
ಕಾದಿಹಳು ಭೂದೇವಿ, ನೀವು ಬಾರಿರಾ! ದಿವ್ಯ ತೀರ್ಥ ತಾರಿರಾ! ಬಿಸುಸುಯಿಲ ಬೇಗೆ ಹೊಮ್ಮಿ ಆಗಸವ ತಟ್ಟಿ ತಿವಿಯೆ ಹರಣವನೆ ಕೊರಳಲಿರಿಸಿ ಕರುಣೆಯನು ಕೇಳುತಿಹಳು ಕ್ಷಣ ಕ್ಷಣವು ನಿಮ್ಮ ನೆನಸು ಆನುದಿನವು ನಿಮ್ಮ ಕನಸು ಮರದುದಿಗೆ ಕಣ್ಣನಿರಿಸಿ ನೋಡುವಳು ಕ್...
ಬೇಗ ಬಾ, ಇರುಳ ದೇವಿ ಬಾ, ಬಾ, ತಡೆಯದಿರು ಸಿಂಗರಕೆ, ಬೇಗ ಬಾ, ಬಾ, ಬಾ! ತಾರೆಗಳ ಲಾಸ್ಯವೇಕೆ ಚಂದ್ರಿಕೆಯ ಹಾಸ್ಯವೇಕೆ ಮುಡಿಗೆ ಸಾಕು ಏಳು ಚಿಕ್ಕೆ ಕಿವಿಗೆ ಎರಡು ಓಲೆ! ಮೊಗ್ಗೆಗಿನಿಸು ನಗೆಯನಾಯ್ದು ದಣಿದ ಮನಕೆ ತಣಿವತಂದು ಬೆಂದ ಬಾಳು ಅರಳುವಂತೆ ಬ...
ಇರುಳು ಕಳೆಯಿತು, ಬೆಳಕು ಬೆಳೆಯಿತು, ನೋಡು ಮೂಡಣ ದಿಕ್ಕಿಗೆ ಮನದ ಕ್ಲೇಶದ ಲೇಶ ಕಳೆಯಿತು ಮತ್ತೆ ಹೊಮ್ಮಿತು ನಂಬಿಗೆ! ಚೆಲುವ ಬೆಳಕಿನ ಹವಳದುಟಿಯದೊ ಬಾನಿನಂಚನು ತಟ್ಟಿತು ಕೆಂಪು ಕೊನರಿತು ಚಿಮ್ಮಿ ಹರಿಯಿತು ದಿಗ್ ದಿಗಂತವ ತುಂಬಿತು. ನೂರು ನಾಲಗೆಯ...
ದೇವ ಹೃದಯದ ನೀಲದಾಳದಿ ಮೊರೆವ ಸ್ನೇಹದ ಸಿಂಧುವೆ! ಬೆಂದ ಬಾಳಿಗೆ ನೊಂದ ಜೀವಿಗೆ ನೀನೆ ಸರುವರ ಬಂಧುವೆ! ಇಳೆಯ ಕುದಿಯನು ಕಳೆಯಲೋಸುಗ ಹಸಿರ ಸಿರಿಯನು ಹೊದಿಸಿದೆ ಏಳು ಕಡಲುಗಳನ್ನೆ ಹರಿಯಿಸಿ ಪ್ರಾಣಪವನವ ಸುತ್ತಿದೆ. ಹಗಲಿನುರಿ ನಂದಿಸಲು ಸಂಧ್ಯಾ- ಮೋಹ...
ಹೃದಯದೊಳಗುನ್ಮಾದ ತುಂಬಿದೆ ಕಾಲಿನೊಳಗುರಿಯೆದ್ದಿದೆ ಮರಣ ಮೂರ್ಛಿತ ಮನವು ಹರಣದ ಬಲಿತ ಗರಿಗಳ ಪಡೆದಿದೆ ಕಟ್ಟುಗಳ ಕಿರಿಗೂಡಗೋರಿಯ ಮುರಿದು ಮೇಲಕೆ ನೆಗೆಯುವೆ ಇನ್ನು ನಿಲ್ಲೆನು ನಾನು ಇಲ್ಲಿಗೆ ಬಾನಿನಂಚನೆ ಮುಟ್ಟುವೆ ಯಾರು ತಡೆವರು ನನ್ನನು? ಯಾರು ಕ...














