ತೆಂಗಿನ ತೋಪಿನಲ್ಲಿ ಬೀಡು ಬಿಟ್ಟಿದ್ದ ಗುರುಗಳ ಬಳಿ ಹಲವಾರು ಶಿಷ್ಯರು ಇದ್ದರು. ಒಬ್ಬರಿಗಿಂತ ಒಬ್ಬರು ವಾಚಾಳಿಗಳು, ಗುರುಗಳ ಬಳಿ ಬಂದು ಒಬ್ಬ ಶಿಷ್ಯ ಒಂದು ಪ್ರಶ್ನೆ ಕೇಳಿದ.
“ಗುರುಗಳೇ! ಇದೇಕೆ, ತೆಂಗಿನಮರ ಇಷ್ಟು ಎತ್ತರ ಬೆಳದಿದೆ? ಇದು ಅವಶ್ಯವೇ?” ಎಂದ.
“ಶಿಷ್ಯಾ! ತೆಂಗಿನ ಮರ ಎತ್ತರವೆಂದು ಹೇಳಬೇಡ, ನೀನು ಕುಗ್ಗಿರುವೆ. ಕುಳ್ಳಗಿರುವೆ. ತಗ್ಗಿನಲ್ಲಿ ಇರುವೆ. ತೆಂಗಿನ ಮರದಂತೆ ಎತ್ತರ ಬೆಳೆಯುವುದನ್ನು ನೀನು ನೋಡಿ ಕಲಿ. ಆಗಸ ಮೇಲಿದ್ದರು, ಅದು ನಮ್ಮ ಕಣ್ಣು ತುಂಬಿದೆ. ಭೂಮಿ ಕೆಳಗಿದ್ದರು ನಮ್ಮ ಎದೆ, ಹೊಟ್ಟೆ ತುಂಬಿದೆ. ಮೇಲೆ, ಕೆಳಗೆ, ಹತ್ತಿರ, ದೂರ, ಎತ್ತರ, ತಗ್ಗು, ಎಲ್ಲಾ ನಮ್ಮ ದೃಷ್ಟಿಯ ಸೃಷ್ಟಿ” ಎಂದರು ಗುರುಗಳು.
ಶಿಷ್ಯನಿಗೆ ಎತ್ತರಕ್ಕೆ ಬೆಳೆಯುವ ಸ್ಫೂರ್ತಿಯ ಚಿಲುಮೆ ಮನದಲ್ಲಿ ಉಕ್ಕಿತು.
*****


















