ಈಗೀಗ ವಿದೇಶಗಳಲ್ಲಿ ವಿದೇಶಿಯರಲ್ಲಿ ಭವ್ಯ ಭಾರತದ ಬಗ್ಗೆ ಭವ್ಯ ಭಾರತೀಯ ದೇವಾನುದೇವತೆಗಳ ಬಗ್ಗೆ ತುಂಬಾ ತುಂಬಾ ಗೌರವ ಮೂಡುತ್ತಿದೆ. ಇದೆಲ್ಲ ಸ್ವಾಗತಾರ್ಹ.
ಭವ್ಯ ಭಾರತದ ಪ್ರಭಾವ, ಸಂಸ್ಕೃತಿ, ನಾಗರೀಕತೆ ಅಂಥಾದ್ದು! ಇಡೀ ವಿಶ್ವಕ್ಕೆ ಮಾದರಿ ಎಂಬುದರಲ್ಲಿ ಎರಡು ಮಾತಿಲ್ಲ!
ಇದೆಲ್ಲದ್ದಕ್ಕೂ ಪುಷ್ಠಿದಾಯಕವಾಗಿ ಇತ್ತೀಚೆಗೆ ಆಗಸ್ಟ್ ೨೦೧೫ ರ ಮೊದಲ ವಾರದಲ್ಲಿ ನೂಯಾರ್ಕ್‌ನ ಎಂಪೈರ್ ಬಿಲ್ಡಿಂಗ್ ಮೇಲೆ ಕಾಳಿದೇವಿಯ ಪ್ರದರ್ಶನವಿತ್ತು!
ಇಡೀ ನ್ಯೂಯಾರ್ಕಿನ ಜನತೆ ಅದರಲ್ಲೂ ಅಲ್ಲಿ ನೆಲೆಸಿರುವ ಭವ್ಯ ಭಾರತೀಯರೆಲ್ಲ ಈ ಅಭೂತಪೂರ್ವ ದೃಶ್ಯವೊಂದನ್ನು ಕಂಡು ಪುನೀತರಾಗಿದ್ದಾರೆ.
ನ್ಯೂಯಾರ್ಕಿನ ಕಲಾವಿದ ಆಂಡ್ರ್ಯೂ ಜೋನ್ಸ್- ಕಾಳಿದೇವಿಯ ಬೃಹತ್ ಚಿತ್ರ ರಚಿಸಿದ್ದರು. ಅದನ್ನು ಕಟ್ಟಡದ ಉದ್ದಕ್ಕೂ ಡಿಜಿಟಲ್ ಪರದೆಯಲ್ಲಿ ಪ್ರದರ್ಶಿಸಿದ್ದರು.
ಈ ಬೃಹತ್ ಚಿತ್ರ ನೋಡುಗರನ್ನು ಮಂತ್ರ ಮುಗ್ಧರನ್ನಾಗಿಸಿತ್ತು! ಸಾಕ್ಷಾತ್ ಕಾಳಿಕಾದೇವಿಯೇ ಆಕಾಶದಿಂದ ಧರೆಗಿಳಿದು ಬಂದಿದ್ದಳೆಂಬಂತೆ ಎದ್ದು ಕಾಣುತ್ತಿತ್ತು!
ಈಗೀನ ಪ್ರಕೃತಿ ಮಾತೆ ಹಿಂದೆಂದಿಗಿಂತಲೂ ಹೆಚ್ಚೆಚ್ಚು ಮಾನವನ ದುರಾಸೆಗಳಿಗಾಗಿ ನಾನಾ ರೀತಿಯ ಅತ್ಯಾಚಾರ ಅನಾಚಾರ… ಹಿಂಸೆ… ಅವಮಾನ, ಕ್ರೌರ್ಯ, ಬಲಿಗೆ ತುತ್ತಾಗಿ ನಿರಂತರವಾಗಿ ಮಾನವನ ಘೋರ ದಾಳಿಗಳಿಗೆ ಒಳಗಾಗುತ್ತಿರುವಳು. ಇದನ್ನೆ ಕಂಡು ರೋಸಿ ಹೋಗಿ ಇಂದು ಭೂಮಿಯನ್ನು ರಕ್ಷಿಸಲು ತಾಯಿ ಕಾಳಿಕಾ ಮಾತೆಯೇ ಪ್ರಚಂಡಾವತಾರ ಎತ್ತಲು ಕಾಲ ಸನಿಹವಾಗಿದೆಯೆಂಬ ಸಂದೇಹ ಸಾರಲು ಈ ಚಿತ್ರವೆಂದು ಕಲಾವಿದ ಆಂಡ್ರ್ಯೂ ಜೋನ್ಸ್ ತನ್ನ ಅಳಲನ್ನು ಅಂದು ತೋಡಿಕೊಂಡಿರುವನು.
ಇಲ್ಲಿ ನ್ಯೂಯಾರ್ಕಿನ ಜನಪ್ರಿಯ ಎಂಪೈರ್ ಬಿಲ್ಡಿಂಗ್‌ನ ಮೇಲೆ ಆಗಾಗ ಇಂಥ ಹಲವು ಚಿತ್ರಗಳನ್ನು ಪ್ರದರ್ಶಿಸುವುದು ಸರ್ವೇ ಸಾಮಾನ್ಯವಾಗಿದೆ. ಈಗ ಕಾಳಿ ಕತೆ ಜನರ ಮನದಲ್ಲಿ ನೆಲೆಯೂರಲಿ ಎಂದಿಗೂ ಈ ಪ್ರದರ್ಶನದ ಘನ ಉದ್ದೇಶವೆಂದು ಕಲಾವಿದ ಸಾರಿಕೊಂಡಿದ್ದಾನೆ.
ನಮ್ಮಲ್ಲಿಯೂ ಸಾಹಿತಿಗಳಿಗೆ, ಕಲಾವಿದರಿಗೆ ಇಂಥಾದೊಂದು ವೇದಿಕೆ ನಿರ್ಮಾಣವಾಗಬೇಕು. ಅದಕ್ಕಾಗಿ ನಾವು ನೀವು ಕಾಯೋಣವಲ್ಲವೇ?
*****
















