ಶಕ್ತಿಯ ಕೊಡು ಶಕ್ತಿಯ ಕೊಡು ಹೇ ಪ್ರಭು
ಶಕ್ತಿಯಿಂದಲಿ ಎನಗೆ ಭಕ್ತಿಯ ಕೊಡು ಹೇ ಪ್ರಭು||

ಜನ್ಮ ಚಕ್ರಧಾರೆಯ ಬಿಡಿಸಿ ಹೇ ಪ್ರಭು
ಕರ್‍ಮ ಭೇದಗಳ ಅಳಿಸಿ ಏಕ ಚಿತ್ತದೆ ನಿಲ್ಲಿಸು ಹೇ ಪ್ರಭು||

ನಿನ್ನ ನಾಮಾಮೃತವ ಭಜಿಸಿ ಹೇ ಪ್ರಭು
ಮನವ ನಿಲ್ಲಿಸು ನಿನ್ನೊಲುಮೆಯಲಿ ಹೇ ಪ್ರಭು||

ಮೋಹಪಾಶಗಳ ಕಡು ಸತ್ಯದ ಹೊರಗೆ ವಿಧಿಯ ಬಿಡಿಸಿ
ನಿನ್ನ ಚರಣ ಕಮಲದೊಳಗಣಾ ನಿನ್ನ ಶಿರವನ್ನಿರಿಸು ಹೇ ಪ್ರಭು||

ನಮಿಸುವೆ ದೇವ ವಿಶ್ವರೂಪ ಸ್ವರೂಪವೇ
ಶಕ್ತಿಯ ಕೊಡು ಶಕ್ತಿ ಕೊಡು ಹೇ ಪ್ರಭು||

ಭಕ್ತಿಯ ಕೊಡು ಭಕ್ತಿಯ ಕೊಡು ಹೇ ಪ್ರಭು
ಭಕ್ತಿಯಿಂದಲಿ ಎನಗೆ ಯುಕ್ತಿಯ ಕೊಡು ಹೇ ಪ್ರಭು||

ಯುಕ್ತಿಯ ಕೊಡು ಯುಕ್ತಿಯ ಕೊಡು ಹೇ ಪ್ರಭು
ಯುಕ್ತಿಯಿಂದಲಿ ಎನಗೆ ಮುಕ್ತಿಯ ಕೊಡು ಹೇ ಪ್ರಭು||

ಮುಕ್ತಿಯ ಕೊಡು ಮುಕ್ತಿಯ ಕೊಡು ಹೇ ಪ್ರಭು
ಮುಕ್ತಿಯಿಂದಲಿ ಎನಗೆ ನಿನ್ನ ಸೇವೆಯ ಕೊಡು ಹೇ ಪ್ರಭು||
*****