ಕೆಲವು ದಿನಗಳಿಂದ ನನಗೆ ಬರೆಯಲಾಗಲಿಲ್ಲ. ಯಾಕೆಂದರೆ ನಾನು ನನ್ನ ಡೈರಿ ಕುರಿತು ಯೋಚಿಸುತ್ತಿದ್ದೆ. ನನ್ನಂತೆ ಕೆಲವರ ಪ್ರಕಾರ ಡೈರಿಯನ್ನು ಇಟ್ಟುಕೊಳ್ಳುವುದು ಚಿಲ್ಲರೆ ವಿಷಯ. ಇದರರ್ಥ ಈ ಹಿಂದೆ ನಾನು ಅದನ್ನು ಮಾಡಿರಲಿಲ್ಲ ಎಂದಲ್ಲ. ಆದರೆ ನಾನಾಗಲಿ ಅಥವಾ ಇತರರಾಗಲಿ ಈ ವಿಚಾರವಾಗಿ ಬರಿಯ ಹದಿಮೂರು ವರ್ಷಗಳ ಹುಡ...

ಭಾವ ಇರದ ಕವಿತೆ ಅದು ಅಕ್ಷರಮಾಲೆ ಜೀವ ಇರದ ಚರಿತೆ ಅದು ನೆನಪಿನ ಓಲೆ ಹರಿವು ಇರದ ಅರಿವು ಅಹುದು ಜಗಕೆ ಕೊಳಕು ತಿರುವು ಇರದ ಬದುಕು ಅದು ಯಾತರ ಬದುಕು? ನೋಟ ಇರದ ಬದುಕು ಅದಕೆ ಹಲವು ದಿಕ್ಕು ಹಿನ್ನೋಟ ತೊರೆದ ಯಾನ ಅದಕೆ ಯಾವ ದಿಕ್ಕು? ಸ್ಫೂರ್ತಿಭರಿ...

ನೋಡಿ ಕೊಂಡು ಬರಲಿ ಯಾರಿಗಾದರು ಸಹಜವಲ್ಲವೆ ಹೆತ್ತು ಹೊತ್ತವರ ತನ್ನೆಲ್ಲ ಹತ್ತಿರದವರ ನೋಡ ಬೇಕೆಂಬ ಆಸೆ. ಹೊತ್ತು ತರಲಿ ನೆನಪಿನ ಬುತ್ತಿಯನು ನೆನಪು ಉತ್ತೇಜನಕಾರಿಯಲ್ಲವೆ! ನಾವಾದರೆ ಎಲ್ಲೆಲ್ಲೋ ತಿರುಗಿ ಬರುವೆವು ಅವಳಿನ್ನೆಲ್ಲಿಗೆ ಹೋಗಿ ಬರಬೇಕು ...

ಇಷ್ಟ ದೇವತೆಯೆಂದು ಅಷ್ಟ ಸ್ತೋತ್ರವ ಹಾಡಿ ಧನ-ಕನಕ ಅರ್ಪಿಸಿ ಪೂಜಿಸಿದವರೆ… ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳ ಹಾಜರಿ ಪ್ರಮಾಣಿಸಿದವರೇ… ‘ತಾಯಿಗಿಂತ ದೇವರಿಲ್ಲ… ಜನನಿ ತಾನೆ ಮೊದಲ ಗುರುವು’...

ಮೂಲ: ಆರ್ ಕೆ ನಾರಾಯಣ್ ಸಾಯಂಕಾಲ ಅಪ್ಪ ಮನೆಗೆ ಬಂದಾಗ ಲೀಲಳ ಉತ್ಸಾಹವನ್ನು ನೋಡಬೇಕು. ಸಂತೋಷದ ಭರದಲ್ಲಿ ಚಪ್ಪಾಳೆ ತಟ್ಟಿಕೊಂಡು ಕುಣಿದಾಡಿ ಅಪ್ಪ ಮೆಟ್ಟಲು ಹತ್ತಿ ವರಾಂಡದೊಳಕ್ಕೆ ಬಂದೊಡನೆ ಓಡಿಹೋಗಿ ಅವರ ಕಾಲುಗಳನ್ನು ಕಟ್ಟಿಕೊಂಡುಬಿಟ್ಟಳು. ಪಕ್ಕ...

ಕನ್ನಡ ನಾಡು ನಮ್ಮ ನಾಡು ಭುವನೇಶ್ವರಿ ಮಡಿಲಲಿ ಪವಡಿಸಿದ ನಾಡು ಕನ್ನಡ ಚೆಲ್ವ ಕುವರ ಕುವರಿಯರ ನಾಡು ನಮ್ಮ ಚಲುವ ಕನ್ನಡ ನಾಡು ಸುಂದರ ಬನ ಸಿರಿಗಳ ಸಾಲೇ ಸಹ್ಯಾದ್ರಿ ಮಡಿಲಲಿ ಬೆಳೆದಿಹ ನಾಡೆ ಸುವಾಸನೆಯ ಶ್ರೀಗಂಧದ ಬೀಡೇ ನಮ್ಮ ಚಲುವ ಕನ್ನಡ ನಾಡೇ ತು...

ಸಪ್ತಪದಿಯ ತುಳಿಯುವಾಗ ನಾನೆಣಿಸಿದ್ದು ಅವನೂ ನನ್ನೊಡನೆ ತನ್ನ ಹೆಜ್ಜೆ ಸೇರಿಸಿದ್ದಾನೆಂದು! ನಾಲ್ಕು ಹೆಜ್ಜೆಗಳು ಸೇರಲಿಲ್ಲವೆಂದು ತಿಳಿದದ್ದು, ಭ್ರಮನಿರಸನವಾದದ್ದು ಸಂಸಾರದೊತ್ತಡಗಳು ‘ಭಾರಿ’ ಆದಾಗ! ಆಗಲೇ ತಿಳಿದದ್ದು ನನ್ನ ದಾರಿಯೇ...

ದ್ವೇಷವಿದ್ದಲ್ಲಿ ಈಗಲೆ ನನ್ನ ಶಿಕ್ಷಿಸು ಲೋಕ ಕೆಳಗೊತ್ತುತಿರುವಾಗಲೇ ನನ್ನನ್ನು ನೀನೂ ಕೈಗೂಡಿಸಿ ಕೆಳತನಕ ಬಾಗಿಸು ; ಹಳೆಗಾಯಕೆಂದೂ ಹಾಕದಿರು ಹೊಸ ಬರೆಯನ್ನು. ಒಂದು ಕೊರಗಿಂದ ಎನ್ನೆದೆಯು ಹೊರಬಂದಿರಲು ಹಿಂದಿಂದ ಬಂದು ಬೇರೊಂದಕ್ಕೆ ಗುರಿಮಾಡಿ, ಬಿ...

ಮಾತೃ ಸನ್ನಿಧಾನದಲ್ಲಿ ಮುಂಜಾನೆಯ ಬ್ರಾಹ್ಮಿ ಮಹೂರ್ತದಲ್ಲಿ ಶಿವನನ್ನು ಅರ್ಚಿಸಿ ಪೂಜಿಸಿ, ಸಾಮವೇದಗಾನದಿಂದ ಸ್ತುತಿಸಿ ಸಾಷ್ಟಾಂಗ ನಮಸ್ಕಾರ ಹಾಕಿ ಹೊರ ಬಂದೊಡನೆ ಮಾತೃಶ್ರೀಯವರ ದರ್ಶನ “ಎಂತಹ ಸೌಭಾಗ್ಯ” ಅಮ್ಮ ಇದೇ ಈಗ ನಿನ್ನನ್ನು ನೋ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...