ವಾಗ್ದೇವಿ – ೪೩

ವಾಗ್ದೇವಿ – ೪೩

ಪತಿಯ ಮರಣದ ದೆಸೆಯಿಂದ ಮುಖವನ್ನು ತೋರಿಸಲಿಕ್ಕೆ ನಾಚುವ ವಾಗ್ದೇವಿಯು ಬಂಧನದಲ್ಲಿದ್ದಂತೆ ಮನೆಯ ಒಳಗೆ ಇದ್ದುಕೊಂಡಳು. ಕರು ಣಾಳುವಾದ ಭೀಮಾಜಿಯು ಅನಳನ್ನು ಆಗಾಗ್ಗೆ ಕಂಡು ಮಾತಾಡುವುದಕ್ಕೆ ಯಾವುದೊಂದು ಅಂತರಾಯವಿರಲಿಲ್ಲ. ಶಾಬಯ್ಯನ ಭೇಟಗೆ ಮಾತ್ರ ಕೊಂಚ ತೊಡಕುಂಟಾಯಿತು. ಆದರೆ ಭೀಮಾಜಿಯ ಪರಿಮುಖ ವಾಗ್ದೇವಿ ಶಾಬಯ್ಯರೊಳಗೆ ತಂತಿ ಟಪ್ಪಾಲಿನಂತೆ ಸುಖದುಃಖಗೋಷ್ಟಿಯು ಸಮಯಾ ನುಸಾರವಾಗಿ ನಡೆಯುತ್ತಲಿತ್ತು. ಆಬಾಚಾರ್ಯನ ಅಕಸ್ಮಾತ್‌ ಮರಣ ದಿಂದ ಇಡೀ ಮಠದ ಮೇಲೆ ದುಮ್ಮಾನದ ಕಾರ್ಮುಗಿಲು ಮುಸುಕಿ ಕೆಲವು ಸಮಯಗಳಲ್ಲಿ ವಿಶೇಷವಾದ ಕಾರುಭಾರು ಅಲ್ಲಿ ನಡೆಯದೆ ಸಕಲ ವಿಷಯ ಗಳಲ್ಲಿಯೂ ಮೌನವೇ ಪ್ರಧಾನವಾಗುತಿತ್ತು. ಚತುರ್ಮಠಾಧಿಪತಿಗಳ ಪತ್ರಿಕೆಗೆ ಪ್ರತ್ಯುತ್ತರ ಕಳುಹಿಸಿಕೊಡುವುದಕ್ಕೆ ಹಿಂದೆ ವಿವರಿಸಿದ ಮರಣದ ಕಾರಣದಿಂದ ಮರೆತುಹೋದ ಕುಮುದಪುರದ ಮಠಾಧೀಶರಿಗೆ ನೆನಪು ಹುಟ್ಟಿಸುವದಕ್ಕೋಸ್ಟರ ಪುನರ್ಪತ್ರಿಕೆಯು ತಲಪಿತು. ಅದನ್ನು ನೋಡಿ ಚಂಚಲನೇತ್ರರಿಗೆ ಮತ್ತಷ್ಟು ಸಿಟ್ಟೇರಿತು.

