ಚೇತನ ಪ್ರತ್ಯೇಕ ಚಿದ್ಭೂತಿಯೇ, ನಲವೆ.
ನಿನ್ನ ಹಸಿರಾರುವುದು ನುಡಿತೇರು ಹರಿಯೆ
ಸೂಕ್ಷ್ಮ ನೀ, ದಿನಬಳಕೆ ನುಣ್ಣಮಾತಿದು ತೋರ
ಅರಿದಿದಕೆ ನಲುಗಿಸದೆ ನಿನ್ನ ಹಿಡಿಯೆ.
ಇದನರಿತೆ ಪೂರ್ಣಕಲಶಕೂರ್ಚಾ೦ಕುರಭೇರ
ಮುದ್ರಾದಿ ತಂತ್ರಗಳ ಸಂಕೇತದಿ
ಕಟ್ಟುವರ್ಥದ ಪಾಶವುಡುಗುತಿಹ ಮಂತ್ರಗಳ
ನೆರವ ಕೋರುವನು ಆತ್ಮಪ್ರವಾದಿ.
ಹಾ ನಲವೆ, ನಿನ್ನ ತಡೆದಿಡಲೆನ್ನ ಸಾಗರದೊಳಿಲ್ಲ ಜಾಗ
ಕಂಡ ಜಡಜಂಗಮಕೆ ಕೈಯ ಜೋಡಿಸುವುದೇ ಕುಶಲವೀಗ.
*****


















