
ರಜಾ ದಿನದಂದು ವೇಳೆ ಕಳೆಯಲೆಂದು ಪುಟ್ಟ ಪುಟ್ಟಿ ಸೇರಿದರು ತಮ್ಮ ತೋಟದತ್ತ ನಡೆದರು ತೋಟದ ದಾರಿ ಮಧ್ಯೆ ಹರಿಯುತ್ತಿತ್ತು ನದಿ ನದಿಯ ಮರಳಿನಲ್ಲಿ ಆಟವಾಡಿದರಲ್ಲಿ ಪುಟ್ಟ ಹೇಳಿದ ಪುಟ್ಟಿಗೆ ಮರಳಲಿ ಮನೆ ಕಟ್ಟಲು ಮರಳಲಿ ಮನೆ ಹೇಗಣ್ಣ? ಬೇಗ ತಿಳಿಸು ಪುಟ...
ರತ್ನಸಿಂಹಾಸನದಿ ಮಣಿ ಕಿರೀಟವನಿಟ್ಟು ತುಂಬಿದೊಡ್ಡೋಲಗದಿ ರಘುವೀರ ಶೋಭಿಸಲು ಪಕ್ಕದಲಿ ಶ್ರೀಸೀತೆ ಮಂಡಿಸಿರೆ ನಸುನಗುತ ಸರುವರುಂ ಕಣ್ತುಂಬ ನೋಡುತ್ತ ಸೇವಿಪರು. ಭರತ ಶತ್ರುಘ್ನರುಂ ಚಾಮರವನಿಕ್ಕುತಿರೆ ಸುಗ್ರೀವ ಮಾರುತಿ ವಿಭೀಷಣರ್ ಮೊದಲಾಗಿ ರಘುಪತಿಯ...
ಗವ್ವೆನುವ ಗೂಢದಲಿ ಕತ್ತಲೆಯ ಮುಸುಕಿನಲಿ ಭಾರವಾದ ಎಣ್ಣೆಗಟ್ಟಿದ ಮಸುಕಾದ ಮೂಗುತಿ ತಲೆ ತು೦ಬ ಮುಸುಕು ಹೊದ್ದು ಮೊಳಕಾಲುಗಳ ಮಧ್ಯೆ ತಲೆ ತೂರಿಸಿ- ಮುಳುಮುಳು ಅತ್ತು ತಲೆ ತಗ್ಗಿಸಿ ಕೂಡದೇ, ವಿಷ ಜಂತುಗಳ ಎದೆಗೆ ಒದ್ದು – ತಲೆಯೆತ್ತಿ ನಡೆದರೆ,...
ಮುಗಿಯಿತೆ ನಾಟಕವು ಪರದೆ ಕೆಳಕ್ಕಿಳಿಯಿತೆ ಪ್ರೇಕ್ಷಕರೆದ್ದು ಹೋಗಿಯಾಯಿತೆ ನೇಪಥ್ಯ ಬರಿದಾಯಿತೆ ವೇಷ ಕಳಚಬೇಕು ನಟರು ಮುಖವ ತೊಳೆಯಬೇಕು ಅವರು ತೊಳೆದರೂನು ಬಣ್ಣವು ಮೋರೆಯಲ್ಲಿ ಇನ್ನುವು ಇನ್ನೂ ಏನೊ ಉಳಿದಂತೆ ಕತೆಯಿನ್ನೂ ಮುಗಿಯದಂತೆ ಮಾತು ಅರ್‍ಧವು...
ಉತ್ತರ ಕರ್ನಾಟಕದ ಪ್ರತಿ ಊರಿನಲ್ಲಿಯೂ ಗುಡಿ, ಕಟ್ಟೆ, ರಸ್ತೆ ಎಲ್ಲೆಂದರಲ್ಲಿ ಬೇವಿನ ಮರವನ್ನು ಬೆಳೆಸುತ್ತಾರೆ. ಇದು ಅಲ್ಲಿಯ ಸೆಕೆಯುಳ್ಳ ಕಾಲದ ಜನಕ್ಕೆ ತಂಪೆರೆಯುವ ಮರವೂ ಹೌದು. ಜನಪದ ಕವಿಕೂಡ “ಬ್ಯಾಸಗಿ ದಿವಸಕ ಬೇವಿನ ಮರತಂಪ, ಭೀಮಾರತಿ ...