ಈ ಯತಿಗಳು ಶಾಸ್ತ್ರಾಧಾರಗಳನ್ನು ಹುಡುಕಿ ತೆಗೆಯುವದರಲ್ಲೇ ಆಗಲಿ ಬುದ್ಧಿವಂತಿಕೆಯಲ್ಲೇ ಆಗಲಿ ಕಡಿಮೆ ಸಾಮರ್ಥ್ಯಉಳ್ಳವರಲ್ಲ. ವಕೀಲ ಮುಂತಾದ ಲೌಕಿಕ ಜನರನ್ನು ಕರೆಸಿ, ಆಲೋಚನೆ ಕೇಳುವ ಅವಶ್ಯಕತೆಯು ಅವರ ಮನಸ್ಸಿಗೆ ಬರಲಿಲ್ಲ. ಪಾರುಪತ್ಯಗಾರನನ್ನಾದರೂ ಕರೆಸಿ ಅವನ ತಾತ್ಸರ್ಯವನ್ನು ತಿಳಿಯುವದು ಅಗತ್ಯವೆಂದು ಅವರು ತಿಳುಕೊಳ್ಳಲಿಲ್ಲ. ಅವರು ಸ್ವಬುದ್ಧಿಯಿಂದ ಸೂರ್ಯನಾರಾಯಣನ ಆಶ್ರಮವನ್ನು ಕುರಿತು ಪ್ರಶ್ನಪತ್ರಕ್ಕೆ ಪ್ರತ್ಯುತ್ತರವನ್ನು ಗೀರ್ವಾಣ ಭಾಷೆಯಲ್ಲಿ ಬರೆದು ಕಳುಹಿಸಿ ದರು. ಅದರ ಮುಖ್ಯ ತಾತಶ್ಸರ್ಯ ಏನಾಗಿತ್ತೆಂದರೆ:–ವಿಪ್ರಕುಲೋತ್ತಮ ರಾದ ಮಾತಾಹಿತರ ಸಂಯೋಗದಿಂದ ಉದ್ಭವಿಸಿದ ಪಿಂಡವು ಬ್ರಹ್ಮತೇಜಾ ಧಿಕ್ಯದಿಂದ ಅನುದಿನ ಬೆಳೆಯುತ್ತಾ ಪ್ರಫುಲ್ಲತೆಯನ್ನುಹೊಂದಿ ನ್ಯೂನಾತಿರಿಕ್ತ ವಿಲ್ಲದೆ ವಿರಾಜಿಸಿದ ಬಗೆಯೇ ಆಶ್ರಮಹೊಂದುವ ಯೋಗ್ಯತೆಯ ಚಿಹ್ನೆ ಯಾಗಿ ತೋರಿದ ಕಾರಣ ಅಂಥಾ ಯೋಗ್ಯ ಪುರುಷನಾದ ಸೂರ್ಯನಾರಾ ಯಣನನ್ನು ತನ್ನ ಉತ್ತರಾಧಿಕಾರಿಯಾಗಿ ನೇಮಿಸಿದ್ದೇನೆ. ಈ ಸ್ವತಂತ್ರ ತನ್ನೊಬ್ಬನದಾಗಿರುವದಲ್ಲದೆ ಅನ್ಯನೊಬ್ಬನು ಎಷ್ಟು ಶ್ರೇಷ್ಠನಾದರೂ ಅದ ರಲ್ಲಿ ಚರ್ಚೆ ಮಾಡತಕ್ಕ ಯೋಗ್ಯತೆಯುಳ್ಳನಲ್ಲ. ಇತರ ದ್ವೇಷದಿಂದ ವೈಮನಸ್ಸು ಹುಟ್ಟಿದ ನೃಸಿಂಹಪುರದ ಶ್ರೀಪಾದಂಗಳ ಕುತಂತ್ರದಿಂದ ಹುಟ್ಟಿದ ಈ ಪ್ರಸಂಗದಲ್ಲಿ ಉಳಕಿ ಮಠಾಧಿಪತಿಗಳು ಸೇರಿಕೊಂಡದ್ದಕ್ಕಾಗಿ ಬಹಳ ವ್ಯಸನಪಡುತ್ತೇನೆ. ನ್ಯಾಯವಾದ ಉತ್ತರಾಧಿಕಾರಿಯು ಯೋಗ್ಯ ನಾಗಿರುತ್ತಾ ಅವನನ್ನು ತ್ಯಜಿಸಿ ಇನ್ನೊಬ್ಬಗೆ ನೇಮಿಸುವ ಅಧಿಕಾರವು ಚತುರ್ಮಠದವರ್ಯಾರಿಗೂ ಇಲ್ಲ. ಅಂಥಾ ಪುಂಡತನ ಅವರು ನಡೆಸಿದರೆ ಅವರು ದೇವರ ಅವಕರಣಕ್ಕೆ ಒಳಗಾಗುವರು; ಹಾಗೂ ಲೋಕನಿಂದ್ಯರಾಗಿ ತುಚ್ಛಕ್ಕೆ ಪಾತ್ರರಾಗುವರು. ಮತ್ತು ತನ್ನ ಮಠಕ್ಕೆ ಉಂಟಾಗುವ ಸಕಲ ನಷ್ಟ ತೆರಲಿಕ್ಕೂ ಬಾಧ್ಯರಾಗುವರು. ಇಂಥಾ ಕಠಿಣವಾದ ಪ್ರತ್ಯುತ್ತರವನ್ನು ನೋಡಿ ಚತುರ್ಮಠದಲ್ಲಿ ಪ್ರಮುಖರಾದ ನೃಸಿಂಹಪುರದ ಮಠಾಧೀಶರಿಗೆ ಈರ್ಷೆಯು ಏರಿತು. ಅವರ ಸಂಗಡಿಗರಿಗೆ ಕೊಂಚ ನಾಚಿಕೆಯೂ ಪಶ್ಚಾ ತ್ತಾಪವೂ ಹುಟ್ಟಿತು. ಕಾರ್ಯಮುಂದರಿಸಿಹೋಯಿತು. ಏನು ಮಾಡು ವದೆಂಬ ಚಾಂಚಲ್ಯ ಉಂಟಾಯಿತು.

