ವಾಗ್ದೇವಿ – ೩೯

ವಾಗ್ದೇವಿ – ೩೯

ಶ್ರೀಕುಮುದಪ್ರರದ. ಮಠಾಧಿಪತಿ ಚಂಚಲನೇತ್ರ ಶ್ರೀಪಾದಂಗಳು ವೃದ್ಧಾಪ್ಯದದೆಸೆಯಿಂದ ತನಗೆ ಉತ್ತರಾಧಿಕಾರಿಯಾಗಿ ಸೂರ್ಯನಾರಾಯ ಣಾಚಾರ್ಯನೆಂಬ ಯೋಗ್ಯ ಹುಡುಗನನ್ನು ಆರಿಸಿ ಅವನಿಗೆ ವಾಡಿಕೆಯಿರುವ ಕ್ರಮದಲ್ಲಿ ಆಶ್ರಮಕೊಡುವುದಕ್ಕೆ ಮುಹೂರ್ತವನ್ನು ನೋಡಿರುತ್ತಾರೆ. ಈ ಮಠದಮೇಲೆ ದೀರ್ಥಕಾಲದಿಂದ ದ್ವೇಷ ಉಳ್ಳವನಾದ ವೇದವ್ಯಾಸ ಉಪಾ ಧ್ಯನೆಂಬ ದುರ್ವಿವಾದಿಯು ಬೇರೆ ಕಲವು ತುಂಟರನ್ನು ತನ್ನ ಒತ್ತಾಸೆಗೆ ತೆಗೆದುಕೊಂಡು ವಿವಿಧ ರೀತಿಯಲ್ಲಿ ಚಂಚಲನೇತ್ರರಿಗೆ ಕೇಡುಮಾಡಲಿಕ್ಕೆ ಪವಿತ್ರಕರ್ತನಾಗಿದ್ದಾನೆ. ಬಂಜೆ ಸೂರ್ಯನಾರಾಯಣಾಚಾರ್ಯನ ಬ್ರಹ್ಮ ಪ್ರತಿಷ್ಠೆಕಾಲದಲ್ಲಿ ಅನಾಹುತ ಮಾಡತೊಡಗಿ ತಕ್ಷೀರುಕರವಾಗಿ ನಡಕೊಂಡ ದ್ದಕ್ಕಾಗಿ ಅವನಿಗೂ ಅವನ ತಮ್ಮನಿಗೂ ಪೇಷ್ಕಾರರು ಛೋಟಾ ಕಿತಾಬಿನ ಪ್ರಕರಣದಲ್ಲಿ ನಜರಬಂದಿ ಜುರುಮಾನೆ ಇತ್ಯಾದಿ ಶಿಕ್ಷೆವಿಧಿಸಿದ್ದಾಗಿ ತಿಳಿದು ಬರುತ್ತೆ. ಆದರೂ ಅವನು ಹಟಸಾಧನೆಯನ್ನು ಬಿಡದೆ ಈವಾಗ ತಗಣೆ ಮರಿಯಂತೆ ಉಪದ್ರವಕರನಾಗಿ ತೋರುವ ಹೊಸ ವಕೀಲ ರಾಮದಾಸ ರಾಯನ ದುರ್ಬೋಧನೆಯ ಬಲದಿಂದ ಮತ್ತಷ್ಟು ಉನ್ಮತ್ತನಾಗಿ ಪಟ್ಟಣದ ವೈಷ್ಣವ ಮತಸ್ಸರಲ್ಲಿ ಹೆಲವು ಜಗಳಗಂಟರ ಕೂಟವನ್ನು ಪದ್ಮನಾಭ ಘನ ಪಾಟಯ ಮಠದಲ್ಲಿ ಕೂಡಿಸಿ ತಮ್ಮಷ್ಪಕ್ಕೆ ರಾಜಮಾರ್ಗದಲ್ಲಿ ತಿರುಗಾಡಿ ಕೊಂಡಿದ್ದ ನಿರಪರಾಧಿ ಜನರ ಮೇಲೆ ಕತ್ತಿ ಮುಂತಾದ ಆಯುಧಗಳಿಂದ ಬೆದರಿಕೆ ಹುಚ್ಚಿಸಿ ಮಣ್ಣು ಗಡ್ಡೆಗಳನ್ನು ಬಿಸಾಡುವುದರ ಮೂಲಕ ನೆಮ್ಮ ದಿಗೆ ಭಂಗಬರುವ ಹಾಗೆ ನಡಕೊಂಡದ್ದಲ್ಲದೆ ದಾಮೋದರ ಭಟ್ಟಗೆ ಗರುಡಾ ಚಾರ್ಯನೆಂಬ ಹೋಕನು ಭರಬೀದಿಯಲ್ಲಿ ಚಬುಕಿನಿಂದ ಹೊಡಿಯುವಾಗ ಹಿಂದು ಮುಂದು ಇರುವವರಲ್ಲಿ ಕೆಲವರು ಲಟ್ಟಿಗೆ ಸಹಾಯಮಾಡಿದ ದೆಸೆ ಯಿಂದ ಅವನು ಚಬುಕನ್ನು ಎಳಕೊಂಡು ಆತ್ಮರಕ್ಷಣೆಗಾಗಿ ಅವೇ ಆಯುಧ ದಿಂದ ಗರುಡಾಚಾರ್ಯಗೆ ಹೊಡೆದು ಹಿಮ್ಮೆಟ್ಟಿಸಿ ಮುಂದೆ ಅವನು ತಕ್ಷೀರು ನಿರಾಕರಿಸಿದರೆ ಅವನ ಮೇಲೆ ನಿರಾನುಮಾನವಾದ ಪ್ರಮಾಣರೂಪವಾಗಿ ಆಂಗೀರಿಸಲ್ಪಡುವದಕ್ಕೋಸ್ಟರ ಅವನ ಕೈ ಉಂಗುರಗಳನ್ನು ಸೆಳಕೊಂಡು ಹಾಜರುಪಡಿಸಿದ್ದಾನೆ. ಗರುಡಾಚಾರ್ಯನನ್ನು ಕೇಳಿದರೆ ಚಬುಕು ತನ್ನದ್ದ ಲ್ಲವೆಂದರೂ ಉಂಗುರಗಳು ತನ್ನ ಸೊತ್ತುಗಳಿಂದು ಒಪ್ಪುತ್ತಾನೆ. ಮತ್ತು ತನ್ನ ಸೊಂಟದ ಜೋಡೆಳೆ ನೇವಳವನ್ನು ಸಹಾ ದಾಮೋದರನು ಕಸು ಕೊಂಡಿರುವನೆಂದು ನುಡಿಯುತ್ತಾನೆ. ತಾನು ಹಾಗೆ ಮಾಡಲಿಲ್ಲವೆಂದು ಅವನು ಪ್ರತಿವಾದಿಸುತ್ತಾನೆ. ತುಡುಗುಮಾಡುವುದಕ್ಕೆ ದಾಮೋದರಗೆ ಮನ ಸ್ಸಿರುತ್ತಿದ್ದರೆ ಆತನು ಉಂಗುರಗಳನ್ನು ಹಾಜರುಮಾಡುತ್ತಿದ್ದನೇ? ಚಬುಕು ಮಾತ್ರ ಹಾಜರು ಮಾಡಿದ್ದರೆ ಸಾಕಿತ್ತಲ್ಲವೇ! ಈ ಕಾರಣಗಳಿಂದ ಗರುಡಾ ಚಾರ್ಯನು ಮಾಡುವ ಅಸಂಭವ ಸಾಧನೆಯು ಒಡಂಬಡತಕ್ಕದ್ದಾಗಿರುವ ದಿಲ್ಲ. ಚಬುಕಿನಿಂದ ದಾಮೋದರಗೆ ಹೊಡೆಯಲಿಲ್ಲವೆನ್ನುವ ಗರುಡಾಚಾ ರ್ಯನ ಮಾತಿನಮೇಲೆ ಏನೇನೂ ವಿಶ್ವಾಸವಿಡಕೂಡದು. ಕನಿಕರವಿಲ್ಲದೆ ಹೊಡೆದ ಪೆಟ್ಟುಗಳ ಗುರ್ತಗಳು ದಾಮೋದರನ ಮೈತುಂಬಾ ಅವೆ ಅವನು ತಾನಾಗಿಯೇ ಹೊಡಕೊಂಡನೆಂದು ಒಬ್ಬ ಮರುಳನಾದರೂ ಹೇಳುವದಿಲ್ಲ ಈ ಅಪರಾಧಿಗಳ ಮೇಲೆ ತರಲ್ಪಟ್ಟ ದೋಷಾರೋಪಣೆಯು ಬಡಾ ಕಿತಾಬಿನ ಪ್ರಕರಣವಾಗಿರುತ್ತದೆ. ಅದರ ಇತ್ಯರ್ಥಮಾಡಲಿಕ್ಕೆ ಅಧಿಕಾರ ಉಳ್ಳ ಕಾರ ಭಾರಿಗಳ ಸನ್ನಿಧಾನಕ್ಕೆ ವಿನಯಪೂರ್ವಕವಾಗಿ ನನ್ನ ತನಖಿಯ ಫಲವನ್ನು ಬಿನ್ನವಿಸಿರುತ್ತೇನೆ, ದೇವರು.

