(ಕ್ಯಾಂಡಿಯಾ ನಡುಗಡ್ಡೆಯ ಹತ್ತಿರ) ಕತ್ತಲೆಯ ಬರವನ್ನು ಸಾರುವಂತಹ ಕೊಂಬು ಅಂಬುಧಿಯೊಳಾಗಿಹುದು ಬೂದಿಬೆಳಕಿನ ಕಂಬ,- ಕಂಬ ಮರೆಯಾಗುತ್ತ, ಕೊಂಬು ಕಡೆಗಾಗುತ್ತ ನಿಶೆ ಬಂತು ದಶ ದಿಶೆಯಲಿ; ಚಂದ್ರಾಮಗಿಹುದೊಂದು ಕೋಡೆಂದು ಹಾಡಿನಲಿ ನುಡಿದಿದ್ದರಾಂಗ್ಲ ಕವಿಗಳು. ಕಂಡೆನದನಿಂದು: ಸಾಂದ್ರರಜನಿಯನಾಳ್ಪ ಚದುರಚ೦ದ್ರನ ತಲೆ...

ಕುಮಾರವ್ಯಾಸನ ವಾಣಿಯ ನುಡಿಯುವ ವೀಣೆಯು- ಗಮಕದ ಶಾಸ್ತ್ರಜ್ಞಾನ ಆ ಕವಿಕಾವ್ಯದ ದಿವ್ಯ ಧ್ವನಿಯಿಾ ಕೃಷ್ಣನ ಹೃದಯದ ಗಾನದ ತಾನ- ಕುವರವ್ಯಾಸನ ದೇಗುಲ ಕೃಷ್ಣನ ಹಾಡುವ ಸೊಬಗಿನ ಹೃದಯ ನವೀನ ಆ ಕವಿಯಗ್ಗಳಿಕೆಗಳಂ ಸಾಧಿಸಿ ಶೋಧಿಸುತುಣಿಸುವ ಮಧುರಸ ಪಾನ. ಎಲ...

ಕಡೆದು ನಿಲ್ಲಿಸಲಿಲ್ಲ ನಾನು ಗಾಳಿ ಗೋಪುರದ ಗೋಡೆ, ಕಂಬಗಳ ನೆಲ ಮುಗಿಲ ಗಾಳಿಯಲ್ಲಿ ಕಟ್ಟಲಿಲ್ಲ ನಾನು ತಾಜಮಹಲುಗಳ.. ಕನಸಿನ ಬುತ್ತಿ ಬಿಚ್ಚಲಿಲ್ಲ. ಸಾಮ್ರಾಜ್ಯಗಳ ನಾನು ಉರುಳಿಸಲಿಲ್ಲ. ಮತ್ತೆ ಎತ್ತರಕೆ ನಿಲ್ಲಿಸಲಿಲ್ಲ. ಮಹಲುಗಳ ಮಜಲುಗಳ ರಾಜರುಗಳ ...

ಕನ್ನಡದ ಶ್ರೀಕಂಠ ಕಾಳಿಂಗರಾಯ ಕನ್ನಡ ತಾಯ ದಯವಾಗಿ ನೀವು ಕನ್ನಡದ ನೆಲದ ವರವಾಗಿ ನೀವು ಆ ಅಂಥ ಉದಯದಲಿ ನೀವಿದ್ದಿರಿ ಎಬ್ಬಿಸಿದಿರಿ ಉದ್ದೀಪಿಸಿದಿರಿ ಸತ್ತಂತೆ ಮಲಗಿದವರ ಎಚ್ಚರಿಸಿದಿರಿ ಸುಮಧುರ ಗಾಯನದಿಂದ ಹಾಡ ತುಂಬಿದಿರಿ ನಾಡ ತುಂಬಿದಿರಿ ಪ್ರತಿಯ...

ರಷ್ಯಾದ ಲೇಖಕ ಪ್ಲಖನೋವ್ ಒಂದು ಕಡೆ ಹೀಗೆ ಹೇಳಿದ್ದಾರೆ: ‘ಕಲಾಕಾರರು ಜನರಿಂದ ಮನ್ನಣೆಯನ್ನು ಬಯಸುತ್ತಾರೆ. ಜನರು ಕಲಾಕಾರರಿಂದ ಜವಾಬ್ದಾರಿಯನ್ನು ಬಯಸುತ್ತಾರೆ. ನಿಜ, ಯಾವುದೇ ಕಲಾಕಾರರು – ಸಾಹಿತಿ, ಕಲಾವಿದ ಯಾರೇ ಆಗಿರಲಿ – ಜನಗಳಿ...

