ಬದುಕು ಬಲು ಭಾರ
ಹಾದಿಯೂ ಅತಿ ದೂರ
ಮುಗಿಯದ ಪಯಣ
ಎಲ್ಲಿಂದ ಎತ್ತಣ.
ಸಾಗುತಿದೆ ಬದುಕು ಭಯ
ಆತಂಕಗಳ ಸಂಕೋಲೆ
ಉದಯಿಸುವ ಸೂರ್ಯನೊಂದಿಗೆ
ನೂರಾರು ಚಿಂತೆ ಬೇಗೆ
ಪರಿಭ್ರಮಿಸುತ್ತಿದೆ ಮನ
ಗರ ಗರ ಸುತ್ತುವ ಹದ್ದಿನಂತೆ
ಕ್ಷಣ ಚಿತ್ತ ಕ್ಷಣ ಪಿತ್ತ.
ಭೀತಿ ಭೀಕರತೆಯ ಸೆಳೆತ
ಹುಚ್ಚು ಕುದುರೆಯ ನಾಗಾಲೋಟ
ಕಾಣದು ಮುಕ್ತಿಯ ತೀರ
ಗುರಿ ಸೇರಲು ಕಾತುರ
ನೂರಾರು ಸಮಸ್ಯೆಗಳ ಸಾಗರ
ಜೊತೆಗೆ ಬಂದವರೆಲ್ಲಾ
ಸಾಗಿದರು ಬಲು ದೂರ
ಹಲ್ಲು ಕಚ್ಚಿ ಮುಷ್ಠಿ ಬಿಗಿದು
ಈಸಬೇಕು
ಇದ್ದು ಜೈಸಬೇಕು.
*****