ಜ್ಞಾನಸಾಗರತೀರ್ಥರು ತಡಮಾಡದೆ ದ್ವಂದ್ವ ಮಠಾಧಿಪತಿಯಾದ ತನ್ನಅಧಿಕಾರವನ್ನು ನಡೆಸಲಕ್ಕೆ ಉದ್ಯುಕ್ತರಾದರು. ಬೇರೆ ಮೂವರು ಯತಿ ಗಳು ಸಮ್ಮತಿಯನ್ನು ಕೊಡಲಿಕ್ಕೆ ಜಾಪ್ಯ ಮಾಡಲಿಲ್ಲ. ನಾಲ್ವರು ಯತಿಗಳು ಏಕ ರೀತಿಯಲ್ಲಿ ಸೂರ್ಯನಾರಾಯಣನು ಆಶ್ರಮ ಪಡೆಯಲಿಕ್ಕೆ ಅಯೋಗ್ಯ ನೆಂಬ ನಿರ್ಣಯವನ್ನು ಬರೆದು ಅವನ ಸ್ಥಳದಲ್ಲಿ ನಿರಾಕ್ಷೇಪಕರವಾದ ಇನ್ನೊಬ್ಬನನ್ನು ಆರಿಸುವದಕ್ಕೆ ಯೋಚಿಸಿದರು. ಒಂದುವೇಳೆ ಮುಂದೆ ಆ ಆಶ್ರಮವು ಊರ್ಚಿವಾಗಿ ದ್ವಂದ್ವ ಮಠದವರಿಂದ ಆರಿಸಲ್ಪಟ್ಟ ಶಿಷ್ಯನು ಆತಂತ್ರನಾಗುವ ಕಾಲ ಬಂದರೆ ಮಾಡಬೇಕಾಗುವ ಮುಂಜಾಗ್ರತೆಯನ್ನು ಕುರಿತು ಸಣ್ಣದೊಂದು ವಾದ ಹುಟ್ಟಿತು. ಅಂಥಾ ವೈಪರೀತ್ಯ ಸಂಭವಿಸಿದರೆ ದ್ವಿತೀಯಾಶ್ರಮಹೊಂದಿದ ಯತಿಗೋಸ್ಕರ ಚತುರ್ಮಠದವರು ಈಗಲೇ ವಂತಿಗೆ ಪರಿಮುಖ ಭಂಡಾರವನ್ನು ಅನುಕೂಲಿಸಿಕೊಂಡು ಅವನ ಪೋಷಣೆ ನಡೆಯುವ ಹಾಗೆ ನೋಡಿಕೊಳ್ಳುವದೆಂದು ಜ್ಞಾನಸಾಗರರು ಅಭಿಪ್ರಾಯ ಪಟ್ಟರು. ಆಶ್ರಮ ಕೊಡುವ ಮಠದವರೇ ಭಂಡಾರವನ್ನು ಸ್ವಂತದಿಂದ ಸ್ಥ್ರಾಪಿ ಸಬೇಕು; ತಾವು ಚಿಕ್ಕಾಸುತೆರುವವರಲ್ಲವಾಗಿ ಉಳಿದ ಮೂರು ಮಠಾಧಿಪತಿ ಗಳು ಖಂಡಿತವಾಗಿ ಹೇಳಿಬಿಟ್ಟರು. ನೃಸಿಂಹಮಠಾಧೀಶರು ದೊಡ್ಡ ಇಕ್ಕಟ್ಟ ನಲ್ಲಿ ಸಿಲುಕಿದರು. ಹಣದ ಆಸೆಯಿಂದ ಹಿಂಜರಿದರೆ ಅಪಹಾಸ್ಯಕ್ಕೆ ಕಾರ ಣವಾಗುವದು. ಹಣದ ಮುಖನೋಡಿ ಈ ಪ್ರಸ್ತಾಸವನ್ನೇ ಬಿಟ್ಟು ಸುಮ್ಮಗಿರುವುದಕ್ಕೆ ಬೇರೆ ಮೂವರು ಯತಿಗಳಿಗೆ ಮನಸ್ಸಿದ್ದರೂ ಜ್ಞಾನಸಾಗರರು ಹಟಬಿಡುವುದಕ್ಕೆ ಮನಸ್ಸುಳ್ಳ ವರಾಗಲಿಲ್ಲ.

