ಕೆಲವು ದಿನಗಳಿಂದ ನನಗೆ ಬರೆಯಲಾಗಲಿಲ್ಲ. ಯಾಕೆಂದರೆ ನಾನು ನನ್ನ ಡೈರಿ ಕುರಿತು ಯೋಚಿಸುತ್ತಿದ್ದೆ. ನನ್ನಂತೆ ಕೆಲವರ ಪ್ರಕಾರ ಡೈರಿಯನ್ನು ಇಟ್ಟುಕೊಳ್ಳುವುದು ಚಿಲ್ಲರೆ ವಿಷಯ. ಇದರರ್ಥ ಈ ಹಿಂದೆ ನಾನು ಅದನ್ನು ಮಾಡಿರಲಿಲ್ಲ ಎಂದಲ್ಲ. ಆದರೆ ನಾನಾಗಲಿ ಅಥವಾ ಇತರರಾಗಲಿ ಈ ವಿಚಾರವಾಗಿ ಬರಿಯ ಹದಿಮೂರು ವರ್ಷಗಳ ಹುಡ...

ಬಟ್ಟೆಯದೆಷ್ಟು ಸುಂದರವಾದೊಡಂ ತೊಟ್ಟ ಮಾರನೆಯ ದಿನಕದು ಹಳತು ನೆಟ್ಟ ಸಸಿಯದು, ಸವಿಯ ಫಲವದು ಸೃಷ್ಟಿಯೊಳನುದಿನವು ಹೊಸತು ಕಷ್ಟ ಕೃಷಿಯೆನುತಾರಿಗೋ ಬಿಟ್ಟ ಬಾಳೆಲ್ಲ ಹಳತು – ವಿಜ್ಞಾನೇಶ್ವರಾ *****...

ಬದುಕು ಬಲು ಭಾರ ಹಾದಿಯೂ ಅತಿ ದೂರ ಮುಗಿಯದ ಪಯಣ ಎಲ್ಲಿಂದ ಎತ್ತಣ. ಸಾಗುತಿದೆ ಬದುಕು ಭಯ ಆತಂಕಗಳ ಸಂಕೋಲೆ ಉದಯಿಸುವ ಸೂರ್ಯನೊಂದಿಗೆ ನೂರಾರು ಚಿಂತೆ ಬೇಗೆ ಪರಿಭ್ರಮಿಸುತ್ತಿದೆ ಮನ ಗರ ಗರ ಸುತ್ತುವ ಹದ್ದಿನಂತೆ ಕ್ಷಣ ಚಿತ್ತ ಕ್ಷಣ ಪಿತ್ತ. ಭೀತಿ ಭೀ...

ಆರೇನೆಂದಡೂ ಓರಂತಿಪ್ಪುದೆ ಸಮತೆ ಆರು ಜರಿದವರೆನ್ನ ಮನದ ಕಾಳಿಕೆಯ ಕಳೆದರೆಂಬುದೆ ಸಮತೆ ಆರು ಸ್ತೌತ್ಯವ ಮಾಡಿಹರೆನ್ನ ಜನ್ಮಜನ್ಮದ ಹಗೆಗಳೆಂಬುದೆ ಸಮತೆ ಇಂತಿದು ಗುರುಕಾರುಣ್ಯ ಮನವಚನಕಾಯದಲ್ಲಿ ಅವಿತತವಿಲ್ಲದಿರ್ದಡೆ ಕಪಿಲಸಿದ್ಧಮಲ್ಲಿಕಾರ್ಜುನಾ ನಿನ್...

ಹೊಲೆಯ! ಹೊಡೆಯಬೇಡೆಲೋ ಹಳ್ಳಿ ಎತ್ತನು! ಕ್ರೂರಿ! ಕನಿಕರಿಲ್ಲವೋ ಕೊಲ್ಲೊ ಕುತ್ತನು! ೧ ದುಡಿದು ದೇಹವೆಲ್ಲವೂ ಕೊರಗಿ ಕುಂದಿದೆ! ಸುಟ್ಟ ಸುಣ್ಣದಂತೆಯೇ ಸತ್ವಗುಂದಿದೆ! ೨ ಎಲವೊ ನಿನಗಾಗಿಯೇ ರಕುತ ಸುಟ್ಟಿದೆ! ತಿಂದ ನಿನ್ನ ಹೊಟ್ಟೆಯೇ ಉಬ್ಬಿ ಬಿಟ್ಟಿದ...

