ಸೂರ್ಯ ಅಪೂರ್ಣ

ಸೂರ್ಯ ಅಪೂರ್ಣ ಚಂದ್ರ ಅಪೂರ್ಣ
ತಾರಾಗಣ ಅಪೂರ್ಣ
ಗಗನ ಅಪೂರ್ಣ ಭೂಮಿ ಅಪೂರ್ಣ
ವಾರಿಧಿಯು ಅಪೂರ್ಣ

ಭೂತ ಅಪೂರ್ಣ ಭವಿಷ್ಯ ಅಪೂರ್ಣ
ವರ್ತಮಾನ ಅಪೂರ್ಣ
ಅರಿವು ಅಪೂರ್ಣ ಆಯುಸ್ಸು ಅಪೂರ್ಣ
ಯುಗ ಯುಗಾದಿ ಅಪೂರ್ಣ

ಮಾತು ಅಪೂರ್ಣ ಮೌನ ಅಪೂರ್ಣ
ಶಬ್ದಾರ್ಥ ಅಪೂರ್ಣ
ದೃಶ್ಯ ಅಪೂರ್ಣ ಶ್ರವಣ ಅಪೂರ್ಣ
ಕಾರ್ಯಕಾರಣ ಅಪೂರ್ಣ

ತಾಳ ಅಪೂರ್ಣ ನರ್ತನ ಅಪೂರ್ಣ
ಈ ರಾತ್ರಿ ಬಹಳ ಅಪೂರ್ಣ
ಕಲ್ಪನೆ ಅಪೂರ್ಣ ಕಾವ್ಯ ಅಪೂರ್ಣ
ಭವ ಭವಾವಳಿ ಅಪೂರ್ಣ

ಕತೆ ಅಪೂರ್ಣ ನಾಟಕ ಅಪೂರ್ಣ
ಈ ಮಾಯಾಜಾಲ ಅಪೂರ್ಣ
ಹಗಲು ಅಪೂರ್ಣ ಇರುಳು ಅಪೂರ್ಣ
ಸಂಜೆ ಮುಂಜಾನೆ ಅಪೂರ್ಣ

ನಾ ಅಪೂರ್ಣ ನೀ ಅಪೂರ್ಣ
ಅವನು ಅವಳೆಲ್ಲ ಅಪೂರ್ಣ
ಪೂರ್ಣದೊಳಗೆ ಮಾತ್ರವೆ ಪೂರ್ಣ
ಅದು ಒಂದೆ ಅರ್ಥ ಪೂರ್ಣ
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವಾಗ್ದೇವಿ – ೧೬
Next post ಅರಮನೆಯ ಒಸಗೆ

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಡಿಪೋದೊಳಗಣ ಕಿಚ್ಚು…

    ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…