ನಮ್ಮ ಬೆಂಗಳೂರು ನಗರ, ಅನೇಕ ರಾಷ್ರಗಳನ್ನು ಅಲುಗಿಸಿದ ಒಂದು ಮಹಾನಗರ

ನಮ್ಮ ಬೆಂಗಳೂರು ನಗರ, ಅನೇಕ ರಾಷ್ರಗಳನ್ನು ಅಲುಗಿಸಿದ ಒಂದು ಮಹಾನಗರ

೨೦೦೫ ಆಗಸ್ಟ್ ತಿಂಗಳು ಮತ್ತು ೨೦೦೫ ಸೆಪ್ಟೆಂಬರ್ ತಿಂಗಳು ಪ್ರತಿಯೊಬ್ಬ ಬೆಂಗಳೂರಿಗನೂ (ಪ್ರೌಢಶಾಲೆಯ ಹುಡುಗ ಹುಡುಗಿಯರಿಂದ ಹಿಡಿದು ನನ್ನಂತಹ ತಪ್ಪಿತಸ್ಥ ಹಿರಿಯರವರೆಗೆ) ಬೆಂಗಳೂರಿನ ಕಳಪೆ ಮೂಲಭೂತ ಸೌಕರ್ಯಗಳ ಬಗ್ಗೆ ಮಾತನಾಡುತ್ತಿದ್ದುದು. ಪ್ರತಿಯೊಬ್ಬನೂ ಬೆಂಗಳೂರಿನ ಮೂಲಭೂತ ಸೌಕರ್ಯ ಉತ್ತಮಗೊಳಿಸಲು ತನ್ನದೇ ಮಹಾ ಯೋಜನೆ ಹೊಂದಿದ್ದ.

೨೦ನೇ ಶತಮಾನ ಪೂರ್ತಿ ಬೆಂಗಳೂರಿನವರು ಮೂಲಭೂತ ಸೌಕರ್ಯದ ಹೆಸರನ್ನೇ ಕೇಳಿರಲಿಲ್ಲ. ಆದ್ದರಿಂದ ಈ ಪದ ಅವರನ್ನು ಬಹಳವಾಗಿ ಚಕಿತಗೊಳಿಸಿತ್ತು ಮತ್ತು ಈ ಪದವನ್ನು ಪದೇ ಪದೇ ಸುಲಭವಾಗಿ ಎಲ್ಲ ಸಭೆಗಳಲ್ಲೂ ಬಳಸಲಾಗಿತ್ತು. ೨೦ನೇ ಶತಮಾನ ಕಾಲದಲ್ಲಿ ನಾವು ನಗರಕ್ಕೆ ಶಾಶ್ವತ ಗಡಿಯನ್ನು ನಿರ್ಮಿಸಿದೆವು. ಮತ್ತು ಅದನ್ನು ನಾರ್ತ್ ಎಂಡ್ ಹಾಗು ಈಸ್ಟ್ ಎಂಡ್ ರಸ್ತೆಗಳೆಂದು ಕರೆದೆವು. ಅಪಾಯಕಾರಿ ಕಲ್ಪನೆಯೆಂದರೆ ನಗರವನ್ನು ಈ ರಸ್ತೆಗಳ ಆಚೆಗೆ ಬೆಳೆಸುವ ಆವಶ್ಯಕತೆ ಇಲ್ಲವೆಂದು ಸಂಕುಚಿತ ಚಿಂತನೆಯ ಪರಿಣಾಮ ಸಂಕುಚಿತ ರಸ್ತೆಗಳಾಯಿತು. ಪರಿಣಾಮವಾಗಿ ೧೦೦ ಅಡಿ ಅಗಲವಿದ್ದ ಕೆ.ಆರ್. ರಸ್ತೆ, ಕೆ.ಪಿ. ರಸ್ತೆ ಮತ್ತು ಬುಲ್ ಟೆಂಪಲ್ ರಸ್ತೆಗಳನ್ನು ೩೦ ಅಡಿ ಅಗುಲದ ಸಂಕುಚಿತ ರಸ್ತೆಗಳಿಗೆ ಮುಂದುವರಿಸಲಾಗಿತ್ತು. ನಗರ ವಿಸ್ತರಿಸುವ ಯೋಜನೆಯನ್ನು ಸಂಕುಚಿತ ಮಾಡಲಾಯಿತು ಸಮಗ್ರಯೋಜನೆ ಮಾಡಿರಲಿಲ್ಲ. ಮುಖ್ಯ ಮಾರ್ಗಗಳು ಅಲ್ಲಲ್ಲಿ ಸಣ್ಣ ದಾಗಿದ್ದವು. ಪರಿಣಾಮವಾಗಿ ನಾನು ಈಗ ಮುಚ್ಚಿದ ನಗರದ ಮುಚ್ಚಿದ ಪ್ರಕಾಶದಲ್ಲಿ ವಾಸವಾಗಿದ್ದೇನೆ.