ಹೀಗಿನ ಬರವಣಿಗೆಯುಳ್ಳ ಮನವಿಯ ಸಮೇತ ಗರುಡಾಚಾರ್ಯ ರಾಮದಾಸರಾಯ, ವೇದವ್ಯಾಸ ಉಪಾಧ್ಯ, ಪದ್ಮನಾಭ ಘನಪಾಟಿ, ಖಗ ವಾಹನ ಭಟ್ಟ, ಜ್ಞಾನಸಾಗರರಾಯ, ಲಕ್ಷ್ಮೀಲೋಲಾಚಾರ್ಯ, ಪತ್ರವಡೆ ರಂಗಾಚಾರ್ಯ, ಶಾರ್ಙ್ಗಧರಉಪಾಧ್ಯ, ಮೀನಾಕ್ಷೆಯ್ಯ, ಕೇಶವಹತ್ವಾರಿ, ಮುಸ್ಕಿನೊಡೆ ಗುರುರಾಯ, ನಕ್ಷತ್ರಿ, ಉಪೇಂದ್ರ, ವರುಣ, ಇಷ್ಟು ಜನ ರನ್ನು ಕಾರಭಾರಿಯ ಮುಂದೆ ಇರಿಸೋಣಾಯಿತು. ಉಂಗುರಗಳನ್ನು ಕಳು ಹಿಸಬೇಕಾದರೆ ಆದಿಯಲ್ಲಿಯೇ ಅಮೂಲ್ಯವಾದ ರತ್ನಗಳಲ್ಲಿ ಒಂದೆರಡು ಮಾತ್ರ ಉಂಗುರಗಳಲ್ಲಿ ಇರಗೊಟ್ಟು ಬೇರೆಯವುಗಳನ್ನು ಎಬ್ಬಿಸಿ ಅವುಗಳ ಪ್ರತಿಯಾಗಿ ಗಾಜಿನ ಹರಳುಗಳನ್ನು ಸೇರಿಸಿದ ಒಂದು ಚಮತ್ಕಾರವು ಯಾರಿಂದಲೋ ನಡೆಯಿತು. ದಾಮೋದರ ಭಟ್ಟ ಆದಿಯಾಗಿ ಅನೇಕ ಜನರ ಮೇಲೆ ರಾಮದಾಸರಾಯನ ಆಲೋಜಚನೆಗನುಗುಣವಾಗಿ ವೇದವ್ಯಾಸ ಉ ಪಾಧ್ಯನು ಕೊಟ್ಟ ಫಿರ್ಯಾದು ಸ್ವತೇವ ಸಟೆಯಂತಾಯಿತು. ಇದು ಬಹಳ ಸಂಕಷ್ಟಕರವಾಗಿ ಅಪರಾಧಿಗಳಿಗೆ ತೋಚಿ ಮುಂದಿನ ಉಪಾಯವೇನೆಂದು ರಾಮದಾಸರಾಯನನ್ನು ಕೇಳಿದರು. “ಪರ್ವಾ ಇಲ್ಲ, ಪುನರ್ವಿಮರ್ಶಾಧಿಪತಿ ಗಳಿಗೆ ಕೆಲಸವೇನು? ಸುಮ್ಮನೆ ಥೈಲಿ ಥೈಲಿ ಸಂಬಳಕೊಟ್ಟು ರಾಜರು ಇಟ್ಟ ರುವದೇನು? ಅವರ ಜನಾಬಿಗೆ ಅರ್ಜಿ ಬರಕೊಂಡು ಈ ಕಾರಭಾರಿಯ ದಪ್ತ ರದಿಂಪ ಮೇಲಧಿಕಾರಸ್ಪರ ಮುಂದೆ ಹಾಕಿಸಿಬಿಡುವುದು ಎಷ್ಟು ದೊಡ್ಡ ಕೆಲಸ; ಹೆದರಬೇಡಿ” ಎಂದು ವಕೀಲನು ಹೇಳುತ್ತಲೇ “ಶಹಬ್ಬಾಸ್‌ ಶಹ ಬ್ಬಾಸ್‌! ಬದುಕಿರಪ್ಪಾ! ನನ್ನ ಧನಿ ನಿನ್ನ ಪಾದವೇ ಗತಿ” ಎಂದು ವೇದವ್ಯಾ ಸನು ಅವನನ್ನು ಯಥೇಚ್ಛ ಉಬ್ಬೇರಿಸಿಬಿಟ್ಟನು. ರಾಮದಾಸನು ಆಗಲೇ ದೊಡ್ಡದೊಂದು ಮನವಿಯನ್ನು ಬರೆದು ಪುನರ್ವಿಮರ್ಶಾಧಿಪತಿಯ ಬಳಿಗೆ ಕಳುಹಿಸಿಕೊಟ್ಟನು.

