ನೀನು ಶಾಂತನೆನ್ನಲೆ ಸಮುದ್ರರಾಜ!
ತೆರೆತೆರೆಯಾಗಿ ಹಾಯ್ದು ಮೇಘನಾದವ ಗೆಯ್ವೆ!
ನೀನು ಕ್ಷುಬ್ಧನೆನ್ನಲೆ, ಸಮುದ್ರರಾಜ!
ದೂರ ಮುಗಿಲು-ಗೆರೆಯನಪ್ಪಿ ನಿದ್ರಿಸುತಿರುವೆ!
ಶಾಂತಿಯಿಲ್ಲ, ಕ್ಷೋಭೆಯಿಲ್ಲ ನಿನಗೆ!
ಶಾಂತಿಯಿದೆ, ಕ್ಪೋಭೆಯಿದೆ ನಿನಗೆ!
ಮಾನವನಂತೆ ಸಮಾಧಾನ ರಹಿತ,
ದೇವನಂತೆ ಶಾ೦ತಿಪೂರಿತ,-
ಭದ್ರ-ರುದ್ರನಿರುವೆ ನೀನು ಓ! ಸಮುದ್ರರಾಜ!
*****



