ಈ ಸಂದರ್ಭದಲ್ಲಿ ನಮ್ಮ ಪ್ರೀತಿಯ ಮುಖ್ಯಮಂತ್ರಿಗಳು ಬೆಂಗಳೂರಿಗೆ ಅನೇಕ ಮೂಲಭೂತ ಸೌಕರ್ಯಗಳ ಯೋಜನೆಗಳ ಆಶ್ವಾಸನೆ ನೀಡಿದರು. ಶ್ರೀ ಧರ್ಮಸಿಂಗ್ ನಮ್ಮ ಹಿಂದಿನ ಮುಖ್ಯಮಂತ್ರಿಗಳು, ಶ್ರೀ ಎನ್. ಆರ್. ನಾರಾಯಣಮೂರ್ತಿ, ಶ್ರೀ ಅಜೀಮ್ ಪ್ರೇಮ್ಜೀ ಮತ್ತು ಇತರ ಐಟಿ ಕ್ಷೇತ್ರದ ಮಹಾನ್ ಅಗ್ರಗಾಮಿಗಳು ಹಾಕಿದ ಅಸ್ತಿಭಾರವನ್ನು ಮತ್ತು ಮುಂದೆ ಸ್ವಲ್ಪವೇ ಕಾಲದಲ್ಲಿ ಬೆಂಗಳೂರಿಗೆ ಅರಿತರಾಷ್ಟ್ರೀಯ ಖ್ಯಾತಿ ತಂದ ಭವ್ಯಸಾಧನೆಗಳನ್ನು ಮೆಚ್ಚಿದರು. ಅವರ ಭಾಷಣದಲ್ಲಿ (ಎಲ್ಲರೂ ತನ್ಮಯತೆಯಿಂದ ಕೇಳಿಸಿಕೊಂಡ ೧೩.೦೯.೨೦೦೫ ರ ಅವರ ಅದ್ಭುತವಾದ ಭಾಷಣ) ಅವರು ಎರಡು ಅತಿ ಮುಖ್ಯವಾದ ವಾಕ್ಯಗಳನ್ನು ಉಪಯೋಗಿಸಿದರು. ಅದೇನೆಂದರೆ ‘ಹೆಮ್ಮೆ ಪಡಬೇಕು ಮತ್ತು ಮಹತ್ತರ ಸಾಧನೆಗಳನ್ನು ಕಾಪಾಡಿಕೊಂಡು ಬರಬೇಕು’.

ಶ್ರೀ ಧರ್ಮಸಿಂಗ್ ತುಂಬ ಹೆಮ್ಮೆಯಿಂದ ಸೂಚಿಸಿದ್ದೇನೆಂದರೆ ೩೪ ಮಹಾನ್ ರಾಷ್ಟ್ರಗಳ ಪ್ರಧಾನಮಂತ್ರಿಗಳು ವಿಶ್ವದ ೧೦ ಹೈಟೆಕ್ ನಗರದಲ್ಲೊಂದಾಗಿ ಅತಿ ಶೀಘ್ರ ವಾಗಿ ಬೆಳೆದ ಬೆಂಗಳೂರು ನಗರವನ್ನು ಸ್ವತಃ ನೋಡಲು ಬಂದಿದ್ದರೆಂದು, ಅವರು ಸ್ವತಃ ನೋಡಬೇಕೆಂದಿದ್ದರು ಹೇಗೆ ಕೇವಲ ೧೦-೧೫ ವರ್ಷಗಳ ಹಿಂದೆ ಕಾಣದಿದ್ದ ನಗರ ಒಂದು ಪ್ರಪಂಚದ ೧೦ ಔದ್ಯೋಗಿಕ ನಗರಗಳಲ್ಲೊಂದಾಗಿ ಉಲ್ಕಾಪಾತ ದಂತೆ ಏರಿ ಬಂತೆಂದು. ಬೆಂಗಳೂರಿನ ಈ ಮಹಾನ್ ಯಶಸ್ಸಿಗೆ ಯಾರು ಗಣ್ಯತೆ ಪಡೆಯುತ್ತಾರೆ.

