Home / ಕವನ / ಕವಿತೆ / ಸೋತವನ ಹಾಡು

ಸೋತವನ ಹಾಡು

ಕಟ್ಟಿರಲು ಮಾನವನ ಹಣೆಗೆ ಮುಳ್ಳಿನ ಮುಕುಟ
ತಣಿವ ತಂಪನು ಮನದಿ ತಳೆಯಬಹುದೆ?
ಕಲಮಲನೆ ಸಿಡಿದುರಿದು ಬೆಂಕಿಬಳ್ಳಿಯು ಹರಡೆ
ಒಡಲಲ್ಲಿ ಶಾಂತಿಯದು ಆರಳಬಹುದೆ?
ಆಳಿದಿರುವ ‘ನಿನ್ನೆ’ ಗಳ ಹೆಣಗಳನು ಹೊತ್ತಿಹೆವು
‘ಇಂದು’ಗಳಿಗಾಳಾಗಿ ದುಡಿಯುತಿಹೆವು
ಮುಂದಿರುವ ‘ನಾಳೆ’ಗಳ ನೆಳಲಲ್ಲಿ ಚಿಂತೆಗಳ
ಚಿಗುರಿಸುತ ಎದೆಗುದಿಯ ಬೆಳೆಸುತಿಹೆವು.

ಸಾಕಾಯ್ತು ಬಾಳುವೆಯ ಕುರುಡು ಕಾಮನೆಯಾಟ
ಅನ್ಯಾಯ ಮೋಸಗಳ ಮೋಹದಾಟ
ನುಗ್ಗಿ ಬಹ ತೆರೆಗಳೇರಾಟ ಕಾಟದಿ ನನ್ನ
ಅಂಗಾಂಗವಾಯಾಸ ವಿದ್ಧವಕಟ
ಬೇಡಿದೆನೆ ಬಾನಿನಲಿ ಬೆಳೆವ ಅಮೃತದ ಹನಿಯ
ದೇವತೆಯ ವೈಭವವ ಕಾಮಿಸಿದೆನೆ ?
ಹುಲುಮನುಜನೆದೆಯೊಳಿಹ ಕಿರಿಯಾಸೆಗೂ ದೈವ
ಮುಚ್ಚಿರುವ ಬಾಗಿಲವ ತೆರೆಯಿತೇನೆ?

ಕೆರಳಿರುವ ಬಾಳ್ಗಡಲ ತೊರೆದು ಬಾ ನೀರೆಯೆ
ಏರಿಳಿತವಿಬ್ಲದೀಯುಸುಕಿನಲ್ಲಿ
ಧೆರ್ಮಬಂಧನ ಜರೆದು ಕರ್ಮಕ್ರಂದನ ತೊರೆದು
ಕೊರಳ ಕೊಯ್ಯುವ ಬಾಳನೊಗವ ಹರಿದು
ಸಿಕತಸೀಮೆಯ ಸೌಮ್ಯ ಶಾಂತಿಯಲಿ ಇಲ್ಲಿ ಬಾ
ಆಯಾಸವಾರಿಸುವ ವಿಶ್ರಾಂತಿಗೆ
ಕನಸಿನಾರಾಮದಲಿ ಕೊನರಬಹುದೆಲೆ ತಣಿವು
ಮರೆಯಬಹುದೆಲೆ ಮಲೆತ ವ್ಯಥೆಯಮೊನೆಯು

ಕಡಲತ್ತ ತನ್ನೆದೆಯ ಕದಡಿಸಿದ ಚಂದಿರನ
ಮಕ್ಕಲಿಕೆ ನಾಲಗೆಯ ಚಾಚುತಿರಲಿ
ಕಾಲ್ಕೆಳಗೆ ಸುಳಿಯುತಿಹ ಶೇಷನನು ಕುಕ್ಕಲಿಕೆ
ಪಾತಾಳವನು ಅಗಿದು ಮೊರೆಯುತಿರಲಿ
ಇಲ್ಲಿ ಕಾಣುವುದೇನು?- ನೀರ್‌ನೊರೆಯ ಬಿಳಿಗೆರೆಯೆ
ಕಡಲ ಮೊಳಗೂ ಕೂಡ ಕಿವಿಯ ಪುಗದು.
ಇಲ್ಲಿ ಗಾಳಿಯು ಕೂಡ ದಣಿದು ಗರಿಗಳ ಮುಗಿದು
ಹೂವಿನುಯ್ಯಲೆಯಲ್ಲಿ ಮಲಗಿರುವುದು.

