(ಕ್ಯಾಂಡಿಯಾ ನಡುಗಡ್ಡೆಯ ಹತ್ತಿರ) ಕತ್ತಲೆಯ ಬರವನ್ನು ಸಾರುವಂತಹ ಕೊಂಬು ಅಂಬುಧಿಯೊಳಾಗಿಹುದು ಬೂದಿಬೆಳಕಿನ ಕಂಬ,- ಕಂಬ ಮರೆಯಾಗುತ್ತ, ಕೊಂಬು ಕಡೆಗಾಗುತ್ತ ನಿಶೆ ಬಂತು ದಶ ದಿಶೆಯಲಿ; ಚಂದ್ರಾಮಗಿಹುದೊಂದು ಕೋಡೆಂದು ಹಾಡಿನಲಿ ನುಡಿದಿದ್ದರಾಂಗ್ಲ ಕವಿಗಳು. ಕಂಡೆನದನಿಂದು: ಸಾಂದ್ರರಜನಿಯನಾಳ್ಪ ಚದುರಚ೦ದ್ರನ ತಲೆ...

ಅಂದು, ಸ್ವಾತಂತ್ರ್ಯ ಬೇಕೆಂದು ನಮ್ಮ ದೇಶ ನಮಗೇ ಬೇಕೆಂದು ಸ್ವದೇಶೀ ಚಳವಳಿಮಾಡಿ ಹೊರಗಟ್ಟಿದರು ವಿದೇಶೀಯರ ನಮ್ಮ ಹಿರಿಯರು, ದೇಶಕ್ಕಾಗೇ ಜೀವತೆತ್ತವರು. ಇಂದು, ವಿದೇಶಿ ಬಂಡವಾಳ ಹೂಡಿಕೆದಾರರ ನಾವೇ ಆಹ್ವಾನಿಸಿ ಹರಾಜು ಹಾಕಲು ಸಿದ್ಧರಾಗಿರುವೆವು ನಮ...

ಹೇಳು, ಯಾವುದೊ ತಪ್ಪಿಗಾಗಿ ನನ್ನನು ನೀನು ದೂರಮಾಡಿದೆ ಎಂದು, ತಪ್ಟೊಪ್ಪಿಕೊಳ್ಳುವೆನು; ನನ್ನ ನ್ಯೂನತೆ ತಿಳಿಸು, ಅದರ ವಿರುದ್ಧ ಏನೂ ರಕ್ಷಣೆಗೆ ವಾದ ಹೂಡದೆ ತಿದ್ದಿಕೊಳ್ಳುವೆನು. ನನ್ನ ಬದಲಾವಣೆಯ ಬಯಸಿ ದೂರಲು ನೀನು ಮುಖಭಂಗವೇನಿಲ್ಲ ನನಗೆ, ನನ್ನ...

ಮಾಯಾಜಿಂಕೆಯ ಮೋಹ ವಿಭೀಷಣ ಹೋಗುತ್ತಿದ್ದಾನೆ. ಎಲ್ಲವನ್ನು ತೊರೆದು “ನಿಲ್ಲು ವಿಭೀಷಣ ನಿಲ್ಲು ನನ್ನನ್ನು ಬಿಟ್ಟು ಹೋಗಬೇಡ ಒಳಗಿಂದ ಹೃದಯ ಚೀರುತ್ತಿತ್ತು. ಆದರೆ ಮಾಯಾ ಮನಸ್ಸು ಸಮ್ಮತಿಸಲಿಲ್ಲ. ಬಾಯಿ ಬಿಡಲಿಲ್ಲ” ಹೋಗು ವಿಭೀಷಣ ಹೋಗು...

ನೂರುಬಣ್ಣಗಳ ಉಟ್ಟು ನಲಿಯುವವು ಮೋಡ ಹೊಳೆಯುಹಳ್ಳ ನಿನಗೆ ತಂದಿರಲು ಬಣ್ಣದಾಟಿಗೆಯ ಅಲ್ಲವೇನು ಕಳ್ಳ ಕಣ್ಣನೆಳೆವ ಬಣ್ಣಗಳು ಹೂವ ಮೆರು- ಗನ್ನು ಹೆಚ್ಚಿಸುವವು ಏಕೆ ಎಂಬುದನು ಬಲ್ಲೆ ಬಾಳಣ್ಣ ನಿನ್ನ ಮೆಚ್ಚಿಸುವವು ನಿನ್ನ ಕುಣಿಸಲೆಂದಾನು ಹಾಡುತಿರೆ ಎಲ...