ಆ ಕಾಲದ ಪುನರ್ವಿಮರ್ಶಾಧಿಪತಿಯ ಹೆಸರು ಕನಕ ಸಭಾನಾಯಕ. ಈ ದೊಡ್ಡ ಉದ್ಯೋಗಸ್ಥನು ಪ್ರಾಮಾಣಿಕತೆಯಲ್ಲಿ ಖ್ಯಾತನಾಗಿದ್ದನು. ಪರ ಧನವು. ತೃಣಸಮಾನವಾಗಿಯೂ ಪರಕಾಮಿನಿಯು ಮಾತೆಯಂತೆಯೂ ಅವನಿಗೆ ತೋರುವುದೇ ಸರಿ. ಷಟ್ಪುರನಗರದಲ್ಲಿ ಇಂಥಾ ಸತ್ಯಪುರುಷನಿನ್ಸೊ ಬ್ಬನು ಸಿಕ್ಕುವದು ಅತಿದುರ್ಲಭನೆಂದು ಸರ್ವರಬಾಯಿಯಿಂದಲೂ ಬರುವದು. ಈ ಸದ್ಗುಣವಂತನ ಮುಂದೆ ತರಲ್ಪಟ್ಟ ಮನವಿಯ ತೀರ್ಮಾನಕ್ಕೋಸ್ಟರ ಪದ್ಧತಿಗನುಸಾರವಾಗಿ ಒಂದು ದಿವಸ ನೇಮಿಸಲಾಯಿತು. ಆ ದಿನ ಸಂಬಂಧ ಪಟ್ಟ ಕಕ್ಸಿಗಾರರು ವಕೀಲರು ಇದ್ದರೆ ಅವರ ಸಹಿತ ಇಲ್ಲದಿದ್ದರೆ ತಾನಾ ಗಿಯೇ ಕಚೇರಿಯಲ್ಲಿ ಕಾದಿರಬೇಕೆಂದು ಅಸ್ಪಣೆಯು ಬರಹಮೂಲಕ ಮಾಡೋಣಾಯಿತು. ಇಷ್ಟಾಗುತ್ತಲೇ, ಅವಸರದಲ್ಲಿ ಪ್ರಥಮಸ್ಥಲದವನಾದ ರಾಮದಾಸರಾಯನು “ಈಗ ಹ್ಯಾಗೆ? ಬಿಡುತ್ತೇನೋ ನೋಡಿ. ಈ ಬಣಗು ಗಳೆಲ್ಲಾ ಉಂಡ ತಾಯಿಯ ಹಾಲೂನೂವೇ ಕಾರಿಸಿಬಿಡುವೆನು.” ಎಂದು ಮೀಸೆಹುರಿಹಾಕುತ್ತಾ ಬೀದಿ ಉದ್ದಕ್ಕೂ ಅಲೆದಾಡಲಿಕ್ಕಾ ದನು. ಈ ಸಮಾಚಾರವು ಭೀಮಾಜಿಯ ಕಿವಿಗೂ ಭೀಮಾಜಿಯಿಂದ ಶಾಬ ಯ್ಯನ ಕಿವಿಗೂ ಬಿತ್ತು. ಕನಕನಭಾನಾಯಕಗೆ ಶಾಬಯ್ಯನಮೇಲೆ ಕೊಂಚ ಪ್ರೀತಿಯಿತ್ತು. ಯಾಕೆಂದರೆ ಅವನು ಕೌಶಲನಲ್ಲಿ ಕಡಿಮೆಯವನಾಗಿರಲಿಲ್ಲ. ಹಾಗೂ ಲಂಚಗಾರನೆಂಬ ಅಪವಾದಕ್ಕೆ ಬಿದ್ದಿರಲಿಲ್ಲ. ಒಂದು ದಿನ ಬೆಳಗಿನ ಸಮಯ ತಾನು ಅಕಸ್ಮಾತ್ತಾಗಿ ಮಾತನಾಡಲು ಸಿಕ್ಕಿದಹಾಗೆ ತೋರು ವಂತೆ ಉಪಾಯಮಾಡಿ ಮೇಲಧಿಕಾರಿಯು ತಿರುಗಾಡಿಕೊಂಡು ಬರುವ ವೇಳ್ಯ ಬೀದಿಯಲ್ಲಿ ನಿಂತು ಸಲಾಂ ಕೊಟ್ಟು ಬೇಕೆ ಬೇಕೆ ಪ್ರಸ್ತಾಪಗಳನ್ನು ಮಾಡುತ್ತಾ ಮನೆತನಕ ಅವನನ್ನು ಹಿಂಬಾಲಿಸಿಕೊಂಡು