ಗೋವೆಯ ಕಡಲಿಂದ ಎದ್ದು ಬಂದ
ಜಲದೇವತೆ ನೀ ನೀಲ ಸುನೇತ್ರೀ
ಮಿಥಿಲಾ ನಗರದ ವರಪುತ್ರೀ ||

ಬಂದಿಹೆ ನೀ ಹೊಸ ಬಾಳನರಸಿ
ಆಗುವೆ ನೀ ಎನ್ನ ಬಾಳಿನ ಅರಸಿ |
ಸ್ವಾಗತ ನಿನಗೀ ಚೆಲುವಿನ ನಾಡಿಗೆ
ಕಲೆಗಳ ತೌರಾದ ಕನ್ನಡ ನಾಡಿಗೆ ||೧||

ಕವಿಗಳು ಹಾಡಿದ ಕನಸಿನ ಹಾಡು
ಕೋಗಿಲೆ ಗಾನದ ನನಸಿನ ನಾಡು |
ರಸಿಕರ ಮೋಹಕ ಉದ್ಯಾನ ನಗರ
ಆಗಲಿ ನಿನಗಿದು ಆನಂದ ಸಾಗರ ||೨||

ಗೋವೆಯ ಕಡಲಿಂದ ಎದ್ದು ಬಂದ
ಜಲದೇವತೆ ನೀ ನೀಲ ಸುನೇತ್ರೀ
ಮಿಥಿಲಾ ನಗರದ ವರಪುತ್ರೀ ||೩||
*****
೨೬-೧೦-೧೯೮೩