ಬಾಳ ಬಳ್ಳಿ
ಬಿಟ್ಟ ಹೂವು
ಕೂಸು ಮುದುಮುದ್ದಿದೆ
ಜೀವ ಜೀವ
ಆತು ಓತು
ಮೈಯ್ಯ ಮಾಟ ತಿದ್ದಿದೆ
ಮೋಹ ಮಮತೆ
ಕೂಡ ದಣಿದು
ದೇಹ ಜಾಲ ಹೆಣೆದಿದೆ
ಅಳುವ ನೋವ
ಕುಂದು ಕೊರತೆ
ಬಾಲರೂಪ ನೊಣೆದಿದೆ
ಬಲಿದು ಬೆಳೆದು
ನಲಿದು ಉಲಿದು
ಹೊಂದು ಫಲವ ಕುಸುಮವೆ
ಬಾಳು ಬಾಳ
ಕಾಳ ಕಳೆದು
ನಿನ್ನ ಏಳ್ಗೆ ಬಯಸುವೆ
*****
ಬಾಳ ಬಳ್ಳಿ
ಬಿಟ್ಟ ಹೂವು
ಕೂಸು ಮುದುಮುದ್ದಿದೆ
ಜೀವ ಜೀವ
ಆತು ಓತು
ಮೈಯ್ಯ ಮಾಟ ತಿದ್ದಿದೆ
ಮೋಹ ಮಮತೆ
ಕೂಡ ದಣಿದು
ದೇಹ ಜಾಲ ಹೆಣೆದಿದೆ
ಅಳುವ ನೋವ
ಕುಂದು ಕೊರತೆ
ಬಾಲರೂಪ ನೊಣೆದಿದೆ
ಬಲಿದು ಬೆಳೆದು
ನಲಿದು ಉಲಿದು
ಹೊಂದು ಫಲವ ಕುಸುಮವೆ
ಬಾಳು ಬಾಳ
ಕಾಳ ಕಳೆದು
ನಿನ್ನ ಏಳ್ಗೆ ಬಯಸುವೆ
*****