ಈ ಸಂಜೆಯ ಕೌನೆರಳು, ಬಾಗಿಲ ಬಳಿ ಅವನ ಕಾಲ ಸಪ್ಪಳ, ದೇವರ ಮುಂದಿನ ನೀಲಾಂಜನದಲಿ ಬೆಳಕು ಮಂದವಾಗಿ ಹಾಸಿ, ಯಾರು ಶುರುವಿಟ್ಟುಕೊಂಡಿದ್ದಾರೆ ಭಜನೆಯ ಧ್ಯಾನ, ಮಳೆ ಇಲ್ಲದೇ ಬಿರಿದ ನೆಲದ ಮಣ್ಣಿನ ವಾಸನೆ ಹರಡಿ, ಅಂವ ಬಂದ ಹೊತ್ತು, ಅವಳ ಕಣ್ಣುಗಳಲಿ ನೀರ ...

ನಾದ ವೇದಗಳ ಶಿವೆ ಭರತ ಮಾತೆಯ ಓಂಕಾರಗೀತೆಯ ಶಿರೋಮಣಿಗಳ ಮಾಲೆಯೆ ನಿನಗೆ ವಂದನೆ ನಿನಗೆ ವಂದನೆ ಶಿವೆ ||ನಾ|| ಆನಂದಾನುರಾಗದ ಪದ್ಮ ಮುಕುಟ ಶೋಭೆಯೆ ಸುರನರ ಸೇವಿತೆ ಸುಂದರಿ ಮಾಧವಿ ಲಾವಣ್ಯಕಲಾವಲ್ಲಭೆ ನಿನಗೆ ವಂದನೆ ಶಿವೆ ||ನಾ|| ಸಂಗೀತ ಸಾಹಿತ್ಯ ಪ...

ನಾ ಎತ್ತೆತ್ತ ನೋಡಲಿ ನೀ ಜಗನ್ಮಾತೆ ನಿನ್ನ ಮಾಯೆಯೆ ಈ ಜಗತ ವ್ಯಾಪಿಸಿದೆ ನಿನ್ನ ಮರೆತು ನಿನ್ನ ಮಾಯೆಯಲ್ಲಿ ನಾ ಮುಳಗಿ ಮತ್ತೆ ಮಾಯೆಯೇ ಮೋಹಿಸಿದೆ ಜನನ ಮರಣಗಳ ಸುತ್ತುವರಿಯುತ್ತ ಕಷ್ಟ ಸುಖಗಳಿಗೆಲ್ಲ ಕೈ ಚಾಚುತ್ತ ಬಾಳಿರುವೆ ಈ ನರಕ ಸದೃಶ್ಯ ಬಾಳಿನಲ...

ಪತಿಯ ಮರಣದ ದೆಸೆಯಿಂದ ಮುಖವನ್ನು ತೋರಿಸಲಿಕ್ಕೆ ನಾಚುವ ವಾಗ್ದೇವಿಯು ಬಂಧನದಲ್ಲಿದ್ದಂತೆ ಮನೆಯ ಒಳಗೆ ಇದ್ದುಕೊಂಡಳು. ಕರು ಣಾಳುವಾದ ಭೀಮಾಜಿಯು ಅನಳನ್ನು ಆಗಾಗ್ಗೆ ಕಂಡು ಮಾತಾಡುವುದಕ್ಕೆ ಯಾವುದೊಂದು ಅಂತರಾಯವಿರಲಿಲ್ಲ. ಶಾಬಯ್ಯನ ಭೇಟಗೆ ಮಾತ್ರ ಕೊ...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...