ವಾಗ್ದೇವಿ – ೧೬

ವಾಗ್ದೇವಿ – ೧೬

ಚತುರೋವಾಯದಲ್ಲಿ ಘಟ್ಟಿಗನಾದ ಬಾಲಮುಕುಂದನು ತನ್ನ ಮನ ಸ್ಸಿನ ಬಯಕೆಯಂತೆಯೇ ದ್ವಿಜರೀರ್ವರ ಹಟವು ಪೂರ್ಣವಾದರೆ ಯತಿಯ ಮುಂದಿನ ಅವಸ್ಥೆಯು ಹ್ಯಾಗಾದರೇನೆಂಬ ತಾತ್ಕಾಲದ ಪರಿಗಣನದಿಂದ ಸೂಚಿಸಿದ ಉಪಾಯವು ಬುದ್ಧಿವಂತಿಗೆಯ ಲಕ್ಷಣವೆನ್ನಬಹುದು. ವೇದವ್ಯಾಸ ಉಪಾಧ್ಯನೂ ಭೀಮಾಚಾರ್ಯನೂ ನೃಸಿಂಹಪುರಕ್ಕೆ ತಾಮಸಮಾಡದೆ ಪಯಣವಾದರು. ಅಲ್ಲಿ ಕುಮಾರ ರಾಯನೆಂಬ ವರ್ತಕನ ಮನೆಯತ್ತ ಒಂದು ಕೋಣೆಯನ್ನು ಬಾಡಿಗೆಗೆ ಮಾಡಿಕೊಂಡು ಉಳಕೊಂಡರು. ರಾಜ ಸ್ಥಾನದ ಪ್ರಮುಖ ಉದ್ಯೋಗಸ್ವರ ಗುಣದೋಷಗಳನ್ನೂ ಚಿತ್ರಪ್ರಕೃತಿ ಯನ್ನೂ ಬಲ್ಲವರಿಂದ ವಿಚಾರಿಸಿ ತಿಳುಕೊಂಡು ಪ್ರಧಮದಲ್ಲಿ ಒಬ್ಬ ವಕೀಲನ ಸಹಾಯವನ್ನು ಪಡೆಯುವಗೋಸ್ಟರ ಪರಂತು ಗೋವಿಂದ ಪಂಡಿತನೆಂಬ ಹೆಸರುಹೋದ ವಕೀಲನ ಮನೆಗಭಿಮುಖವಾದರು. ಪುಣ್ಯವತಾತ್‌ ಮನೆಯ ಬಾಗಿಲಲ್ಲಿಯೇ ಗಾಳಿಗೆ ಮೈಯೊಡ್ಡಿ ಕೂತಿರುವ ಪಂಡಿತನನ್ನು ಕಂಡು ನಮಸ್ಕರಿಸಿ ತಾವು ಬಂದ ಉದ್ದೇಶವನ್ನು ಅವನಿಗೆ ತಿಳಿಸಿದರು ದೇವ ಬ್ರಾಹ್ಮಣರ ಮೇಲೆ ಅತಿ ವಿಶ್ವಾಸವುಳ್ಳ ಆ ನ್ಯಾಯಶಾಲಿಯು ಉಭಯ ದ್ವಿಜ ರನ್ನು ಅಧಿಕವಾಗಿ ಉಪಚರಿಸಿ ಅವರ ಆಗಮನದ ಕಾರಣವನ್ನು ವಿಚಾರಿಸಿ ಹೆಚ್ಚು ಸಮಯದವರೆಗೂ ಚೆನ್ನಾಗಿ ಆಲೋಚನೆ ಮಾಡಿದ ಬಳಕ ಅವರ ಕೆಲಸವನ್ನು ತಾನು ಸುಧಾರಿಸಿಕೊಡುವೆನೆಂದು ಭರವನೆ ಕೊಟ್ಟು ಅವರಿಗೆ ಮರುದಿವಸ ಮುಂಜಾನೆ ಬರಹೇಳಿದನು. ಅವನ ಅನುಜ್ಞೆಯನ್ನನುಸರಿಸಿ ಮರುದಿನ ಬೆಳಿಗ್ಗೆ ವೇದವ್ಯಾಸನೂ ಭೀಮಾಚಾರ್ಯನೂ ವಕೀಲನನ್ನು ಕಂಡಾಗ ಅವನು ಬರೆದಿಟ್ಟ ಅರ್ಜಿಯ ಮಸೂದೆಯನ್ನು ಭೀಮಾಚಾರ್ಯ ನಿಗೆ ತೋರಿಸಿದನು.

