ಕೀಟ್ಸ್ ಹೇಳಿದ್ದು ಸರಿ
ಒದರಿತು ಕೈಲಿದ್ದ ಪುಸ್ತಕದ ಗರಿ
ಕವಿತೆಯ ಹಾಳೆಗಳು
ಕೈ ಬದಲಾಗುತ್ತಿದ್ದವು ಮೊದಮೊದಲು
ಅಭಿಪ್ರಾಯ ಚರ್ಚೆ ಸಲಹೆ ತಿದ್ದು
ಎಲ್ಲ ಕೇಳುತ್ತಿತ್ತು ಕವಿತೆಯ ಸಾಲು,
ಈಗ ಕಣ್ಣು ಮುಚ್ಚಿ ಕುಳಿತಿದೆ ಸಿದ್ಧ ಮಾದರಿ
ಸ್ವಯಂಭೂ ನಾನು ಆವಿರ್ಭವಿಸಿಯಾಯಿತು
ಯಾರೇಕೆ ತಿದ್ದಬೇಕು ತಾನೇ ಸರಿ
ಆಗ ಅದು ಇನ್ನೂ ಕೇಳಿರದ ಹಾಡು
ಬಲು ಸೊಗಸು ನಿರೀಕ್ಷೆ
ಈಗ ಕೇಳಿಯಾಗಿದೆ ಏನೂ ಉಳಿದಿಲ್ಲ
ಸೇರಿಯಾಯಿತು ಕಕ್ಷೆ
*****