ಯಜಮಾನರ ಅನುಜ್ಞೆಗನುಗುಣವಾಗಿ ಪಾರುಪತ್ಯಗಾರನು ತಕ್ಕ ಪ್ರಾಯದ ಸುಲಕ್ಷಣ ಹುಡುಗನೊಬ್ಬನನ್ನು ಆರಿಸಿ ಅವನ ತಂದೆತಾಯಿಗಳಿಗೆ ಒಂದು ಸಾವಿರ ರೂಪಾಯಿ ಮುಂಗಡವಾಗಿ ಕೊಡುವುದಕ್ಕೆ ವಾಗ್ದತ್ತ ಮಾಡಿ ಹೋಯಿತು. ಎಷ್ಟು ಬೋಧಿಸಿದರೂ ಬೇರೆ ಮಠಗಳಿಂದ ಕಿಂಚಿತ್‌ ದ್ರವ್ಯ ವಾದರೂ ಕೊಡುವದಕ್ಕೆ ಯತಿಗಳು ಸಮ್ಮತಿಪಡುವುದಿಲ್ಲ. ದ್ವಿತೀಯಾಶ್ರಮ ಕೊಡುವುದಕ್ಕೆ ಮುಹೂರ್ತ ಹ್ಯಾಗೂ ಮೊದಲೇ ನಿಶ್ಚಯಿಸಿಟ್ಟತ್ತು. ಒಂದು ಕಡೆಯಿಂದ ಮರ್ಯಾದೆಯ ಭಯವೂ ಇನ್ನೊಂದು ಕಡೆಯಿಂದ ದ್ರವ್ಯದಾ ಶೆಯೂ ಜ್ಞಾನಸಾಗರರನ್ನು ಚಿಂತಾಸಾಗರದಲ್ಲಿ ಅದ್ದಿದವು. ಹಗಲು ರಾತ್ರೆ ನಿಟ್ಟುಸಿರುಬಿಡುತ್ತಾ ಪ್ರೇತಪಿಶಾಚಿ ಸೋಂಕಿದವರಂತೆ ಕಾಣಿಸಿಕೊಳ್ಳುವ ತನ್ನ ಒಡೆಯನ ಅವಸ್ಥೆಯನ್ನು ಸಿಹಿಸಲಾರದೆ ಪಾರುಪತ್ಯಗಾರನು ತಾನಾಗಿ ವ್ಯಸ ನವನ್ನು ಕುರಿತು ರಹಸ್ಯವಾಗಿ ಪ್ರಭೆ ಮಾಡಿದಾಗ ಬಾಯಿಬಿಡದೆ ನಿರ್ವಾಹ ವಿಲ್ಲದ್ದರಿಂದ ತನ್ನ ದುಮ್ಮಾನದ ಕಾರಣವನ್ನು ಅವರು ವಿವರಿಸಿದರು: “ಹಣದ ಅಭಿಲಾಷೆ ಮಾಡುವ ಸಮಯವು ಇದಲ್ಲ. ಸಂಸ್ಥಾನಕ್ಕೆ ದೇವರ ದಯೆಯಿಂದ ಏನೂ ಕಡಿಮೆ ಇಲ್ಲ. ಇಂಥಾ ಹತ್ತು ಆಶ್ರಮಗಳನ್ನು ಕೊಟ್ಟರೂ ಸಾಕಷ್ಟು ಭಂಡಾರ ಪ್ರತ್ಯೇಕಿಸಿಡಬಹುದು” ಎಂದು ಪಾರುಪತ್ಯ ಗಾರನುಹೇಳಿದನು. ನಿನ್ನ ಮನಸ್ಸಿದ್ದಂತಾಗಲೆಂದು ಜೀವಸಂಕಟಕ್ಕೆ ಒಂದು ಪ್ರತ್ಯುತ್ತರವನ್ನು ಯಜಮಾನರು ಕೊಟ್ಟರು. ಕೂಡಲೇ ಪಾರುಪತ್ಯಗಾರನು ಮುಂದಿನ ಕೆಲಸ ಸುಧಾರಿಸಲಿಕ್ಕೆ ಉಪಕ್ರಮಿಸಿದನು.

