ಎಳೆತನದಿನಿ೦ದುವರೆಗೀ ಜಗದ ಬೆರಗ ನಾ- ನಳಿಯದಂತಿರಿಸಿಹವು ವಸ್ತು ವ್ಯಕ್ತಿ ಅಲ್ಪವಿವು ಸಾಮಾನ್ಯವೆನೆ ಪ್ರಕಟಗೈಯುತ್ತ ತಮ್ಮತುಲ ಸುಖದುಃಖವೀವ ಶಕ್ತಿ. ತನಗೆ ತನ್ನರಿವಷ್ಟೆ; ಮಿಕ್ಕುದರ ತಿಳಿವೆಲ್ಲ ಭ್ರಮೆಯೆನಿಸುವೀ ತೋರ್ಕೆಯರಿವರಾರು? ನೆಚ್ಚಿದರ ವಂಚಿಸುವ ವಿಷಯಗಳ ಸಂಚಿನೊಳು ಮುದದ ಹದುಳವ ಭವದಿ ಪಡೆವರಾರು? ಅದರ...

ಒಂದು ದಿನ ಪದ್ಮ ನಮ್ಮನೆಗೆ ಬಂದಿದ್ದಳು. “ಏನೋ ಮೋಹನ ಹೇಗಿದ್ದೀಯ” ಎಂದಳು. ಅವಳ ಧ್ವನಿಯಲ್ಲಿ ಮೊದಲಿನ ಲವಲವಿಕೆ ಇರಲಿಲ್ಲ. ನನ್ನ ಜೀವ ಚುರು ಗುಟ್ಟಿತು. ಅವಳು ಮುಂಚಿನ ಪದ್ಮಳಾಗಿರಲಿಲ್ಲ. ಕೃಶಳಾಗಿದ್ದಳು. ಕಾಂತಿಹೀನ ಕಣ್ಣುಗಳಿಂದ ಕ...

ಕೀಟ್ಸ್ ಹೇಳಿದ್ದು ಸರಿ ಒದರಿತು ಕೈಲಿದ್ದ ಪುಸ್ತಕದ ಗರಿ ಕವಿತೆಯ ಹಾಳೆಗಳು ಕೈ ಬದಲಾಗುತ್ತಿದ್ದವು ಮೊದಮೊದಲು ಅಭಿಪ್ರಾಯ ಚರ್ಚೆ ಸಲಹೆ ತಿದ್ದು ಎಲ್ಲ ಕೇಳುತ್ತಿತ್ತು ಕವಿತೆಯ ಸಾಲು, ಈಗ ಕಣ್ಣು ಮುಚ್ಚಿ ಕುಳಿತಿದೆ ಸಿದ್ಧ ಮಾದರಿ ಸ್ವಯಂಭೂ ನಾನು ಆವ...

ಯಾರ ಪ್ರತಿಭೆಗೆ ಸ್ಫೂರ್ತಿ ಚಿತ್ರಸ್ಥ ರೂಪಸಿಯೊ, ಸೂರ್ಯ ಶಶಿ ಇಳೆ ಕಡಲು ಚೈತ್ರ ಪುಷ್ಪಗಳನ್ನು ಸ್ವರ್ಗವನ್ನೂ ಯಾರು ಬಣ್ಣನೆಗೆ ಕರೆವರೋ, ಸ್ವರ್ಗ ಬಳಸಿರುವ ಅಪರೂಪ ವಸ್ತುಗಳನ್ನು ತಾವು ಸ್ತುತಿಸುವ ಚೆಲುವಿನೊಡನೆ ಹೋಲಿಕೆ ಮಾಡಿ ಘನಜೋಡಿಗಳ ಯಾರು ಹೆ...

ಹಸ್ತಿನೆಯನವ ಬಿಟ್ಟನೇತಕೆ ಅವಳ ಬಗ್ಗೆ ಮೊದಲ ಸುದ್ದಿ ತಂದದ್ದು ಒಬ್ಬ ವಾರ್ತಾವಾಹಕ. ಅವನಿಗೆ ಹಸ್ತಿನಾವತಿಯಾದ್ಯಂತ ಮಾರುವೇಷದಲ್ಲಿ ಸಂಚರಿಸುತ್ತಿದ್ದ ಗೂಢಚರರು ಸುದ್ದಿಮುಟ್ಟಿಸಿದ್ದರು. ಅದು ಅವಳ ಸ್ವಯಂವರದ ಸುದ್ದಿ. ಆರ್ಯಾವರ್ತದಲ್ಲಿ ಅದೆಷ್ಟೋ ಸ...

ಅಲ್ಲಿದೆ ನನ್ನ ಮನೆ(ಸ್ಮಶಾನ) ಇಲ್ಲಿ ಬಂದಿರುವೆ ಸುಮ್ಮನೆ ನನ್ನ ಮನೆಗೆ ಸಾಗಲು ಇರುವವು ಕಾಣದ ಹಲವು ಮೈಲುಗಲ್ಲುಗಳು ನಾನು ಸಾಗಿ ಬಂದಿರುವೆ ಈವರೆಗೆ ಕೆಲವು ಅನುಭವದ ಮೈಲುಗಳನ್ನು ಮತ್ತಷ್ಟು ಹೊಸ ಮೈಲಿಯನ್ನು ದಾಟಲು ಆರಂಭಿಸಿರುವೆ ಇನ್ನು ನನಗೇನೋ ಸ...

ಕವನ ಬರೆಯಲು ಬಹುಕಾಲ ಕುಳಿತೆ, ಮೂಡು ಬರಲಿಲ್ಲ ಕೈ ಮುಂದೆ ಸಾಗಲಿಲ್ಲ. ದಿನಗಳು, ವಾರಗಳು, ತಿಂಗಳುಗಳು ಕಳೆದರೂ ಕಾವ್ಯ ಸೃಷ್ಟಿಯಾಗಲಿಲ್ಲ. ಕಾವ್ಯ ಕನ್ನಿಕೆಯ ಒಲಿಸಿಕೊಳ್ಳಲು ಕವಿತಾ ಸುಧಾರಸವ ಉಣ ಬಡಿಸಲು ಕಾದಿರುವೆ ನಾನು, ಸಂಸ್ಕೃತಿಯ ಪರಿಚಾರಕ! ಹ...

ಕೆಲವು ವರ್ಷಗಳ ಹಿಂದಿನ ಮಾತು. ನಾನು ಚಿತ್ರದುರ್ಗ ಜಿಲ್ಲೆಯ ಮರಿಕುಂಟೆ ಎಂಬ ಹಳ್ಳಿಗೆ ಬಸ್ಸಿನಲ್ಲಿ ಹೊರಟಿದ್ದೆ. ಲೇಖಕ ತಿಪ್ಪಣ್ಣ ಮರಿಕುಂಟೆ ಅವರು ತಮ್ಮ ಹಳ್ಳಿಯ ಜನರನ್ನುದ್ದೇಶಿಸಿ ಭಾಷಣ ಮತ್ತು ಸಂವಾದಕ್ಕೆ ಕರೆದಿದ್ದರು. ಅದು ರಾತ್ರಿ ಭಾಷಣ. ಹ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...