ಗೋವೆಯ ಕಡಲಿಂದ ಎದ್ದು ಬಂದ ಜಲದೇವತೆ ನೀ ನೀಲ ಸುನೇತ್ರೀ ಮಿಥಿಲಾ ನಗರದ ವರಪುತ್ರೀ || ಬಂದಿಹೆ ನೀ ಹೊಸ ಬಾಳನರಸಿ ಆಗುವೆ ನೀ ಎನ್ನ ಬಾಳಿನ ಅರಸಿ | ಸ್ವಾಗತ ನಿನಗೀ ಚೆಲುವಿನ ನಾಡಿಗೆ ಕಲೆಗಳ ತೌರಾದ ಕನ್ನಡ ನಾಡಿಗೆ ||೧|| ಕವಿಗಳು ಹಾಡಿದ ಕನಸಿನ ಹಾ...

ಸಂತೋಷದ ಕಡಲಲ್ಲಿ ತೇಲಾಡುತಿರಲು ನಾವು ನಗುವಿನ ಜೊತೆ ಕಣ್ಣೀರು ಬರುತಿರಲು ಅದುವೇ ಆನಂದ ಬಾಷ್ಪ. ದುಃಖದ ಒಡಲಲ್ಲಿ ಒದ್ದಾಡುತಿರಲು ನಾವು ಅಳುವಿನ ಜೊತೆ ಕಣ್ಣೀರು ಬಾರದಿರಲು ಅದುವೇ ಮಡುಗಟ್ಟಿದ ಶೋಕ. *****...

ಎಚ್ಚರಾದ ಎಷ್ಟೋ ಹೊತ್ತಿನ ಮೇಲೆ ತೊಡೆಯಲ್ಲಿ ಜೀವಾಡುವ ಗೊಂಬೆ. ಗಾಜಿನೆರಕ ಹೊಯ್ದು ತೆಗೆದದ್ದೋ? ಸ್ಪಟಿಕದ್ದೋ? ಸ್ಪರ್ಶಕ್ಕೆ ನಿಲುಕದ ಬೆರಗು ಇದೇನಿದು? ಪಕ್ಕೆಗಳೆರಡಕ್ಕೆ ಅಂಟಿಕೊಂಡಂತೆ ಕಂಡೂ ಕಾಣದಂತಾ ಎಳಸು ರೆಕ್ಕೆ? ನೆತ್ತಿಯ ಮೇಲೆ ಕೂದಲೊಂದಿಗೇ...

೧೯೯೨ರಲ್ಲಿ ವೈಕಿಂಗ್ ಪೆಂಗ್ವಿನ್ ಪಕಾಶನ The Treasury of the Encyclopedia Britanica (ಬ್ರಿಟಾನಿಕಾ ವಿಶ್ವಕೋಶ ನಿಧಿ) ಎಂಬ ಗ್ರಂಥವೊಂದನ್ನು ಕ್ಲಿಫ್ಟನ್ ಫದಿಮನ್ ಸಂಪಾದಕತ್ವದಲ್ಲಿ ಪ್ರಕಟಿಸಿತು. ಸಾಮಾನ್ಯವಾಗಿ ಶಾಲೆ ಕಾಲೇಜಿಗೆ ಹೋದ ಯಾರೂ...

ಇಂಬಾಗಿ ನಗುನಗುವ ಮುಂಬಿಸಿಲ ಮೋರೆಯಲಿ, ಅಂಬುಜ ಸಖಂ ಬಂದನಂಬರದಲಿ, ತುಂಬಿದ್ದ ಬಲು ಕತ್ತಲೆಂಬ ಕಂಬಳಿ ಕಳಚಿ ಚೆಂಬೆಳಕ ಹಾಸಿನಿಂದುಪ್ಪವಡಿಸಿ. ಸಂಜೆ ನಿದ್ದೆಯನುಳಿದು ರಂಜಿಸುವ ಮೊಗ್ಗುಗಳು ಮಂಜಿಡಿದ ತುಟಿ ತೆರೆದು ನೋಡುತಿಹವು; ಕಂಜಾಪ್ತ! ನಿನ್ನನೀ ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...