ಹೋದನು. ಮನೆ ವರೆಗೆ ಬಂದ ಶಾಬಯ್ಯನನ್ನು ಆಸನಕೊಟ್ಟು ಕೂರಿಸಿದಾಗ ರಾಮದಾಸನ ಮನವಿಯ ನೆನಪು ಬಂದು ಅವನು ಹೀಗೆಂದನು–“ಏನಯ್ಯಾ ಶಾಬಯ್ಯ! ನಿಮ್ಮ ಮೇಲೆ ಅಪವಾದರೂಪವಾದ ಒಂದು ಮನವಿ ಬಂದದೆ. ನಿಮ್ಮ ಮುಂದೆ ಇರುವ ಪ್ರಕರಣವನ್ನು ನಾವೇ ತರಿಸಿಕೊಂಡು ಫೈಸಲು ಮಾಡಬೇಕಾಗಿ ಮನವಿದಾರರು ಬೇಡಿಕೋಥಾಕೆ. ಹೀಗಾಗಲಿಕ್ಕೆ ಏನು ಕಾರಣ?” ಆವಾಗ ಥಟ್ಟನೆ ಎದ್ದು ನಿಂತು ಶಾನೆ ಭಯಪಟ್ಟು ಅಂಗೋಪಾಂಗ ಗಳಲ್ಲಿ ಕಂಪನ ಉಂಟಾದವನಂತೆ ಗದ್ಗದಸ್ಪರದಿಂದ ಶಾಬಯ್ಯನು ಸಣ್ಣ ದೊಂದು ಪ್ರಸಂಗ ರೂಪವಾದ ಉತ್ತರವನ್ನುಕೊಟ್ಟನು. ಹ್ಯಾಗಂದರೆ–

“ಬುದ್ಧೀ! ಇದುವರೆಗೂ ಸಂಭಾವಿತನಾಗಿ ತಮ್ಮ ಅನುಗ್ರಹವೆಂಬ ಸೂರ್ಯಕಾಂತಿಯ ಪ್ರಭಾವದಿಂದ ಶತ್ರುಗಳನ್ನು ಜಯಿಸಿ ಸತ್ಯಶೀಲ, ದುರ್ಗುಣಶೂನ್ಯ ಸುಚರಿತನೆನಿಸಿ ಭಗವತ್ಕ್ಯಟಾಕ್ಷದ ಬಲದಿಂದ ಧರ್ಮಪತ್ನಿ ಸುಪುತ್ರವರ್ಗವನ್ನು ಸಾಕಿಸಲಹಿ ಇನ್ನೊಬ್ಬನ ದಂಬಡಿಯನ್ನು ವಮನದಂತೆ ಹೇಸುವ ಬಡಕಿಂಕರನಾದ ನನ್ನ ಮೇಲೆ ಇದೀಗ ಚೊಚ್ಚಲುದೂರು. ರಾಮ ದಾಸನೆಂಬ ನೀಚಸ್ವಭಾವದ ಹೊಸ ವಕೀಲನ ಪನ್ನಿಅನಕ ತಡಕೊಳ್ಳುವದೇ ಪ್ರಯಾಸ. ಅದು ಹಾಗಿರಲೆಂದರೆ ಅವನಿಗಿರುವ ದ್ರವ್ಯದಭಿಲಾಷೆಯನ್ನು ಪೂರೈಸಿಕೊಳ್ಳುವದಕ್ಕೆ ನ್ಯಾಯವಾದ ಮಾರ್ಗ ತಿಳಿಯದೆ. ಯಾರಮನೆಯಾ ದರೂ ಹೋಗಲಿ, ಯಾವ ಸ್ತ್ರೀಯ ಕರಿಮಣಿಯಾದರೂ ಹರಿಯಲಿ, ತನ್ನ ಬೊಕ್ಕಸ ತುಂಬಲೆಂದು ಬಕಮಾರಿಯ ಹಾಗೆ ಬಾಯಿತೆರೆದು ಕೊಂಡಿರುವ ಶಂಖವಾಳನ ಬಸುರಿನಿಂದ ಹೊರಟ ವಿಷಪ್ರಾಣಿಯ ಸ್ವಭಾವಯುಕ್ತನಾಗಿ ಸಜ್ಜನರ ಪೀಡೆ ದುರ್ಜನರ ಪರಿಪಾಲನೆಯಲ್ಲಿ ಆಸಕ್ತನಾಗಿಯೂ ಲೋಕ ಕಂಟಕನಾಗಿಯೂ ಸಚರಾಚರದ ಅರಿಯಾಗಿಯೂ ಜನನಕ್ಕೆ ಬಂದವನೋ ತಿಳಿಯದು. ನಾನು ಅನೂನ ಸುಶೀಲತೆಯಿಂದೆ ನಡಕೊಳ್ಳುವವನೆಂದು ಸನ್ನಿ ಧಾನಕ್ಕೆ ಗೋಚರವಿರುವ ವಿಷಯದಲ್ಲಿ ಪದೇ ಪದೇ ಶ್ರಮಪ್ರದನವೆನ್ನಿಸಿ ಕೊಳ್ಳುವ ಹಾಗಿನ ಅಪ್ರಾಸಂಗಿಕ ಮಾತುಗಳನ್ನಾಡಿ ಖಾವಂದರ ಅಮೂಲ್ಯ ವಾದ ಸಮಯವನ್ನು ಹಾಳುಮಾಡಲೇ? ಛೇ, ಹಾಗೆಂದೂ ಮಾಡಲಾರೆ. ಕೇವಲ ದುರಾಗ್ರಹಿಯಾದ ವೇದವ್ಯಾಸ ಉಪಾಧ್ಯನೆಂಬ ಹಾರುವನ ಹಾರಾ ಟವೊ ವರ್ಣಿಸಲಸಾಧ್ಯ. ಕಾಸೊಂದು ವೆಚ್ಚಮಾಡಲಿಕ್ಕೆ ಅವನಿಗೆ ತಿಳಿಯದು. ಕುಯುಕ್ತಿಗಳನ್ನು ನಡೆಸಿ ಇನ್ನೊಬ್ಬನ ಮನೆ ಹಾಳಾಗಿ ತನ್ನ ಮನೆ ತುಂಬ ಲೆಂಬುವ ದುರ್ಧರ ದುರ್ಜನಮಣಿಯಾಗಿರುವ ಅವನ ಮೂಲಪ್ರಸಾದದಿಂದ ನಿಸ್ಪೃಹನಾದ ನನ್ನ ಮೇಲೆ ಯಜಮಾನರ ಜನಾಬಿನಲ್ಲಿ ನಾನು ದುರ್ನಿರತ ನೆಂಬ ಅನ್ವಯವಾಗುವ ಅಪವಾದಕ್ಕೆ ಬೀಳುವ ಸಂಭವ ಒದಗಿರುವದೆಂದು ಬಹಳ ಪಶ್ಚಾತ್ತಾಪದಿಂದ ಬೆಂಡಾಗಿರುತ್ತೇನೆ. ಸನ್ನಿಧಾನದಿಂದ ಶೀಲದ ಕುರಿತು ಇದ್ದರೆ ಮೊದಲೇ ನನಗೆ ಗುಣಕರವಾದ ಅಭಿಪ್ರಾಯ ಪಡಲಿಕ್ಕೆ ಅನಾನುಕೂಲವಾಗಿಯದಾದ ಪಕ್ಷದಲ್ಲಿ ಇನ್ನಾದರೂ ಕೂಲಂಕಶವಾದ ಪರಿಶೋಧನ ಪರಿಮುಖ ಪ್ರಥಮತಃ ನನ್ನ ಸ್ವರೂಪವನ್ನು ನಿರ್ಣಯಿಸಿದ ಮೇಲೆ ನನ್ನ ಪರಿಭವಕಾರಕವಾದ ಆಜ್ಞೆಯಾಗಬೇಕಲ್ಲದೆ ಈಗಲೇ ಅಪರಾಧಿ ಗಳ ಅರ್ಜಿಯ ಮತಲಬಿನ ಮೇಲೆ ಭಾರವಿಟ್ಟು ಅವನ ಅರಿಕೆಯನ್ನು ನಡಿ ಸೋಣಾಗದೆಂಬ ಭರವಸೆ ಉಳ್ಳವನಾಗಿದ್ದೇನೆ. ಪರಂತು ಕುಹಕ ಮತ್ತು ಲಾವಕ ಜನರು ವಿವಿಧ ಕಸಕುಗಳನ್ನು ರಚಿಸಿ ನಿರಪರಾಧಿಯಾದ ನನ್ನ ಪೀಡನೆಯ ಉದ್ದೇಶವುಳ್ಳ ಸಾಧನೆಗಳನ್ನು ನಡಿಸುವದರಿಂದ ನನ್ನ ಅಭಿ ಮಾನ ಭಂಗವಾದರೆ ನಾನು ಬದುಕಿರುವದಕ್ಕಿಂತ ಸಾಯುವದೇ ಲೇಸು. ಇನ್ನೊಂದು ಅರಿಕೆ.” ಎಡೆಬಿಡದೆ ಸುರಿಯುವ ಘೋರವಾದ ಮಳೆಯಹಾಗೆ ಶಬ್ದಮಂಜ ರಿಯ ಸುಸ್ವರ ಪದಗಳನ್ನೆಲ್ಲಾ ಪೋಣಿಸಿ ಉಪನ್ಯಾಸರೂಪವಾಗಿ ಬಿನ್ನವಿಸುವ ಶಾಬಯ್ಯನನ್ನು ಕನಕಸಭಾನಾಯಕನು ಫಕ್ಕನೆ “ಸದ್ದೋಸದ್ದು” ಎಂದು ತಡಿಯುವದರ ದ್ವಾರ ತನ್ನ ಅಮೂಲ್ಯವಾದ ಸಮಯವು ಮತ್ತು ಹಾಳಾಗ ದಂತೆ ಮಾಡಿದ ವೈನಕ್ಕೆ ಬಾಗಲ ಸಂದಿನಲ್ಲಿ ನಿಂತುಕೊಂಡು ಕಾಫಿಯನ್ನು ಕುಡಿಯಲಿಕ್ಕೆ ಬಾರೆಂದು ಕೈಸನ್ನೆಯಿಂದ ಪತಿಯನ್ನು ಕರೆಯುವ ಕನಕ ಮ್ಮಾಲು ಮೆಚ್ಚಿ ಕಿಸ್ಕನೆ ನಕ್ಕಳು. ಅವಾಗ ಸ್ವಪ್ನಾವಸ್ಥೆಯಲ್ಲಿರುವವನು ಎಚ್ಚ ರವಾಗಿ ಬೆರಗಾಗುವಂತೆ ಶಾಬಯ್ಯನು ತಟಸ್ಥನಾಗಿ ನಾಲಿಗೆಗೆ ಬಹು ಹೆಚ್ಚು ಸಲಿಗೆ ಕೊಟ್ಟದ್ದು ಅನುಚಿತವೆಂದು ಅವನಿಗೇನೇ ಕಂಡು ಬಂತು. ಅದೇ ಸಮಯದಲ್ಲಿ ಆ ಉದ್ಯೋಗಸ್ಥನ ಮುಖದಲ್ಲಿ ನಾಚಿಕೆಯ ಛಾಯೆಯನ್ನು ಕಂಡು ಕನಕಸಭಾನಾಯಕನು ಅವನ ಮೇಲೆ ಕನಿಕರಪಟ್ಟು ಮನೆಗೆ ಬಂದ ವನಿಗೆ ಒಂದು ವಿಧವಾದ ಧಿಕ್ಕ್ವಾರವಾಗಿ ವಿಷಾದ ಹುಟ್ಟಿತೆಂಬ ಊಹೆಯಿಂದ ಅವನ ಮನಸ್ಸಿಗೆ ಯಥೋಚಿತವಾದ ಹರುಷವನ್ನುಂಟುಮಾಡುವದಕ್ತೆ ಯತ್ನಿಸಿದನು. “ಅಯ್ಯಾ ಶಾಬಯ್ಯಾ, ಸುಮ್ಮಗಾದರೂ ಬೆದರ ಬೇಡ ಕಂಡಿಯಾ! ಧಾರುಧೇನೂ ಹೇಳಲಿ. ನಾನು ಹಾಂಗೆಲ್ಲಾ ಕೇಳುವವನೆ? ನಿನ್ನ ಮಾನಭಂಗ ಮಾಡತಕ್ಕವನು ನಾನಲ್ಲಕಾಣೊ; ಸುಮ್ಮಗೆ ಮನಸಿನಾಗೆ ಕರ ಗಬೇಡ. ಹಾಗೆಂದು ಜಾಗ್ರತೆ ತಪ್ಪಿ ಸಿಟ್ಟಿನಿಂದಾಗಲೀ ಮತ್ಯಾತರಿಂದಾಗಲೀ ಅನೀತಿಗೆ ಆಸ್ಪದ ಕೊಟ್ಟುಬಿಟ್ಟಿಯಾ? ನಾನು ಮತ್ತೆ ಯಮನಂತೆ ಕನಲು ವವನೇ ಸರಿ! ನೋಡಿಕೋ! ಇನ್ನು ನನ್ನ ನಿನ್ನ ಸಮಯ ವ್ಯರ್ಥಹಾಳಾಗ ಲ್ಯಾಕೆ? ಮನೆಗೆ ನಡೆದು ಬಿಡು; ಸೌಖ್ಯದಲ್ಲಿ ಊಟಮಾಡಿ ಕೆಲಸ ನೋಡಿ ಕೊಂಡಿರು ಎಂದು ಅಭಯಪ್ರದ ಉತ್ತರವು