ನಕ್ಕರೆ ನಕ್ಕೇ ನಗುವದು,
ಅತ್ತರೆ ಅತ್ತೇ ಅಳುವುದು-ಒಮ್ಮೊಮ್ಮೆ –
ಆಡಿದರೆ ಆಡಿಯೇ ಆಡುವದು,
ನೋಡಿದರೆ ನೋಡಿಯೇ ನೋಡುವುದು ಒಮ್ಮೊಮ್ಮೆ-
ಹುಚ್ಚುಖೋಡಿ!
ಮುದ್ದಿಡಹೋದರೆ ಬಿಕ್ಕಿಸಿ ಅಳುವುದು.
ಗುದ್ದಲುಹೋದರೆ ಫಕ್ಕನೆ ನಗುವುದು.
ಹುಚ್ಚುಖೋಡಿ!
ತನ್ನವರು ಕೈಮಾಡಿ ಕರೆದರೂ
ಸುಮ್ಮನಿರುವುದು-ಒಮ್ಮೊಮ್ಮೆ-
ಕಂಡವರು ಕಣ್ಣಿಂದ ಕರೆದರೂ
ಗಮ್ಮನೆ ಹೋಗುವುದು-ಒಮ್ಮೊಮ್ಮೆ
ಹುಚ್ಚುಖೋಡಿ!
ಗಾಳಿ!…… ಮನಸುಖರಾಯ!
ಹೊರಳಿದತ್ತ ಹೊರಳಿತು, ತೆರಳಿದತ್ತ ತೆರಳಿತು.
ಹುಚ್ಚುಖೋಡಿ!
*****


