ಆಚಾರ್ಯನು ಮಾತಿನಲ್ಲಿ ಅತಿ ಚಪಲನೂ ಮಿಶಶ್ಲಾಘನಾಯುಕ್ತ ವಾದ ಕರ್ಣಮಧುರ ಭಾಷಣದಿಂದ ಅತಿ ಕಠಿಣ ಹೃದಯವನ್ನಾದರೂ ದ್ರವಿಸುವ ಶಕ್ತಿಯುಳ್ಳವನಾದುದರಿಂದ ಆ ಮಸೂದೆಯನ್ನು ಅಡಿಗಡಿಗೆ ಓದಿ ನೋಡುತ್ತಾ “ವ್ಹಾ! ವ್ಹಾ! ಈ ವಕೀಲ ಘಟ್ಟಿಗ, ಇವನನ್ನಗಲಬಾರದು” ಎಂದು ವಕೀಲನು ಕೇಳುವಷ್ಟು ಮೆಲ್ಲಗೆ ವೇದವ್ಯಾಸನ ಕಿವಿಯಲ್ಲಿ ಹೇಳ ದನು. ಆ ಮಾತು ಕೇಳುತ್ತಲೇ ಸ್ತೌತ್ಯ ಪ್ರಿಯನಾದ ಪರಂತು ಗೋವಿಂದ ಪಂಡಿತನು, “ಧರಾಮರರೇ! ತಮ್ಮ ಆಶೀರ್ವಾದವನ್ನು ಮಾತ್ರವೇ ನಾನು ಬಯಸುವವನಲ್ಲದೆ ತಮ್ಮ ದುಡ್ಡಿನ ಮೇಲೆ ಅಭಿಲಾಷೆಯುಳ್ಳವನಲ್ಲ ಬಲ್ಲಿರೋ! ತಾವು ಕೈಕೊಂಡ ಕಾರ್ಯವು ಕೊಳೆತ ಬೆರಳನ್ನು ಕೊಯ್ಯುವ ವಿಚಾರವಾಗಿದೆ. ಅದಕ್ಕೆ ನನ್ನಿಂದ ಕೂಡುವಷ್ಟು ಸಹಾಯಮಾಡಿ ಕೀರ್ತಿ ಪಡೆಯ ಬೇಕೆಂಬುದೊಂದೇ ಕುತೂಹಲವಲ್ಲದೆ ಮತ್ತೊಂದು ಆಶೆ ನನಗಿಲ್ಲ.

