ದೇಗುಲದಿ ನಿನ್ನ ಶಿಲೆಯಮೂರುತಿಯ ಮುಂದೆ ಬಾರಿಸುವ ಜೇಗಟೆಯದನಿಗೆ ದೇವ! ಮರೆತು ನಿದ್ದೆಯಮಾಡುತಿಹ ಎನ್ನ ಹೃದಯದಲಿ ಅರಿವಿಲ್ಲ! ಎಚ್ಚರಿಸು ಪರಮಾತ್ಮನೆ! ೧ ಕಂದದಯೆ ಕುಂದದೆಯೆ ನಿನ್ನ ಬಿಂಬದ ಮುಂದೆ ನಿಂದು ಉರಿಯುತಿಹ ನಂದಾದೀಪವು ಹರಿಸಲಾರದೆದೆಯಲಿಹ ಗಾಢಾಂಧತೆಯ ತೋರು ನೀಂ ಜ್ಞಾನಜೋತಿಯನು ದೇವ! ೨ ಹೊಳೆಯುತಿಹ ನಿ...

ನೀನು ಶಾಂತನೆನ್ನಲೆ ಸಮುದ್ರರಾಜ! ತೆರೆತೆರೆಯಾಗಿ ಹಾಯ್ದು ಮೇಘನಾದವ ಗೆಯ್ವೆ! ನೀನು ಕ್ಷುಬ್ಧನೆನ್ನಲೆ, ಸಮುದ್ರರಾಜ! ದೂರ ಮುಗಿಲು-ಗೆರೆಯನಪ್ಪಿ ನಿದ್ರಿಸುತಿರುವೆ! ಶಾಂತಿಯಿಲ್ಲ, ಕ್ಷೋಭೆಯಿಲ್ಲ ನಿನಗೆ! ಶಾಂತಿಯಿದೆ, ಕ್ಪೋಭೆಯಿದೆ ನಿನಗೆ! ಮಾನವನಂ...

ಶಿವಶಿವಾ ಶಿವಶಿವಾ ಇಂದು ಕಂಡೆನು ಕಂಡೆ ಬಾಳೆಯಾ ಹೊನ್ನೂರ ಶಿಖರ ಕಂಡೆ ಗುಡ್ಡ ಗವಿಗಳ ಕಂಡೆ ಹಸಿರು ಮರಗಳ ಕಂಡೆ ವೀರಸೋಮೇಶ್ವರನ ಬೆಳಕು ಕಂಡೆ ಮಲಯ ಪರ್ವತ ರಾಣಿ ಮರೆತು ಮಲಗಿಹಳಿಲ್ಲಿ ರಸದುಂಬಿದಾ ಬಾಳೆ ಬನವ ಕಂಡೆ ಕಣ್ತುಂಬ ಶಿವಶಿವಾ ಎದೆತುಂಬ ಶಿವಶ...

ಅಧ್ಯಾಯ ಹನ್ನೆರಡು ಇತಿಹಾಸದ ಘಟನೆ ಮತ್ತು ಇತಿಹಾಸ ಪ್ರಸಿದ್ಧ ವ್ಯಕ್ತಿಗಳ ಬದುಕನ್ನು ಆಧರಿಸಿದ ಕಥಾ ಚಿತ್ರಗಳೇ ಐತಿಹಾಸಿಕ ಚಿತ್ರಗಳು. ಕೆಲವು ವಿಮರ್ಶಕರು ಐತಿಹಾಸಿಕ ಚಿತ್ರಗಳನ್ನು ‘ಕಾಸ್ಟ್ಯೂಮ್ ಡ್ರಾಮಾ’ ಅಥವಾ ವೈಭವದ ಕಥಾನಕಗಳು ಎಂದು ಕರೆಯುವುದ...

ಕಟ್ಟಿರಲು ಮಾನವನ ಹಣೆಗೆ ಮುಳ್ಳಿನ ಮುಕುಟ ತಣಿವ ತಂಪನು ಮನದಿ ತಳೆಯಬಹುದೆ? ಕಲಮಲನೆ ಸಿಡಿದುರಿದು ಬೆಂಕಿಬಳ್ಳಿಯು ಹರಡೆ ಒಡಲಲ್ಲಿ ಶಾಂತಿಯದು ಆರಳಬಹುದೆ? ಆಳಿದಿರುವ ‘ನಿನ್ನೆ’ ಗಳ ಹೆಣಗಳನು ಹೊತ್ತಿಹೆವು ‘ಇಂದು’ಗಳಿಗಾ...

