ಭಾವ ಇರದ ಕವಿತೆ
ಅದು ಅಕ್ಷರಮಾಲೆ
ಜೀವ ಇರದ ಚರಿತೆ
ಅದು ನೆನಪಿನ ಓಲೆ

ಹರಿವು ಇರದ ಅರಿವು
ಅಹುದು ಜಗಕೆ ಕೊಳಕು
ತಿರುವು ಇರದ ಬದುಕು
ಅದು ಯಾತರ ಬದುಕು?

ನೋಟ ಇರದ ಬದುಕು
ಅದಕೆ ಹಲವು ದಿಕ್ಕು
ಹಿನ್ನೋಟ ತೊರೆದ ಯಾನ
ಅದಕೆ ಯಾವ ದಿಕ್ಕು?

ಸ್ಫೂರ್ತಿಭರಿತ ಗೀತೆ
ತುಂಬು ಕಡಲ ಮೊರೆತ
ಹೇಗೊ ಆದ ಕುಣಿತ
ಅಂಕಿ ಇರದ ಗಣಿತ

ನಾಮ ಇರದ ವೆಂಕ್ಟ
ಬಟ್ಟೆ ಇರುವ ಗೊಮ್ಟ
ಕೆತ್ತಿ ತಂದ ಕವಿತೆ
ತಲೆದೂಗಲಹುದೆ ಪಾಠ?
*****