ನೋಡಿರಿ! ತಾವುಗರು ಇನ್ನುಮುಂದೆ ಭೋಜನಕ್ಕು ನಮ್ಮಲ್ಲಿಯೇ ಇದ್ದು ಕೊಳ್ಳಿ. ಬಿಡಾರ ಮತ್ತೊಂದು ಮಗುದೊಂದು ಯಾಕೆ?” ಎಂದನು. ತಾವು ಹೊರಟ ಮುಹೂರ್ತದ ಬಲದಿಂದ ತಮಗೆ ಇಷ್ಟು ಸುಲಭವಾಗಿ ಎಲ್ಲವು ಸಾನುಕೂಲವಾಗುವದಾಯಿತೆಂದು ಹಾರುವನಿಬ್ಬಲೂ ಒಂದು ಪುರುಷ ಪ್ರಮಾಣ ಏರಿದರು. ಪ್ರತ್ಯೇಕ ಒಂದು ಬಿಡಾರದ ಯೋಚನೆ ಇನ್ಯಾಕೆ? ಖರ್ಚು ಉಳಿಯಿತು. ಧರ್ಮಕ್ಕೆ ವಕಾಲತ್ತು ಮಾಡಲಿಕ್ಕೂ ಪುಣ್ಯಾತ್ಮನು ಒಪ್ಪಿದ್ದಾನೆ. ಇನ್ನು ರಾಜಾಸಾಹೇಬರಂತೆ ತಿರುಗುವಾ ಕೇಳುವವನ್ಯಾರು? ನಾನು ನಿನ್ನ ಸಂಗಡ ಹೊರಟ ಕಾರಣ ನಿನಗ ಇಷ್ಟು ಅನುಕೂಲ ದೊರೆ ಕಿತು. ಇಲ್ಲವಾದರೆ ಎನ್ನ ಹೆಸರಿಗೆ ಇನ್ನೂ ಕೆಲವು ಗುಣಸಾನಗಳನ್ನು ಕೂಡಿಸಿಕೊಳ್ಳಬಹುದಿತ್ತು” ಎಂದು. ಭೀಮಾಚಾರ್ಯನು ವೇದವ್ಯಾಸ ಉಪಾಧ್ಯನನ್ನು ಚೇಷ್ಟೆಮಾಡಿನನು . “ತಮ್ಮ ಮಾತು ಸತ್ಯವೇ” ಎಂದು ವೇದವ್ಯಾಸನು ಉತ್ತರಕೊಟ್ಟು ಸುಮ್ಮನಾದನು. ಅವನ ವ.ನಸ್ಸಿನ ಭಾವನೆ ಭೀಮಾಚಾರ್ಯನಮೇಲೆ ಶುದ್ಧವಾಗಿರಲ್ಲ. ಈ ಹರ್ಕುಬಾಯಿ ಬ್ರಾಹ್ಮ ಣನು ತನಗೇ ಗಂಟುಬಿದ್ದನೆಂಬ ಚಿಂತೆಯನ್ನು ಬಯಲುಪಡಿಸದೆ ಸಹಿಸಿ ಕೊಂಡನು.

ವಸಂತನಗರದ ದರ್ಬಾರಿನ ವರ್ಣನೆಯನ್ನು ಸ್ವಲ್ಪ ಮಟ್ಟಿಗಾದರೂ ಇಲ್ಲಿ ಮಾಡಬೇಕಾಗಿದೆ. ಶ್ರೀಮದ್‌ ವೀರನರಸಿಂಹಭೂಪತಿಯು ಶ್ರೇಷ್ಟ ಮತಿಯುಳ್ಳವನು. ನ್ಯಾಯ ಪರಿಪಾಲನೆಯಲ್ಲಿ ತಾನೇ ಬಹು ಸೂಕ್ಷ್ಮವಿಚಾರ ಮಾಡುವ ಸದ್ಗುಣವಂತನು. ಆದರೂ ತನ್ನ ಕೈಕೆಳಗಿನ ಅಹಲ್ಲೆಕಾರರ ಅಭಿಪ್ರಾಯವನ್ನು ತಿಳುಕೊಳ್ಳುವ ಪೂರ್ವಪದ್ಧತಿಯನ್ನು ಯಾವ ಸಂಗತಿ ಯಲ್ಲಾದರೂ ಬಿಟ್ಟುಬಿಡುವವನಲ್ಲ. ಅವನು ಜನಮತದವನಾದಾಗ್ಯೂ ಅನ್ಯ ಮತಸ್ಥರ ಮೇಲೆ ಎಷ್ಟಾದರೂ ದ್ವೇಷವಿಡದೆ ಅವರನ್ನು ಬಹು ಅನು ರಾಗದಿಂದ ಪಾಲಿಸುವನು. ಆದಿಕೇಶವ ರಾವ್‌ ಎಂಬ ಹಿರೀದಿವಾನ, ಚನ್ನ ಬಸವಯ್ಯನೆಂಬ ಕಿರೀ ದಿವಾನ ಹೀಗೆ ಇಬ್ಬರು ಪ್ರಧಾನಿಗಳು ದಿನವಹಿ ದರ ಬಾರಿನಲ್ಲಿ ಹಾಜರಿರುವರು. ಹಿರೀ ದಿನಾನನು ಒಳ್ಳೆ ಕುಶಲ ಬುದ್ಧಿಯುಳ್ಳ ವನು ಮತ್ತು ಮಿತಭಾಷಿ. ಕಿರೀ ದಿನಾವನು ಸ್ವಲ್ಫ ಮಂದಬುದ್ಧಿಯುಳ್ಳ ಅಧಿಕ ಪ್ರಸಂಗಿ, ಇವರಿಬರೂ ಸ್ವಮತಾಭಿಮಾನಿಗಳಾಗಿ ಅನ್ಯ ಮತದ್ವೇಷಿ ಗಳು. ಆದಿಕೇಳವರಾಯನು ಕಡುವೈಷ್ಣವನು: ಶಿವನಾಮೋಚ್ಛಾರಣ ಅವನ ಕಿವಿಗೆ ಬಿದ್ದೊಡನೆ ತನ್ನ ಎರಡೂ ಕಿವಿಗಳಿಗೂ ಬೆರಳುಗಳನ್ನು ಸೇರಿಸಿಬಿಟ್ಟು “ರಾಮ ರಾಮ” ಎನ್ನುವನು, ರಾಮನಾಮೋಚ್ಚಾರವು ಚನ್ನಬಸವಯ್ಯನ ಶ್ರೋತೇಂದ್ರಿಯಕ್ಕೆ ಬೀಳುವ ಮೊದಲೇ ಅವನು ಕವಿಗಳನ್ನು ಬೆರಳುಗಳಿಂದ ಮುಚ್ಚಿಕೊಂಡು “ಶಿವಾ ಶಿವಾ” ಎನ್ನುವನು.

