ಯಾರ ಪ್ರತಿಭೆಗೆ ಸ್ಫೂರ್ತಿ ಚಿತ್ರಸ್ಥ ರೂಪಸಿಯೊ,
ಸೂರ್ಯ ಶಶಿ ಇಳೆ ಕಡಲು ಚೈತ್ರ ಪುಷ್ಪಗಳನ್ನು
ಸ್ವರ್ಗವನ್ನೂ ಯಾರು ಬಣ್ಣನೆಗೆ ಕರೆವರೋ,
ಸ್ವರ್ಗ ಬಳಸಿರುವ ಅಪರೂಪ ವಸ್ತುಗಳನ್ನು
ತಾವು ಸ್ತುತಿಸುವ ಚೆಲುವಿನೊಡನೆ ಹೋಲಿಕೆ ಮಾಡಿ
ಘನಜೋಡಿಗಳ ಯಾರು ಹೆಮ್ಮೆಯಲಿ ತರುವರೋ
ಅಂಥ ಕವಿ ನಾನಲ್ಲ. ನಿಜ ಒಲವಿನೊಳಗಾಡಿ
ಬಣ್ಣಿಸುವೆ ಅವನು ಯಾವುದು ನಿಜಕು ಚೆಲುವೋ.
ಆಕಾಶದಲಿ ಭದ್ರ ನೆಲೆ ಹೂಡಿರುವ ಸ್ವರ್ಣ
ದೀಪ್ತಿಗಳ ಪ್ರಭೆ ಅದಕ್ಕೆ ಇಲ್ಲದಿರಬಹುದು;
ಆದರೂ ಇದ ನಂಬಿ, ತಾಯಿಯೊಬ್ಬಳ ಚಿಣ್ಣ
ಎಷ್ಟು ಚೆಲುವೋ ಅಷ್ಟೆ ಚೆಲುವು ನನ್ನೊಲವೂ
ಅಂತೆ ಕಂತೆಗಳ ಥರ ಅವರು ಬರೆದರು ಏನು,
ಹೊಗಳಲಾರೆನು ನಾನು ಮಾರಲೊಲ್ಲದುದನ್ನು
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 21
So is it not with me as with that Muse