ಅಲ್ಲಿದೆ ನನ್ನ ಮನೆ(ಸ್ಮಶಾನ)
ಇಲ್ಲಿ ಬಂದಿರುವೆ ಸುಮ್ಮನೆ
ನನ್ನ ಮನೆಗೆ ಸಾಗಲು ಇರುವವು
ಕಾಣದ ಹಲವು ಮೈಲುಗಲ್ಲುಗಳು
ನಾನು ಸಾಗಿ ಬಂದಿರುವೆ ಈವರೆಗೆ
ಕೆಲವು ಅನುಭವದ ಮೈಲುಗಳನ್ನು
ಮತ್ತಷ್ಟು ಹೊಸ ಮೈಲಿಯನ್ನು ದಾಟಲು
ಆರಂಭಿಸಿರುವೆ ಇನ್ನು
ನನಗೇನೋ ಸಂತೋಷ
ನನ್ನ ಮನೆ ಸಮೀಪಿಸಿತು ಎಂದು
ಅದರಷ್ಟೇ ದುಃಖ ನನ್ನ ನಂಬಿದವರಿಗಿನ್ನು
ಆದರೂ ಅನಿವಾರ್ಯ ಸಾಗಲೇ ಬೇಕು
ಇರುವಷ್ಟು ದಿನ ನಾನು ಬದುಕುವೆನು
ಎಲ್ಲರೊಡನೆ ಹಾಯಾಗಿ
ಪ್ರೀತಿ, ಪ್ರೇಮ, ಸಹೋದರತೆ ಧಾಟಿಯಲ್ಲಿ
ಮಾನವತೆ ಸಹ ಬಾಳ್ವೆಯ ತೋರುತಲಿ
*****


