ಹಿರೀ ದಿವಾನರಿಗೆ ಮೀರಮುನಷಿ ಅಶ್ವತ್ಥ ನಾರಾಯಣರಾಯ. ಕಿರೀ ದಿವಾನರ ದೊಡ್ಡ ಮುನಷಿ ವೀರಭದ್ರಯ್ಯ. ಅವರಿಬ್ಬರಿಗೂ ತಮ್ಮ ಧನಿ ಗಳಂತೆ ಅನ್ಯ ಮತದ್ವೇಷ ಪುಷ್ಪಳವಿರುವುದು. ರಾಜಸ್ಥಾನದಲ್ಲಿ ನಡೆಯುವ ಪ್ರತಿ ಚರ್ಚೆಯಲ್ಲಿಯೂ ಅದಿಯಲ್ಲಿ ಕಿರೀ ಪ್ರಧಾನಿಯ ಅಭಿಪ್ರಾಯ, ಕಡೆಗೆ ಹಿರೀ ಪ್ರಧಾನಿಯ ಆಲೋಚನೆ ತಕ್ಕೊಂಡು ಅರಸನು ಅವೆರಡನ್ನು ಚೆನ್ನಾಗಿ ಮಧಿಸಿ ನೋಡಿ ತೀರ್ಪನ್ನು ನುಡಿಯುವ ವಾಡಿಕೆಯು ನಡೆಯುವದು. ಹೆಚ್ಚಾಗಿ ಮತ ಸಂಬಂಧವಾದ ವಿವಾದಗಳಲ್ಲಿ ರಾಜನು ಸ್ವಯಂಜ್ಯೋತಿ ಗರುವರ್ಯನೆಂಬ ಅಭಿದಾನವುಳ್ಳ. ಸ್ವಜಾತಿಸನ್ಯಾಸಿಯನ್ನು ಕರೆಸಿ ಅರ್ಧಾಸನ ಕೊಟ್ಟು ಕೂರಿಸಿ ಭಯಭಕ್ತಿಯಿಂದ ಅವರ ಅಭಿಪ್ರಾಯವನ್ನು ಕೇಳು ವದಿತ್ತು. ಆದರೆ ಅವರ ಅಭಿಪ್ರಾಯವು ಮನಸ್ಸಿಗೆ ಸರಿಕಾಣದೆ ಹೋದರೆ ಅದನ್ನು ತೃಜಿಸಿ ಅರಸನು ಯುಕ್ತಕಂಡಂತೆ ತೀರ್ಮಾನಿಸುವಷ್ಟು ನಿರ್ಧಾರ ವುಳ್ಳವನಾದ ಕಾರಣ ಗುರುವರ್ಮನು ಅನೇಕಸಾರಿ ತನ್ನ ಖಂಡಿತವಾದ ಸಿದ್ಧಾಂತವನ್ನು ತಿಳಿಸದೆ “ಜಿನಧರ್ಮವನ್ನು ಪಾಲಿಸು” ಎಂದು ಹೇಳಿಮೌನ ತಾಳುವನು. ಆ ಮಾತು ಅವನ ಬಾಯಿಯಿಂದ ಬಿದ್ದಾಕ್ಷಣ ಸಿಂಹಾಸನದ ಎದುರು ಇರುವ ದೊಡ್ಡಘಂಟೆಯ ಸೂತ್ರವನ್ನು ಜಮೇದಾರ ರಾಮಸಿಂಗನು ಎಳೆಯುವನು. ಆಗ ಘಂಟೆಯು ಗಂಭೀರವಾದ ಸ್ವರವನ್ನುಂಟುಮಾಡು ವದು. ಕೂಡಲೇ ಕ್ಷಿತೀರನು ತೀರ್ಪು ವಿಧಿಸುವನು. ಅದರ ಪ್ರವರ್ತನೆಯು ಚೊಕ್ಕವಾಗಿ ನಡಿಯಲಿಕ್ಕೆ ಬೇಕಾದ ಸಿಬ್ಬಂದಿಯು ಸಿದ್ಧವಿರುತ್ತದೆ. ಒಟ್ಬಿನ ಮೇಲೆ ರಾಜದ್ವಾರದಲ್ಲಿ ನಡೆಯುವ ಆಚಾರ ವಿಚಾರವೆಲ್ಲಾ ಶ್ಲಾಘನೆಗೆ ಯೋಗ್ಯವಾದದ್ದೇ.