ತೆಂಗಿನ ತೋಪಿನಲ್ಲಿ ಬೀಡು ಬಿಟ್ಟಿದ್ದ ಗುರುಗಳ ಬಳಿ ಹಲವಾರು ಶಿಷ್ಯರು ಇದ್ದರು. ಒಬ್ಬರಿಗಿಂತ ಒಬ್ಬರು ವಾಚಾಳಿಗಳು, ಗುರುಗಳ ಬಳಿ ಬಂದು ಒಬ್ಬ ಶಿಷ್ಯ ಒಂದು ಪ್ರಶ್ನೆ ಕೇಳಿದ. “ಗುರುಗಳೇ! ಇದೇಕೆ, ತೆಂಗಿನಮರ ಇಷ್ಟು ಎತ್ತರ ಬೆಳದಿದೆ? ಇದು ಅ...

ನಕ್ಕರೆ ನಕ್ಕೇ ನಗುವದು, ಅತ್ತರೆ ಅತ್ತೇ ಅಳುವುದು-ಒಮ್ಮೊಮ್ಮೆ – ಆಡಿದರೆ ಆಡಿಯೇ ಆಡುವದು, ನೋಡಿದರೆ ನೋಡಿಯೇ ನೋಡುವುದು ಒಮ್ಮೊಮ್ಮೆ- ಹುಚ್ಚುಖೋಡಿ! ಮುದ್ದಿಡಹೋದರೆ ಬಿಕ್ಕಿಸಿ ಅಳುವುದು. ಗುದ್ದಲುಹೋದರೆ ಫಕ್ಕನೆ ನಗುವುದು. ಹುಚ್ಚುಖೋಡಿ! ...

ಚಕ್ರವರ್‍ತಿಯನೊಪ್ಪಿ ಕಪ್ಪವನಿತ್ತೊಡೆ ಬ ದುಕಿಗದಾವ ತೊಂದರೆಯಿಲ್ಲ ಸಾಮಂತನಿಗೆ ಪ್ರಕೃತಿ ತಾನನಿವಾರ್‍ಯದದ್ಭುತದನಂತದ ಚಕ್ರವರ್‍ತಿಯಿರಲಿದಕೆ ಮಣಿದೊಂದಿಷ್ಟು ಬೆವರ ನಿಕ್ಕುವುದಾರಧ್ಯವೆಮ್ಮ ಬದುಕಿನ ರಕ್ಷಣೆಗೆ – ವಿಜ್ಞಾನೇಶ್ವರಾ *****...

ಆರು ನೀನೆಲೆ ಹರುಷಮೂರುತಿ? ಹಕ್ಕಿಯೆಂಬರೆ ನಿನ್ನನು! ತೋರಿ ದಿವಿಜರು ಸುಳಿವ ಬಳಿ, ಸುಖ ವುಕ್ಕಿಬಹ ನಿನ್ನೆದೆಯನು ಹಾರಿ ನೆನೆಯದ ಕಲೆಯ ಕುಶಲದ ಭೂರಿಗಾನದೊಳೆರೆಯುವೆ! ನೆಲವನೊಲ್ಲದೆ ಚಿಗಿದು ಚಿಮ್ಮುತ ಮೇಲು ಮೇಲಕ್ಕೋಡುವೆ; ಒಲೆದು ದಳ್ಳುರಿ ನೆಗೆದು...

ಅಧ್ಯಾಯ ಹನ್ನೊಂದು ಯಥಾಕಾಲದಲ್ಲಿ ಭರತಾಚಾರ್ಯರು ಸಶಿಷ್ಯರೂ, ಸಮಿತ್ರರೂ ಆಗಿಬಂದು ಸುಲ್ತಾನರನ್ನು ಕಂಡರು. ಸುಲ್ತಾನರು ಅವರುಗಳಿಗೆಲ್ಲ ಪರಮಪ್ರೀತಿಯಿಂದ ಬೇಕಾದ ಉಪಚಾರಗಳನ್ನು ಮಾಡಿ ಬರಮಾಡಿಕೊಂಡರು. “ನಾವು ತಮ್ಮ ಖ್ಯಾತಿಯನ್ನು ಕೇಳಿದ್ದೆವು. ತಮ್ಮ...

ಯೋಗದ ಸಿರಿಯ ತಿಳಿಯಬೇಕು ಭೋಗದ ಲಾಲಸ ತೊರೆಯಬೇಕು ತ್ಯಾಗದ ಭಾವ ಉದಯಿಸಲೂಬೇಕು ನೀಗದ ತೃಷ್ಣೆಗಳಿಗೆ ದೂರಿಸಬೇಕು ಆತ್ಮ ದೇವರಲಿ ಸೇರುವುದೇ ಯೋಗ ಅದು ಆನಂದ ಪರಮಾನಂದ ಕ್ಷಣಿಕ ಸುಖ ಭ್ರಮೆಯೇ ಭೋಗ ಎಲ್ಲಿಯದು ಅಲ್ಲಿ ಸುಖಾನಂದ ಆಲೋಚನೆ ಧ್ಯಾನದಿಂದ ಸವೆಯ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...