ಸಪ್ತಪದಿಯ ತುಳಿಯುವಾಗ
ನಾನೆಣಿಸಿದ್ದು
ಅವನೂ ನನ್ನೊಡನೆ
ತನ್ನ ಹೆಜ್ಜೆ ಸೇರಿಸಿದ್ದಾನೆಂದು!

ನಾಲ್ಕು ಹೆಜ್ಜೆಗಳು
ಸೇರಲಿಲ್ಲವೆಂದು ತಿಳಿದದ್ದು,
ಭ್ರಮನಿರಸನವಾದದ್ದು
ಸಂಸಾರದೊತ್ತಡಗಳು ‘ಭಾರಿ’ ಆದಾಗ!

ಆಗಲೇ ತಿಳಿದದ್ದು
ನನ್ನ ದಾರಿಯೇ ಬೇರೆ
ಅವನ ದಾರಿಯೇ ಬೇರ
ಒಂದಕ್ಕೊಂದು ಸಂಬಂಧವಿಲ್ಲದೆ
ಹೆಜ್ಜೆಗಳು ತಮ್ಮ ಪಾಡಿಗೆ ತಾವು
ಒಂಟಿಯಾಗಿ ಸಾಗುತ್ತಿವೆಯೆಂದು!

ಒಂದೇ ಸೂರಿನಡಿಯಲ್ಲಿ
ಹೇಗೋ ಹುಟ್ಟಿದ ನಮ್ಮ ಮಕ್ಕಳ ಸಾಕುತ
ಒಬ್ಬರಿಗೊಬ್ಬರು ಅಪರಿಚಿತರಾಗಿ
ಬದುಕು ಸಾಗಿಸುತ್ತಿದ್ದೇವೆ ಎಂದು!
*****