ಭೀಮಾಚಾರ್ಯನು ವೇದವ್ಯಾಸ ಉಪಾಧ್ಯನ ಸಂಗಡ ದಿವಾನರ ಹಜೂರು ಕಚೇರಿಯಲ್ಲಿ ಸಂದರ್ಭವಿರುವಷ್ಟರ ಮಟ್ಟಿಗೆ ಕೆಲವು ಉದ್ಯೋಗ ಸ್ಥರ ಭೇಟಮಾಡಿ ತಮ್ಮ ಸಂಕಷ್ಟಗಳ ಭಾರವನ್ನು ಮೆಲ್ಲಗೆ ತಿಳಿಸಿದಾಗ ತಮ್ಮಿಂದಾಗುವ ಸಹಾಯ ಮಾಡುವೆವೆಂದು ಆವರು ಧೈರ್ಯಕೊಟ್ಟರು.

ದಿವಾನರ ಮನೆಗಳಿಗೆ ಹೋಗಿ ಅವರನ್ನು ಕಾಣುವುದು ಅಥವಾ ಬೇರೆಯವರ ಪರಮುಖ ತಮ್ಮ ಬಯಕೆಯ ಕುರಿತು ಪ್ರಸ್ತಾಪಮಾಡಿಸುವುದು. ಕಾರ್ಯ ಸಾಧನೆಗೆ ಪ್ರತಿಕೂಲವಾದ್ದೆಂದು ತಿಳಿದು ಅಂಧಾ ವಕ್ರಮಾರ್ಗವನ್ನು ಬಿಟ್ಟು ವಕೀಲನ ಬುದ್ಧಿವಂತಿಗೆ ಮೇಲೆಯೇ ವಿಶ್ವಾಸವಿಟ್ಟುಕೊಂಡಿದ್ದರು. ವಕೀಲನು ಮಾಡಿದ ಮಸೂದೆಯ ನಕಲು ಬರದು ಅದಕ್ಕೆ ಆ ರಾಜ್ಯದಲ್ಲಿ ವಾಡಿಕೆ ಯಿರುವ ದರ್ಬಾರಿನ ರಸ ಚೀಟುಗಳನ್ನು ಅಂಟಿಸಿ ಅದಕ್ಕೆ ವೇದವ್ಯಾಸ ಉಪಾಧ್ಯನು ಇಬ್ಬರು ಗೃಹಸ್ಥರ ಸಾಕ್ಷಿಸಮೇತ ತನ್ನ ಸಹಿಯನ್ನು ಮಾಡಿದ ಬಳಿಕ ವಕಾಲತು ಸಹಿತ ಓಲಗ ಶಾಲೆಯ ಮುಂದುಗಡೆ ಇರುವ ಪೆಟ್ಟಿಗೆ ಯಲ್ಲಿ ಹಾಕಿದನು. ಅದು ಅದೇ ಸಾಯಂಕಾಲ ಅರ್ಜಿಗುಮಾಸ್ತ ದಾಮೋ ದರ ಪಂತನ ಕೈವಶವಾಯಿತು. ಈತನ ಸ್ನೇಹವನ್ನು ಭೀಮಾಚಾರ್ಯನು ಮೊದಲೇ ಮಾಡಿಕೊಂಡಿದ್ದನು. ಅವನು ಮರೆಯದೆ ಈ ಅರ್ಜಿಯು ಬೇಗನೆ ಸುನಾವಣಿಯಾಗುವ ಹಾಗಿನ ಉಪಾಯ ವರ್ತಿಸಿ ಅವರ ಪರಾಮರ್ಶಕ್ಕೆ ನಿಶ್ಚಯಿಸಿದ ದಿವಸ ಹಗಲು ಎರಡು ತಾಸಿಗೆ ಹಾಜರಾಗಬೇಕೆಂಬಾಜ್ಞೆ ಇರುವ ಇಸ್ತಿಹಾರನ್ನು ವೇದವ್ಯಾಸ ಉಪಾಧ್ಯನ ವಕೀಲನಿಗೆ ಮುಟ್ಟಿಸಿದನು.