ನಡೆವ ಹಾದಿಯಲಿ ಇಡುವ ಹೆಜ್ಜೆಯಲಿ ಬೆಳಕು ಮೂಡುತಿರಲಿ ಕೆಂಪು ಪಯಣ ಬಿರುಬಿಸಿಲಿನಲ್ಲೂ ದಣಿವನ್ನು ಕಾಣದಿರಲಿ ಹೆಜ್ಜೆ ಹೆಜ್ಜೆ ಹತ್ಹೆಜ್ಜೆ ಕೂಡಲಿ ಧ್ವನಿಽ ಒಂದೆ ಇರಲಿ ದಾರಿ ನೂರು ಎಡಬಲದಿ ಸೆಳೆದರೂ ದಿಕ್ಕು ತಪ್ಪದಿರಲಿ ಭೂತದರಿವಿದೆ ಚರಿತೆ ಕಟ್ಟುವ...

ನಮ್ಮವಳು ನಾನು ನನ್ನ ಮಕ್ಕಳ, ನಮ್ಮ ಬಾಳುವೆಯ ಚೆಂಬೆಳಕು .. ಚೆಂಬೆಳಕು .. ಚೆಂಬೆಳಕು. ಹೊತ್ತುಟ್ಟ, ಹೊತ್ತು ಮುಳುಗ, ನಮಗೆ ಅವಳಿರಬೇಕು ಅವಳಿರುವಳು ಎಂತಲೆ ಆಗಿದೆ ನೇರುಪ ನಮ್ಮ ಬದುಕು… ನಿಜ ಹೇಳುವುದಾದರೆ ನಮಗೇ ಇಲ್ಲರಿ ನಮ ಬಗ್ಗೆ&#8230...

ಬುಡವಿಲ್ಲದಿರೆ ಮರ ಫಲ ನೀಡುವುದೇನು? ತಳವಿಲ್ಲದಿರೆ ಶಿರ ಬಲ ಪಡೆವುದೇನು ? ಕೆಸರ ಬಸಿರಲ್ಲಿ ಕಮಲ ಉಸಿರಾಡಿದರೆ ಕುಂದೇನು? ಕಟ್ಟಕಡೆಯವ ದೀಪವಾಗಿ ದಾರಿ ತೋರಿದೊಡೆ ತಪ್ಪೇನು? ಅಡಿ ಮುಡಿಯೆಂಬ ಭೇದ ಲಿಂಗಕ್ಕೆ ಸಮ್ಮತವೇನು? ಕಿರಿ-ಹಿರಿದೆನ್ನದೆ ಎಲ್ಲ&...

‘ಯಾಕೆ ಇಷ್ಟು ನಿಧಾನವಾಗಿ ಹೋಗುತಿದ್ದೀರಿ? ಹೀಗೆ ಹೋದರೆ ನಿದ್ದೆ ಮಾಡಿಬಿಡತೇವೆ ಅಷ್ಟೆ. ಯಾಕೆ ಬೇಗ ಬೇಗ ಹೆಜ್ಜೆ ಹಾಕಬಾರದು?’ ಫೆಲಿಸಿಯಾನೂ ರುಯೆಲಾಸ್ ಮುಂದೆ ಇದ್ದವರನ್ನು ಕೇಳಿದ. ‘ನಾಳೆ ಬೆಳಿಗ್ಗೆ ಹೊತ್ತಿಗೆ ಅಲ್ಲಿರತೇವೆ,’ ಅವರು ಅಂದರು. ಅದೇ...

ನನ್ನ ಹಾದಿಯಲ್ಲಿ ಹೂವ ಚೆಲ್ಲಿ ಸ್ವರ್ಗದ ದಾರಿಯನು ಸುಗಮ ಗೊಳಿಸಿದವರಾರು? ಮೇಲೆ ಮೇಲೆ ನೀಲ ಗಗನಕ್ಕೇರಿಸಿ ಮಿನುಗುವ ತಾರೆ ಮಾಡಿದವರಾರು? ಈ ಹಕ್ಕಿಗೆ ಗುಟುಕನು ಕೊಟ್ಟು ಗೂಡ ಬಿಟ್ಟು ಮೇಲೆ ಹಾರಲು ರೆಕ್ಕೆಗಳಿಗೆ ಬಲವ ತುಂಬಿದವರಾರು? ಪ್ರೀತಿ ವಾತ್ಸ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...