ಬೆಂಗಳೂರಿಗೆ ಭೇಟಿ ನೀಡಿದ ಮಹಾನ್ ರಾಜಕಾರಣಿಗಳು ಮಹಾನ್ ರಾಷ್ಟ್ರ ಗಳಿಂದ ಬಂದವರು. ಆದರೆ ಅವರ ಮುಖದ ಮೇಲೆ ತಪ್ಪಿತಸ್ಥರ ಛಾಯೆಯನ್ನು ಮತ್ತು ಅವರ ಸ್ವಂತ ದೇಶದ ಬೆಂಗಳೂರನ್ನು ನಿರ್ಮಿಸಲು ಸೋತ ಭಾವವನ್ನು ನಾನು ನೋಡಿದೆ.

ನಮ್ಮ ತಲೆಮಾರಿನ ಕರ್ನಾಟಕದ ಕಿರಿಯ ರಾಜಕಾರಣಿಗಳೇ ಬೆಂಗಳೂರಿನ ಬಗ್ಗೆ ವಿವಿಧ ರಾಷ್ಟ್ರಗಳ ಈ ಮಹಾನ್ ಮುಂದಾಳುಗಳು ಇದ್ದಕ್ಕಿದ್ದ ಹಾಗೆ ತೋರಿಸುತ್ತಿರುವ ಪ್ರೀತಿಯನ್ನು ನೋಡಿ ನಗುತ್ತಿರಬಹುದು. ಆದರೆ ತರುಣ ರಾಜಕಾರಣಿಗಳಿಗೆ ಯಾವುದೇ ಹೊಸ ತಾಂತ್ರಿಕ ಉದ್ಯಮ ಬೆಳೆಯಬೇಕಾದರೆ ವೃದ್ಧಿಯಾಗಬೇಕಾದರೆ ಕೆಲವು ರಾಜಕೀಯ ಬೆಂಬಲ ಬೇಕಾಗುತ್ತದೆ ಎಂದು ಗೊತ್ತಿಲ್ಲ. ಆದರೆ ಬೆಂಗಳೂರಿನಲ್ಲಿ ಇವೆಲ್ಲ ಆಯಿತು, ಕೆಲವೊಂದು ಉತ್ತಮ ಜನರ ಸಾಹಸದಿಂದ ಮತ್ತು ಬೆಂಗಳೂರಿನ ಹೆಸರು, ಹೆಮ್ಮೆ ಉದ್ದಗಲಕ್ಕೆ ಹರಡಿತು. ಮತ್ತು ಅನೇಕ ರಾಷ್ಟ್ರಗಳನ್ನು ತಲ್ಲಣಿಸಿದ ಒಂದು ನಗರ ಎಂದು ವಿಶ್ವದಾದ್ಯಂತ ಪ್ರಸಿದ್ಧವಾಯಿತು. ಅದು ಈ ಸಂಬಂಧದಲ್ಲಿ ಅನೇಕ ಘನತೆವೆತ್ತವರು ಬೆಂಗಳೂರು ಯಾವ ಕಾರಣಗಳಿಂದ ಈ ಮಹಾಪ್ರಸಿದ್ಧಿಗೇರಿತು ಮತ್ತು ಭಾರತಕ್ಕೆ ಗೌರವವನ್ನು ತಂದಿತೆಂಬುದನ್ನು ಸ್ವತಃ ಕಾಣಲು ಬೆಂಗಳೂರಿಗೆ ಭೇಟಿ ನೀಡಿದ್ದು, ಹೊಸ ಬೆಂಗಳೂರನ್ನು ರಚಿಸಿದ ಬೆಂಗಳೂರಿನ ಜನರೊಂದಿಗೆ ಕಲೆತು ತಮ್ಮ ದೇಶದಲ್ಲೂ ಬೆಂಗಳೂರನ್ನು ನಿರ್ಮಿಸುವ ಅವರ ಉದ್ದೇಶವನ್ನು ಅವರೇನು ಬಚ್ಚಿಟ್ಟುಕೊಳ್ಳುತ್ತಿಲ್ಲ.