ನಿಯಮಿತ ದಿನ ಭೀಮಾಚಾರ್ಯನೂ ವೇದವ್ಯಾಸ ಉಪಾಧ್ಯನೂ ವಕೀಲನ ಸಂಗಡ ರಾಜಸ್ಥಾನಕ್ಕೆ ಹೋದರು ಅರಸನು ಕ್ಲಪ್ತ ಸಮಯಕ್ಕೆ ವಾಡಿಕೆಯಾದ ಸಪರಿವಾರ ಸಮೇತ ಓಲಗ ಶಾಲೆಗೆ ಪ್ರವೇಶಿಸಿ ಸಿಂಹಾಸನ ದಲ್ಲಿ ಕುಳಿತುಕೊಂಡಾಕ್ಷಣ ಸರ್ವರೂ ಎದ್ದುನಿಂತು ನಮನಮಾಡಿ ಕೂರ ಬಹುದೆಂದು ಕೈ ಸಂಜ್ಞೆಯಿಂದ ರಾಜಾಜ್ಞೆಯಾದ ಬಳಿಕ ತಮ್ಮ ತಮ್ಮ ಸ್ಥಾನಕ್ಕೆಹೋದರು. ವೇದವ್ಯಾಸನ ಅರ್ಜಿಯು ಮತಸಂಬಂಧವಾದ ವಿವಾದ ವಾಗಿರುವುದರಿಂದ ಅದನ್ನು ತೀರಿಸುವ ಕಾಲದಲ್ಲಿ ರಾಜನ ಸ್ವಜಾತಿಗುರು ವರ್ಯರಿರಬೇಕಾದ್ದು ಪೂರ್ವಕಟ್ಟಳೆಯ ಪ್ರಕಾರ ಅಗತ್ಯವಾಯಿತು. ಸ್ವಯಂ ಜ್ಯೋತಿ ಗುರುವರ್ಯರಿಗೆ ಮುಂದಾಗಿ ದಿವಾನರ ಕಚೇರಿಯಿಂದ ಸೂಚನೆ ಕೊಟ್ಟಿರುತಿತ್ತು. ಅದಕ್ಕನುಗುಣವಾಗಿ ಗುರುವರ್ಯರು ತಮ್ಮ ಬಿರುದಾವಳಿ ಸಮೇತ ಓಲಗ ಶಾಲೆಗೆ ಬಂದರು. ಎಲ್ಲರೂ ಎದ್ದುನಿಂತು ಅವರಿಗೆ ಯಥೋ ಚಿತ ಅಭಿವಂದನೆಮಾಡಿದರು. ರಾಜನು ದಂಡಪ್ರಣಾಮಮಾಡಿ ಗುರುವಿಗೆ ಕೈ ಕೊಟ್ಟು ಅರ್ಧಾಸನವನನ್ನಿತ್ತನು. ಉಭಯತರೂ ಕೊಂಚಹೊತ್ತು ಪರಸ್ಪರ ಯೋಗಕ್ಷೇಮವನ್ನು ಕುರಿತು ಪ್ರಶ್ನೋತ್ತರಮಾಡಿದ ಮೇಲೆ ಅಂದು ನೇಮಿಸಲ್ಪಟ್ಟ ಕೆಲಸದ ವಿನಿಯೋಗಕ್ಕೆ ಮನಸ್ಸುಕೊಟ್ಟರು.