ನೋಡಿಟ್ಟ ಮುಹೂರ್ತದಲ್ಲಿ ಆಶ್ರಮವು ಆಯಿತು. ಈ ಒಸಗೆಯು ಕುಮುದಪುರಕ್ಕೆ ತಲಪಿತು. ವಾಗ್ದೇವಿಗೂ ಚಂಚಲನೇತ್ರರಿಗೂ ಕಳವಳ ಹುಟ್ಟಿತು. ದುಷ್ಮಾನರ ಹಟವು ಸಿದ್ಧಿಸುವ ಕಾಲಬಂತೇ ಎಂದು ಉಭ ಯತರು ಹೆಚ್ಚು ವ್ಯಾಕುಲ ಪಟ್ಟರೂ ಭಯಪಟ್ಟವರಂತೆ ತೋರಿಸಿಕೊಳ್ಳದೆ ಇರುವವರಾದರು. ಇನ್ನು ಮುಂದೆ ರಾಜದ್ವಾರದಲ್ಲಿರುವ ಪ್ರಮುಖ ಉದ್ಯೋ ಗಸ್ಥರ ಕೃಪೆಯನ್ನು ದೊರಕಿಸಿಕೊಳ್ಳುವುದರ ಮೇಲೆ ತಮ್ಮ ಭವಿಷ್ಯವು ಹೊಂದಿಕೊಂಡಿರುವದಾದ ಕಾರಣ ಈ ಮುಖ್ಯ ವಿಷಯಕ್ಕೆ ಲಕ್ಷ್ಯಕೊಟ್ಟರೆ ಜಯಹೊಂದುವುದಕ್ಕೆ ಪ್ರಯಾಸವಾಗದೆಂಬ ನಂಬಿಗೆಯಿಂದ ಉಭಯತ್ರರೂ ಸ್ವಸ್ಥ ಮಾನಸರಾದರು. ಯಾವುದಕ್ಕೂ ಭೀಮಾಜಿಯನ್ನು ಕರೆಸಿ ಈ ಜನ್ಯ ವನ್ನು ಅವನ ಕಿವಿಗೆ ಹಾಕಿ ಅವನ ಆಪ್ತಾಲೋಚನೆಯನ್ನು ಕೇಳುವದ ಕಾಗಿ ಒಬ್ಬ ಚಾರನನ್ನು ಕೊತ್ವಾಲನ ಮನೆಗೆ ವಾಗ್ದೇವಿಯು ಕಳುಹಿಸಿದಳು. ಅವನು ಊಟದಲ್ಲಿರುವದರಿಂದ ಅದು ತೀರಿದಾಕ್ಷಣ ಬರುವನೆಂದು ಉತ್ತರ ಬಂತು. ಅಷ್ಟರಲ್ಲಿ ಮಠದಲ್ಲಿ ಒಂದು ದೊಡ್ಡ ಅನಾಹುತ ನಡೆಯಿತು. ಅದೇ ನೆಂದು ವರ್ಣಿಸುವುದಕ್ಕೆ ಮುಂಚೆ ವಾಚಕರ ಮನಸ್ಸಿಗೆ ಹಿಂದಿನ ಸಣ್ಣ ದೊಂದು ವಿದ್ಯಮಾನವನ್ನು ನೆನಪಿಗೆ ತರುವ ಅಗತ್ಯವದೆ.

