ದೇಗುಲದಿ ನಿನ್ನ ಶಿಲೆಯಮೂರುತಿಯ ಮುಂದೆ ಬಾರಿಸುವ ಜೇಗಟೆಯದನಿಗೆ ದೇವ! ಮರೆತು ನಿದ್ದೆಯಮಾಡುತಿಹ ಎನ್ನ ಹೃದಯದಲಿ ಅರಿವಿಲ್ಲ! ಎಚ್ಚರಿಸು ಪರಮಾತ್ಮನೆ! ೧ ಕಂದದಯೆ ಕುಂದದೆಯೆ ನಿನ್ನ ಬಿಂಬದ ಮುಂದೆ ನಿಂದು ಉರಿಯುತಿಹ ನಂದಾದೀಪವು ಹರಿಸಲಾರದೆದೆಯಲಿಹ ಗಾಢಾಂಧತೆಯ ತೋರು ನೀಂ ಜ್ಞಾನಜೋತಿಯನು ದೇವ! ೨ ಹೊಳೆಯುತಿಹ ನಿ...

ಗರ್ಜಿಸು ಹೂಂಕರಿಸು ಘೀಳಿಡು ಕೇಕೆ ಹಾಕು ಗಹಗಹಿಸು ಹೇಷಾರವ ಮಾಡು ಕಿರುಚಾಡು ಕೆನೆ ಬೇಬೇ ಎನ್ನು ಏನು ಬೇಕಾದರೂ ಮಾಡು ಆದರೂ ಕೆಲವು ಸಲ ಮನುಷ್ಯ ಧ್ವನಿಯಲ್ಲಿ ಮಾತಾಡು ಇಲ್ಲದಿದ್ದರೆ ಮರೆತುಬಿಡುತ್ತೀ ಪೂರ್ತಿ ರಸ್ಪುಟಿನ್‌ನ ವಿಷ ಅವನ ಹಲ್ಲುಗಳಲ್ಲಿತ...

ಚೇತನ ಪ್ರತ್ಯೇಕ ಚಿದ್ಭೂತಿಯೇ, ನಲವೆ. ನಿನ್ನ ಹಸಿರಾರುವುದು ನುಡಿತೇರು ಹರಿಯೆ ಸೂಕ್ಷ್ಮ ನೀ, ದಿನಬಳಕೆ ನುಣ್ಣಮಾತಿದು ತೋರ ಅರಿದಿದಕೆ ನಲುಗಿಸದೆ ನಿನ್ನ ಹಿಡಿಯೆ. ಇದನರಿತೆ ಪೂರ್ಣಕಲಶಕೂರ್ಚಾ೦ಕುರಭೇರ ಮುದ್ರಾದಿ ತಂತ್ರಗಳ ಸಂಕೇತದಿ ಕಟ್ಟುವರ್ಥದ ಪ...

ಅರ್ಥವಾಗದ ಭಾಷೆಯ ದಪ್ಪದಪ್ಪ ಧರ್ಮಗ್ರಂಥಗಳ ಸುಮ್ಮನೆ ಒಟಗುಟ್ಟುವ ಅವನು ಏನೋ ಸಾಧಿಸಿದಂತೆ ಬೀಗುತ್ತಾನೆ ಸುಳ್ಳು ತೃಪ್ತಿಯ ಅಹಂಕಾರದ ಮೂಟೆಯ ಅಂತ್ಯ ಅದರಲ್ಲೇ ರೇಷ್ಮೆ ಹುಳುಕಟ್ಟಿದ ಗೂಡಿನಲ್ಲೇ ದೊಡ್ಡ ದೊಡ್ಡ ಮಣ್ಣಹೆಂಟೆಗಳ ದೂರ ದೂರಕೆ ಉರುಳಿಸಿ ಸು...

ದಿನಾಂಕ ೦೩-೦೮-೨೦೧೫ ರಂದು ಕರ್ನಾಟಕದ ಭಾರತೀನಗರದ ಹತ್ತಿರ ತೊರೆಚಾಕನ ಹಳ್ಳಿಯಲ್ಲಿ ಜನಜಂಗುಳಿ ಸೇರಿತ್ತು! ಜನಾನೇ ಹಾಗೆ ದನಗಳ ಹಾಗೆ… ಬೆಳ್ಳಂಬೆಳಿಗ್ಗೆ ಎಷ್ಟೊಂದು ಜನವೋ ಜನ! ಕಾರಣ ಹಂದಿಯೊಂದು ಕಾಡಿನಿಂದ ನಾಡಿಗೆ ಬಂದು ಬಿಟ್ಟಿದೆ. ಜನ ಮು...

ಬುರ್‍ಖಾ ಬಿಟ್ಟು ಹೊರಗೆ ಬಾರವ್ವ – ಓ ತಂಗಿ ಹೊಸಿಲ ದಾಟಿ ಲೋಕ ನೋಡವ್ವ ತಲೆಯ ಮ್ಯಾಗಿನ ಸೆರಗ ತೆಗಿಯವ್ವ – ಓ ತಂಗಿ ಅದನ್ನೆತ್ತಿ ಸೊಂಟಕೆ ಸಿಕ್ಕಿಸವ್ವ ನೀನು ಬಣ್ಣದ ಗೊಂಬಿ ಅಲ್ಲವ್ವ – ಓ ತಂಗಿ ನಿನ್ನ ಸೂತ್ರ ನನ್ನಲ್ಯಾಕವ್ವ...

ಅದು ರಾಷ್ಟೀಯ ಹೆದ್ದಾರಿ ಎನ್.ಎಚ್.೧೭. ಎಡೆಬಿಡದ ವಾಹನಗಳ ಸಂಚಾರ. ಮಧ್ಯೆ ಮಧ್ಯೆ ಅಪಾಯಕಾರಿ ತಿರುವುಗಳು. ಹೊಸಬರಿಗೆ ಅಪರಿಚಿತರಿಗೆ ಮುಂದೆ ತಿರುವು ಇದೆ ಎಂದು ತಿಳಿಯಲಾಗದ, ಅವಘಡವೇನಾದರೂ ಸಂಭವಿಸಿದರೆ ನೇರವಾಗಿ ಪ್ರಪಾತದ ಪಾಲಾಗುವ ಭಯವನ್ನು ಹೊಂದ...

ಒಂದು ಎರಡು ಮೂರು ಬೆಳಗಾಯಿತು ಏಳೋಣ ಎರಡು ಮೂರು ನಾಲ್ಕು ಬೇಗ ಸ್ನಾನವ ಮಾಡೋಣ ಐದು ಆರು ಏಳು ಅಮ್ಮನು ಮಾಡಿದ ತಿಂಡಿ ತಿನ್ನೋಣ ಎಂಟು ಒಂಭತ್ತು ಹತ್ತು ಪುಸ್ತಕ ಬ್ಯಾಗು ಹಿಡಿದು ಶಾಲೆಗೆ ಹೋಗೋಣ ಗುರುಗಳ ನಮಿಸಿ ವಿದ್ಯೆ ಕಲಿಯೋಣ *****...

ಮೂಲ: ಮೋತಿಲಾಲ್ ಜೋತ್ವಾನಿ (ಸಿಂಧಿ ಕವಿ) ದಕ್ಷಿಣ ಭಾರತದಲ್ಲಿ ಚೆಂಗಲ್‌ಪೇಟೆ, ಅಲ್ಲಿ ತಿರುಕ್ಕುಳಕ್ಕುಂಡ್ರಂ ಎಂಬ ಪುಟ್ಟ ಊರಲ್ಲಿ ಪ್ರಸಿದ್ಧವಾಗಿದೆ ಒಂದು ಬೆಟ್ಟದಲ್ಲಿನ ಗುಡಿ; ದಿನವೂ ಮಧ್ಯಾಹ್ನದಲ್ಲಿ ಗೊತ್ತಾದ ಹೊತ್ತಿನಲ್ಲಿ ಇಳಿಯುತ್ತವೆ ಜೋಡಿ...

ಹಿಂದಿನ ಘಟನೇನೆ ಮುಂದುವರಿಸಿ ಸೀನಣ್ಣನ ವಿಚಾರಕ್ಕೆ ಬರಬಹುದು ಅಂತ ನೀವು ಭಾವಿಸಿದ್ದರೆ ನಿರಾಶೆಯಾಗುತ್ತೆ. ಇಷ್ಟಕ್ಕೂ ನೀವು ಹಾಗೆ ಭಾವಿಸಿದ್ದೀರಿ ಅಂತ ನಾನ್ಯಾಕೆ ಭಾವಿಸಲಿ ? ಯಾವುದೋ ಬರವಣಿಗೆಗೆ ತನ್ನದೇ ಆದ ಒಂದು ಚೌಕಟ್ಟು ಇರುತ್ತೆ ಮತ್ತು ಅದರ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...