ಐ.ಟಿ.ಬಿ.ಟಿ. ಕ್ಷೇತ್ರ ಶ್ರೀ ಎಸ್. ಎಂ. ಕೃಷ್ಣರ ಆಳ್ವಿಕೆಯಲ್ಲಿ ಒಳ್ಳೆಯ ಪ್ರೋತ್ಸಾಹ ಪಡೆಯಿತು. ಆದರೆ ಆನಂತರ ಬಂದ ಆಳ್ವಿಕೆಗಳ ನಿರಾಸಕ್ತಿ ಹಾಗೂ ಅಸಡ್ಡೆಗಳ ಫಲವಾಗಿ ಐಟಿ ಕ್ಯಾಪಿಟಲ್ ಚೆನ್ನೈ ಹಾಗೂ ಪುಣೆಗೆ ಪಲಾಯನ ಮಾಡಿತು. ಹೀಗಾಗಿ ಹೆಮ್ಮೆಯ ಬೆಂಗಳೂರು ತನ್ನ ಕಿರೀಟವನ್ನು ಕಳೆದುಕೊಂಡಿತು ಮತ್ತು ಸಿಂಹಾಸನದಿಂದ ಕೆಳಗೆ ಬಿತ್ತು. ಹಾಗಾಗ್ಯೂ ಮುಖಭಂಗವಾಗಲಿಲ್ಲ. ಸಾಂಬ ಬೆಳೆಗೆ ನೀರಿಲ್ಲದಿರಬಹುದು ಮತ್ತು ಕುರುವೈ ಬೆಳೆಗೆ ನೀರಿಲ್ಲದಿರಬಹುದು. ಆದರೆ ತಮಿಳು ರೈತರು ತಮಿಳು ರಾಜಕಾರಣಿಗಳು ತಮ್ಮ ನಗರಗಳನ್ನು ಪ್ರೀತಿಸುತ್ತಾರೆ. ತಮ್ಮ ಕೃಷಿಭೂಮಿಯನ್ನು ಪ್ರೀತಿಸುವಂತೆಯೇ. ಆದರೆ ಕರ್ನಾಟಕದ ರಾಜಕಾರಣಿಗಳು ಹಾಗಲ್ಲ. ಅವರಿಗೆ ನಗರಗಳು ತಮ್ಮ ಪವಿತ್ರ ಕನ್ನಡ ಭೂಮಿಯ ಬೇಕಾಗದ ಭಾಗ.

ತಮಿಳರು ತಾವು ಕಟ್ಟಿದ್ದ ಮಹಾನಗರಗಳನ್ನು ಪ್ರೀತಿಸುತ್ತಾರೆ. ಆದರೆ ಕನ್ನಡಿಗರು ಹೆಮ್ಮೆಯನ್ನು ಕಳೆದುಕೊಂಡಿದ್ದಾರೆ ದುರಭಿಪ್ರಾಯವನ್ನು, ದ್ವೇಷವನ್ನೂ ಮತ್ತು ಅಸೂಯೆಯೆನ್ನು ಘೋಷಿಸಿದ್ದಾರೆ. ಪರಿಣಾಮವಾಗಿ ಹಿಂದಿನ ಬೆಂಗಳೂರು ಅತ್ಯಂತ ಪ್ರೀತಿಸಿದ ನಗರ ಅದೊಂದೇ ಪ್ರೀತಿಗಾಗಿ ಮತ್ತು ಮೆಚ್ಚುಗೆಗಾಗಿ ಹಂಬಲಿಸುತ್ತಿರುವ ನಗರ. ಆದರೆ ದುರಂತವೇನೆಂದರೆ ಈ ನಗರವನ್ನು ಒಬ್ಬನೇ ಪ್ರೀತಿಸುತ್ತಾನೆ ಮತ್ತು ಅದು ನಾನು.

ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ನಡೆದ ಐಟಿ ಪ್ರದರ್ಶನ ಮತ್ತು ಸಮ್ಮೇಳನದಲ್ಲಿ ಭಾಗವಹಿಸಲು ಒಂದು ನಿಯೋಗ ಬಂದಿತ್ತು. ಅದು ವಿದೇಶಿ ಐಟಿ ಸಂಸ್ಥೆಗಳು. ಚೆನ್ನೈನಲ್ಲಿ ಹೂಡಿಕೆ ಮಾಡಲು ಇಷ್ಪಪಡುತ್ತಿಲ್ಲವೆಂದು ಹಾಗು ಅವರ ಚೆನ್ನೈ ಮತ್ತಿತರ ನಗರಗಳು ಪ್ರಾತ್ಯಕ್ಷಿಕೆಗಳನ್ನು ನೋಡಲು ಇಚ್ಛೆ ತೋರಿಸುತ್ತಿಲ್ಲ ವೆಂದು ದೂಷಿಸುತ್ತಿದ್ದರು. ಆದರೆ ಈಗ ವಸ್ತು ಸ್ಥಿತಿ ಚೆನ್ನೈ ಮತ್ತು ತಮಿಳುನಾಡಿಗೆ ಮಹತ್ತರವಾಗಿ ಬದಲಾಗಿದೆ. ಇಬ್ಬರು ತರುಣ ತಮಿಳು ರಾಜಕಾರಣಿಗಳು ಕೇಂದ್ರದ ಐಟಿ ಮತ್ತು ಬಿಟಿ ಮಂತ್ರಿಗಳಾಗಿ ಕೇಂದ್ರದಲ್ಲಿದ್ದಾರೆ. ಈಗ ಐಟಿ ಹೂಡಿಕೆದಾರರ ಮೊದಲ ಸೆಲೆ ಚೆನ್ನೈ ಮತ್ತು ಬೆಂಗಳೂರಿನ ನಿಯೋಗವನ್ನು ಯಾರೂ ಕೇಳಲು ಇಚ್ಛೆ ಪಡುತ್ತಿಲ್ಲ. ಪ್ರಪಂಚದ ಅತಿ ದೊಡ್ಡ ಮೊಬೈಲ್ ಹ್ಯಾಂಡ್‌ಸೆಟ್ ತಯಾರಿಕಾ ಘಟಕ ಚೆನ್ನೈನಲ್ಲಿದೆ. ಖಂಡಿತವಾಗಿ ತಮಿಳುನಾಡು ಈಗ ಅಭಿವೃದ್ಧಿ, ಶಾಂತಿ ಹಾಗೂ ಉನ್ನತಿಯ ಸುವರ್ಣಕಾಲವನ್ನು ಹೊಂದಿದೆ. ಆದರೇ ದುರದೃಷ್ಟವಶಾತ್ ಕರ್ನಾಟಕ ಸ್ವಾತಂತ್ರ್ಯಾ ನಂತರ ೬೦ ವರ್ಷಗಳಲ್ಲಿ ಎಂದೂ ಸುವರ್ಣಕಾಲ ಕಾಣಲಿಲ್ಲ.

ನಮಗೆ ಮುಂದುವರಿದ ರಾಷ್ಟ್ರಗಳ ಹಾಗು ಪ್ರಗತಿಶೀಲ ರಾಷ್ಟ್ರಗಳ ರಾಜಕಾರಣಿಗಳ ಮಧ್ಯದ ವ್ಯತ್ಯಾಸ ತಿಳಿದಿಲ್ಲ. ೩೪ ಮುಂದುವರೆದ ರಾಷ್ಟ್ರಗಳ ಮಹಾನ್ ರಾಜಕಾರಣಿಗಳು ಬೆಂಗಳೂರು ಭೇಟಿಗೆ ವಿಶೇಷವಾದ ಪ್ರಾಮುಖ್ಯತೆ ಕೊಟ್ಟು ಬೆಂಗಳೂರಿನಲ್ಲಿ ಏಕೆ ತುರ್ತಾಗಿ ಇಳಿದರೆಂಬುದನ್ನು ಯಾರೂ ವಿಶ್ಲೇಷಿಸಲು ಪ್ರಯತ್ನಿಸಿಲ್ಲ. ಅವು ರಹಸ್ಯ ಭೇಟಿಗಳಲ್ಲ. ಅವುಗಳು ಸ್ಪಷ್ಟ ಉದ್ದೇಶದ ಹಾಗು ಸ್ಪಷ್ಣ ಕಾರ್ಯಕ್ರಮಗಳದ್ದು. ಆದರೆ ಆ ಕಾರ್ಯಕ್ರಮ ಏನು? ಯಾರಿಗೂ ಗೊತ್ತಿಲ್ಲ.

ಆದರೆ ನಮ್ಮ ರಾಜಕಾರಣಿಗಳು ಚೆನ್ನಾಗಿ ಸ್ಧಾಪಿತವಾಗಿರುವ ಮಹಾನ್ ಸಂಘಟನೆಗಳನ್ನು ಬಿಚ್ಚಿ ಹಾಕುವುದಕ್ಕೆ ಸಂತೋಷಪಡುತ್ತಾರೆಯೇ ಎಂಬ ಭಾವನೆಯನ್ನು ಉಂಟು ಮಾಡಿದ್ದಾರೆ. ಈ ಪ್ರಸಿದ್ಧ ಹಾಡು ತೊಲಗಿ ತೊಲಗಿ (ತೆಲಗಿ ತೆಲಗಿ ಅಲ್ಲ) ನನ್ನ ಕಿವಿಗಳಲ್ಲಿ ಮಾರ್ದನಿಸುತ್ತಿದೆ. ಅವುಗಳ ಕರ್ಕಶ ಶಬ್ದ ನಿರರ್ಥಕತೆಯಲ್ಲಿ ಹೊಂದಿಹೋದ ನಂತರವೂ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಂದೇಶ
Next post ಶಕ್ತಿಯ ಕೊಡು

ಸಣ್ಣ ಕತೆ

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…