ಸೂರ್ಯನಾರಾಯನ ಆಶ್ರಮವನ್ನು ಕುರಿತು ಚಂಚಲನೇತ್ರರು ಅಕೆ ಮನಸ್ಸು ತೋರಿಸಿಕೊಂಡ ಸಂಬಂಧ ವಾಗ್ದೇವಿಯು ಅವರ ಕೂಡೆ ಜಗಳ ವಾಡಿ ಪ್ರತ್ಯೇಕ ಬಿಡಾರ ಮಾಡಿದಳಷ್ಟೆ. ಆ ಬಿಡಾರದಲ್ಲಿರುವಾಗ ನೇಮ ರಾಜ ಸೆಟ್ಟಿಯು ಶೃಂಗಾರಿಯ ಮೇಲೆ ವ್ಯಾಮೋಹಪಟ್ಟು ಅವರಿಬ್ಬರಲ್ಲಿ ಗುಹ್ಯಾತಿಗುಹ್ಯವಾಗಿ ಸ್ನೇಹಭಾವ ವೃದ್ಧಿಯಾಗುತ್ತ ಬರುವದು ವಾಗ್ದೇ ವಿಯು ಅರಿತವಳಾಗಿದ್ದಳು. ಈ ದೆಸೆಯಿಂದಲೇ ಮಠದಿಂದ ಕೇಳಿದಷ್ಟು ಹಣವನ್ನು ಅವನು ಸಾಲವಾಗಿ ಕೊಟ್ಟು ಅನುದಿನವೂ ವಾಗ್ದೇವಿಯ ಬಿಡಾ ರಕ್ಕೆ ಬಂದು ಸಮಯಾನುಸಾರ ಶೃಂಗಾರಿಯ ಸಮಾಗಮದಲ್ಲಿ ರವಷ್ಟು ಹೊತ್ತು ಕಳೆಯುತಿದ್ದನು. ತಿಪ್ಪಾಶಾಸ್ತ್ರಿಯು ಶೃಂಗಾರಿಯ ಪ್ರಥಮ ಮಿತ್ರ ನಾಗಿ ಇವರೊಳಗಿನ ಅನ್ಯೋನ್ಯವು ಹೆಚ್ಚುತ್ತಾ ಬರುವ ಸಂಧಿಯಲ್ಲಿಯೇ ನೇಮರಾಜ ಸೆಟ್ಟಿಯು ಅವಳ ಮೋಹಜಾಲದಲ್ಲಿ ಸಿಲುಕಿದ ಕಾರಣ ಅವಳಿಗೆ ತಿಪ್ಪಾಶಾಸ್ತ್ರಿಯ ಮೇಲಿನ ಪ್ರೀತಿಯು ಕಡಿಮೆಯಾಗುತ್ತಾ ಬರುವದಾಯಿತು. ಇದುತಿಪ್ಪಾಶಾಸ್ತ್ರಿಗೆ ಗೊತ್ತಾಗಿ ಅದರ ಕಾರಣವು ತಿಳಿದದ್ದರಿಂದ ನೇಮ ರಾಜನ ಮೇಲೆ ಶಾಸ್ತ್ರಿಗೆ ಹಗೆಯು ಬೆಳೆಯುತ್ತಾ ಬಂತು. ಆ ವರ್ತಮಾನ ವನ್ನು ಹ್ಯಾಗಾದರೂ ದೂರಪಡಿಸಿ ಶೃಂಗಾರಿಯ ಪ್ರೀತಿಯನ್ನು ತಾನೊಬ್ಬನೇ ಅಪಹರಿಸಿಕೊಳ್ಳ ಬೇಕೆಂಬ ದೊಡ್ಡ ಆತುರವು ಅವನಿಗೆ ವೇಷ್ಟಿಸಿರುತಿತ್ತು. ಪರಂತು ಅವನ ಬಯಕೆಯು ನೆರವೇರಲಿಲ್ಲ. ವೈಷಮ್ಯದ ಕುರುಹುಗಳೇ ಶೃಂಗಾರಿಯ ನಡವಳಿಕೆಯಲ್ಲಿ ಅವನಿಗೆ ಕಂಡುಬಂದು ರೋಷ ಉಂಟಾ ಯಿತು. ಕಾಲಕಳೆಯುತ್ತಾ ಶೃಂಗಾರಿಯ ಮುಖಾವಲೋಕನ ಅಪರೂಪ ವಾಗಿಯಾದರೂ ಶಾಸ್ತ್ರಿಗೆ ದೊರಕುವದು ದುರ್ಲಭವಾಯಿತು. ಶಾಸ್ತ್ರಿಯು ಕ್ರೋಧ, ಮೋಹ ಮತ್ತು ಮತ್ಸರ ತಡೆಯಲಾರದೆ, ನೇಮರಾಜನನ್ನು ವಧಿಸಿಯಾದರೂ ಶೃಂಗಾರಿಯನ್ನು ಸಂಪೂರ್ಣವಾಗಿ ತನ್ನ ಸ್ವಾಧೀನ ಇಟ್ಟು ಕೊಳ್ಳದಿರಲಾರೆನೆಂದು ಭಾಷೆತೊಟ್ಟುಕೊಂಡ್ಕು ತನ್ನ ವಿರೋಧಿಯನ್ನು ಕೊಲ್ಲ ಲಿಕ್ಕೆ ಅವಕಾಶವನ್ನು ಕಾಯುತ್ತಾ ಇದ್ದನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಅದ್ವೈತ
Next post ಜಗನ್ಮಾತೆಯಲಿ ಬೇಡಿಕೆ

ಸಣ್ಣ ಕತೆ

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಅಜ್ಜಿ-ಮೊಮ್ಮಗ

    ಅಜ್ಜವಿ-ಮೊಮ್ಮಗ ಇದ್ರು. ಅವ ಅಜ್ಜವಿಕಲ್ ಯೇನೆಂದ? "ತಾನು ಕಾಶಿಗೆ ಹೋಗಬತ್ತೆ. ಮೂರ ರೊಟ್ಟಿ ಸುಟಕೊಡು" ಅಂತ. "ಮಗನೇ, ಕಾಶಿಗೆ ಹೋದವರವರೆ, ಹೋದೋರ ಬಂದೋರಿಲ್ಲ. ನೀ ಕಾಶಿಗೆ ಹೋಗ್ವದೆ… Read more…

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಗ್ರಹಕಥಾ

    [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

cheap jordans|wholesale air max|wholesale jordans|wholesale jewelry|wholesale jerseys