ಅಗ್ನಿ ಸಾಕ್ಷಿಯಾಗಿ ಮದುವೆಯಾದವರನ್ನು ಸಾಕ್ಷಿಗೇ ಸಮರ್ಪಿಸುವುದು! *****...
ಕವಿತೆ ಹುಟ್ಟುವ ಸಮಯ ಗೊತ್ತಿಲ್ಲ ಕವಿತೆ ಬರೆವುದು ಹೇಗೆ ಗೊತ್ತಿಲ್ಲ ಕವಿತೆ ಬೆಳೆವುದು ಎಲ್ಲಿ ಕವಿತೆ ಅಳಿವುದು ಎಲ್ಲಿ? ಗೊತ್ತಿಲ್ಲ ನಾವು ಕವಿಗಳಾದೆವೆ ಬರೆದ ಕವಿತೆ ಪೂರ್‍ಣವೆ? ಗೊತ್ತಿಲ್ಲ ಕವಿತೆ ಹುಟ್ಟಬಲ್ಲದೆ ಹುಟ್ಟು ಕವಿತೆಯ ಸಾವೆ? ಗೊತ್ತಿ...
ಕುಂವೀ ಕಟ್ಟಿದರ ಮನೆಯಲ್ಲ ರಾಜರಾಜರ ದೊರೆ ಮನೆಯಲ್ಲ ಸುಗಂಧ ಬೀಸುವ ತಂಗಾಳಿಯಿಲ್ಲ ಚಾಮರ ವಿಕ್ಕುವ ದಾಸಿಯರಿಲ್ಲ ಇದು ಬಡವರ ನಿರ್ಗತಿಕರ ದಿಕ್ಕೆಟ್ಟವರ ಮನಸ್ಸಂತೆ, ಅವರವರಿಗದೇ ಅರಮನೆ ಯಂತೆ ಹಾಗೆ ಹೂವಿಗೆ ಕಾಯಿಗೆ ಗಿಡಕ್ಕೆ ಮರಕ್ಕೆ ಕಲ್ಲಿಗೆ ಮಣ್ಣಿ...
ಚೆಲುವ ಬಣ್ಣಿಸಬಹುದು ಒಲವ ಬಣ್ಣಿಸಬಹುದೆ? ಹೇಗೆ ಬಣ್ಣಿಸಲದನು ನಲುಗದಂತೆ… ಬಣ್ಣನೆಗೆ ಮೀರಿದುದು ಹೀಗೆಂದು ತೋರುವುದು ಚಂದಿರನ-ನೈದಿಲೆಯ ಸ್ನೇಹದಂತೆ ನದಿಯ ಬಣ್ಣಿಸಬಹುದು ಒಳಗುದಿಯ ಬಣ್ಣಿಸಬಹುದೆ ಹೇಗೆ ಬಣ್ಣಿಸಲಿ ಕುದಿಯ ಕಲಕದಂತೆ… ಬ...
ಅವನ ಬೈಸಿಕಲ್ಲಿಗೆ ಎಷ್ಟು ವರ್ಷವಾಗಿರಬಹುದೆಂದು ಅವನಿಗೂ ಸರಿಯಾಗಿ ಹೇಳಲು ಸಾಧ್ಯವಿರಲಿಲ್ಲ. ಅದಕ್ಕೆ ಪೈಂಟು ಇಲ್ಲದೆ ಅದೆಷ್ಟೋ ವರ್ಷಗಳು ಕಳೆದಿದ್ದವು. ಅದಕ್ಕೆ ಬೆಲ್ಲು ಇರಲಿಲ್ಲ. ಅದರ ಎಲ್ಲಾ ಭಾಗಗಳೂ ಹೊರಡಿಸುವ ಶಬ್ದದಿಂದಾಗಿ ಬೇರೆ ಬೆಲ್ಲಿನ ಅಗ...
ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...
ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...
“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...
“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...
ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...
ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...