ಜಮೇದಾರ ರಾಮಸಿಂಗನು ‘ಎದ್ದಾಸ ಉಪಾದಿ, ಎದ್ದಾಸ ಉಪಾದಿ ಎದ್ವಾಸ ಉಪಾದಿ ಎಂದು ಮೂರಾವರ್ತಿ ಒದರಿದನು. ವೇದವ್ಯಾಸ ಉಪಾ ಧ್ಯನು ಆಗ್ಯೆ ಕೋಣನಂತೆ ಒಂದು ಮೂಲೆಯಲ್ಲಿ ನಿದ್ರಾವಸ್ಥೆಯಲ್ಲಿ ಬಿದ್ದು ಕೊಂಡಿದ್ದನು. ಭೀಮಾಚಾರ್ಯನು ಶೀಘ್ರ ಅವನನ್ನು ಎಬ್ಬಿಸಿ “ಎ ಖೋಡಿ ನಿನ್ನವಾಲೆ ಕಳೀತು! ಮೂರಾವರ್ತಿ ಕರೆದರೂ ಸುಟ್ಟ ನಿದ್ರೆ ನಿನಗೆ ಇನ್ನೂ ಕಾಡುತ್ತದೆಯೇ? ಬಾ ಎಂದು ಗದರಿಸಲು, ವೇದವ್ಯಾಸನು ನಾರಾಯಣ ಸ್ಮರಣೆ ಪುರಸ್ಸರ ಕಣ್ಣುಗಳನ್ನು ತಿಕ್ಕಿಕೊಳ್ಳುತ್ತಾ ಅರ್ಜಿದಾರರು ನಿಂತು ಕೊಳ್ಳುವ ಸ್ಟಾನಕ್ಕೆ ಒಂದು ರಾಜನಿಗೆ ಸಲಾಂ ಕೊಟ್ಟನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಾಧನೆ
Next post ಸೂರ್ಯ ಅಪೂರ್ಣ

ಸಣ್ಣ ಕತೆ

  • ಪ್ರಥಮ ದರ್ಶನದ ಪ್ರೇಮ

    ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಕ್ಷಮೆ

    ಸುಂದರರಾಜ್ ಬೆಂಗಳೂರಿನಲ್ಲಿಯೇ ಹುಟ್ಟಿಬೆಳೆದವನು. ಹಾಗಾಗಿ ಅವನು ಕನ್ನಡ ಮಾಧ್ಯಮದಲ್ಲಿಯೇ ವಿಧ್ಯಾಭ್ಯಾಸ ಮಾಡಿ ಮುಂದೆ ಕಾಲೇಜಿನ ದಿನಗಳಲ್ಲಿ ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ್ದ. ತನ್ನ ಮಾತೃ ಭಾಷೆಯಾದ ತಮಿಳು ಸಾಧಾರಣವಾಗಿ… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

cheap jordans|wholesale air max|wholesale jordans|wholesale jewelry|wholesale jerseys