ಸಿಕ್ಕಿತು. ಸೂರ್ಯನಿಂದ ರೆಕ್ಕೆಗಳನ್ನು ಸುಡಿಸಿಕೊಂಡು ಬಿದ್ದ ಸಂಪಾತಿಗೆ ಶ್ರೀರಾಮನನ್ನು ಕುರಿತು ವಾರ್ತೆಯು ಕಪಿ ಮುಖದಿಂದ ಕಿವಿಗಳಿಗೆ ಬಿದ್ದು ಪುನಃ ರೆಕ್ಕೆಗಳು ಹುಟ್ಟಿ ದಂತೆ ಹರುಷಯುತನಾಗಿ ಶಾಬಯ್ಯನು ವಾಯುವೇಗದಿಂದೆಂಬಂತೆ ಮನೆಗೆ ಹೋಗಿ ಭೀಮಾಜಿಯನ್ನು ಕರಿಸಿ ಅಂದಿನ ಸುವಾರ್ತೆಯನ್ನು ತಿಳಿಸಿದನು. ಇಂಥಾದ್ದೊಂದು ಸಂದರ್ಭವು ಎಂದು ದೊರಕುವದೆಂದು ಅವಕಾಶ ನಿರೀಕ್ಷೆ ಯಲ್ಲಿರುವ ಭೀಮಾಜಿಯು ತಡೆಯದೆ ವಾಗ್ದೇವಿಯ ದರುಷನವನ್ನು ತಕ್ಕೊಂಡು ಪುನರ್ವಿಮರ್ಶಾಧಿಕಾರಿಯ ನ್ಯಾಯಸ್ಥಾ ನದಲ್ಲಿ ವಾದಿಗಳು ಮನವಿ ಮಾಡಿ ನಡಿಸುವ ನೈನಗಳು ನಿಷ್ಪಲವಾಗುವ ಹಾಗೆ ಮಾಡುವದಕ್ಕೆ ಶಾಬಯ್ಯನು ಒಳ್ಳೆ ವೈನವನ್ನು ಮಾಡಿರುವೆನೆಂದು ಹೇಳಿ ಅವರಿಗೂ ಚಂಚಲ ನೇತ್ರರಿಗೂ ತನ್ನ ಮೇಲಿರುವ ಪ್ರೀತಿಯು ವೃದ್ಧಿಯಾಗಮಾಡಿದನು.
*****
ಮುಂದುವರೆಯುವುದು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬೆಳಕು
Next post ಒಂದು ಎಚ್ಚರಿಕೆ

ಸಣ್ಣ ಕತೆ

  • ದೇವರು

    ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ನಾಗನ ವರಿಸಿದ ಬಿಂಬಾಲಿ…

    ಬಿಂಬಾಲಿ ಬೋಯ್ ತನ್ನ ಅಮ್ಮ ಅಣ್ಣ ಅತ್ತಿಗೆ ಜೊತೆ ಅಟಲಾ ಎಂಬ ಒರಿಸ್ಸಾದ ಹಳ್ಳಿಯಲ್ಲಿ ವಾಸಿಸುತ್ತಿದ್ದಳು. ತಂದೆಯ ಮರಣದ ಮುಂಚೆಯೆ ಅವಳ ಹಿರಿಯಕ್ಕನ ಮದುವೆಯಾಗಿತ್ತು. ತಂದೆ ಬದುಕಿದ್ದಾಗ… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

cheap jordans|wholesale air max|wholesale jordans|wholesale jewelry|wholesale jerseys