ರಿಕ್ತವಹ ಸಂತಾಪ ಪರಿತಾಪಗಳ ತೊರೆದು
ಸೌಮ್ಯಸುಪ್ತಿಯಲೆದೆಯು ಮಿಡಿಯುತಿರಲಿ
ಇಲ್ಲಿರುವ ಗಿರಿಗಳಲಿ, ಹರಿಯುತಿಹ ಹೊಳೆಗಳಲಿ
ಹಸಿರಿನಲಿ ಬಿತ್ತರದ ಉಸುಕಿನಲ್ಲಿ
ಅಕ್ಷಯ್ಯ ಶಾಂತಿಯದು ನೆಲೆಸಿರಲು ನಾವೇಕೆ
ವ್ಯರ್ಥವಾದೆಣಿಕೆಯಲ್ಲಿ ನವೆಯಬೇಕು?
ಕನಸಿನಲಿ ಕಣ್ತೆರೆದು ನಸುಕಿನಲಿ ನಸುಬೆಳೆದು
ಅರಳಿಯಳಿವಲರಿನಾ ಬಾಳೆ ಸಾಕು!

ಮುಳುಗಲಿಹ ನೇಸರನು, ಮೂಡಲಿಹ ಚಂದಿರನು
ಮೆರೆಯುತಿಹರಾಗಸದ ಅಂಚುಗಳಲಿ
ಕ್ಷಣಕಾಲ ಮರೆತಿಹರು ರೇಗಿಸುವ ಕದನವನು
ಶಾಂತಿಯಾ ಕಾಂತಿಯನೆ ಕರೆಯುತಿಹರು,
ಗೆಳತಿ, ವೀಣೆಯಮೇಲೆ ತಂತಿ ನೋಯದೊಲಿನ್ನು
ಮೆಲ್ಪೆಲರಿಗೂ ಮಿದುವು ಬೆರಳಾಡಲಿ
ಗಾಳಿಗೂ ತಿಳಿಯದೊಲು ಮೌನವೂ ಮುರಿಯದೊಲು
ಗೀತಗಳು ಕಿವಿಯಲ್ಲಿ ಮೆಲ್ಲುಲಿಯಲಿ!

ಹುಸಿಯಾಸೆಗಳ ಪಾಶ, ಕೃತಿ ವಿರಸದಾಯಾಸ
ಮಾಯವಾಗುವುವೆಲ್ಲ ಸುಪ್ತಿಯಲ್ಲಿ
ಮಲೆತು ಮುರಿಯುವುದೇನು? ಅಲೆದು ಅರಸುವುದೇನು?
ಬಾಳೆಲ್ಲ ಸುಖಪಡೆಯೆ ವಿರತಿಯಲ್ಲಿ
ಸುಪ್ತಿಯೇ ಜೀವನದ ಸುಖ ಪೂರ್ಣ ಭುಕ್ತಿ
ಭಾವಗಳ ರಾಗಗಳ ಕೊನೆಯ ತೃಪ್ತಿ
ಪ್ರಕ್ಷುಬ್ಧ ಜಲಧಿಯಾ ಜಲವೆ ಶಿಲೆಯಾಗಿರುವ
ಹಮವತಿಯ ಸಿದ್ಧಿಯೂ ದೀರ್ಫ ಸುಪ್ತಿ.

ಸುಪ್ತಿ ಶುಕ್ತಿಯ ಸೇರೆ ಮನವು ಮೌಕ್ತಿಕವಾಗಿ
ಪಡೆಯಬಹುದೆಲೆ, ನಲ್ಲೆ, ನಿತ್ಯ ಮುಕ್ತಿ!
*****

Tagged:

Leave a Reply

Your email address will not be published. Required fields are marked *

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...

ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...