ಪಯಣವೆತ್ತ?

ಅಂದು,
ಸ್ವಾತಂತ್ರ್ಯ ಬೇಕೆಂದು
ನಮ್ಮ ದೇಶ ನಮಗೇ ಬೇಕೆಂದು
ಸ್ವದೇಶೀ ಚಳವಳಿಮಾಡಿ
ಹೊರಗಟ್ಟಿದರು ವಿದೇಶೀಯರ
ನಮ್ಮ ಹಿರಿಯರು,
ದೇಶಕ್ಕಾಗೇ ಜೀವತೆತ್ತವರು.

ಇಂದು,
ವಿದೇಶಿ ಬಂಡವಾಳ ಹೂಡಿಕೆದಾರರ
ನಾವೇ ಆಹ್ವಾನಿಸಿ
ಹರಾಜು ಹಾಕಲು ಸಿದ್ಧರಾಗಿರುವೆವು
ನಮ್ಮ ಸ್ವಾತಂತ್ರ್ಯವನ್ನು.
ನೆಲ ನಮ್ಮದು, ಜಲ ನಮ್ಮದು
ಹಣಹಾಕಿ ಬೆಳೆತೆಗೆಯುವವರು
ವಿದೇಶೀಯರು!
ಆದಾಯ ಅವರಿಗೆ ಕೊಳೆ ನಮಗೆ
ಲಾಭ ಅವರಿಗೆ ಪರಿಸರ ನಾಶ ನಮಗೆ
ಉಳುವವನೇ ಭೂಮಿಗೊಡೆಯನೆಂದು
ಭೂಮಿಕಳಕೊಂಡ ಭೂಪತಿಗಳು ನಾವು!

ಮುಂದೆ,
ಬೆಳತೆಗೆಯವವನೇ
ಸೊತ್ತಿಗೊಡೆಯನೆಂದು
ಸಾರ್ವಭೌಮತ್ವ ಸಾರಿದರೆ
ಇನ್ನೊಮ್ಮೆ ಗುಲಾಮತ್ವದ ಕಡೆಗೆ
ನಮ್ಮ ಮಕ್ಕಳ ಒಪ್ಪಿಸಲು
ಸಿದ್ಧರಾಗಬೇಕೇ ನಾವು?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹೇಳು, ಯಾವುದೊ ತಪ್ಪಿಗಾಗಿ ನನ್ನನು ನೀನು
Next post ಮಧ್ಯವಯಸ್ಸು

ಸಣ್ಣ ಕತೆ

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಎರಡು…. ದೃಷ್ಟಿ!

    ದೀಪಾವಳಿಯು ಸಮೀಪಿಸಿದ್ದಿತು. ದೀಪಾವಳಿಯನ್ನು ನಾವು ಪಂಚಾಗ ನೋಡದೆ ತಿಳಿದುಕೊಳ್ಳಬಹುದು. ಅದು ಹೇಗೆ? ದೀಪಾವಳಿ ಪೂರ್ವರಂಗದ ಸುಳಿವು ನಮಗೇ ಗೊತ್ತೇ ಆಗುವದು. ಮನೆಯಲ್ಲಿ ಕರಚೀ ಕಾಯಿ, ಚಿರೋಟಿಗಳನ್ನು ಕರಿಯುವ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…