹುಟ್ಟುವ ಮಾತಿಗೆ
ಬಿಡುಗಡೆಯಲಿ ಚಮತ್ಕಾರ

ಕುರ್ಚಿಯ ಸೆಳೆವ
ಅಡಿಯಲೆ ತುಳಿವ
ತಂತ್ರ ಕುತಂತ್ರದ ನಟನ ವಿಶಾರದರಿಗೆ
ಖಾದಿಗಳಿಂದಲೂ ತಿರಸ್ಕಾರ
*****