೧ ಹೊಸದಿವಸವೀದಿವಸ! ಇಗೋ ತಗೋ ಮೆಲ್ಲೀಗ! ಬೆಲ್ಲ ಬೆರಸಿರುವ ಬೇವು! ಹುಸಿಯಲ್ಲ! ಹೊಸ ಹಾದಿಗರು- ಬೇವಿನೊಳು ಬೆಲ್ಲ- ವನು ಕಾಣಬೇಕು ನಾವು! ೨ ಹೊಸ ಹಾದಿಗರು ತಾವು ಹಿಂದೊಮ್ಮೆ ಹುಟ್ಟಿಸಿದರೈ ಬೇವಿನಲ್ಲಿ ಬೆಲ್ಲ ವಿಷವು ಜನಿಸಿದ ಕಡಲಿನಲ್ಲಿಂದ ಪೀಯೂಷ- ವನ್ನವರು ತೆಗೆದರಲ್ಲ! *****...

ಏರಿಯ ಕಟ್ಟಬಹುದಲ್ಲದೆ ನೀರ ತುಂಬಬಹುದೆ ಕೈದುವ ಕೊಡಬಹುದಲ್ಲದೆ ಕಲಿತನವ ಕೊಡಬಹುದೆ ವಿವಾಹವ ಮಾಡಬಹುದಲ್ಲದೆ ಪುರುಷತನವ ಹರಸಬಹುದೆ ಘನವ ತೋರಬಹುದಲ್ಲದೆ ನೆನಹ ನಿಲಿಸಬಹುದೆ ಓದು ಒಕ್ಕಾಲು ಬುದ್ಧಿ ಮುಕ್ಕಾಲು ಎಂಬ ಲೋಕದ ಗಾದೆಮಾತಿನಂತೆ ಸದ್ಗುರುಕಾರು...

-ವ್ಯಾಸಮಹರ್ಷಿಯ ಕೃಪೆಯಿಂದ ಶಂತನು ಮತ್ತು ಸತ್ಯವತಿಯರ ಪುತ್ರನಾದ ವಿಚಿತ್ರವೀರ್ಯನ ಮಡದಿಯರಾದ ಅಂಬಿಕೆ ಮತ್ತು ಅಂಬಾಲಿಕೆಯರ ಗರ್ಭದಲ್ಲಿ ಜನಿಸಿದ ಧೃತರಾಷ್ಟ್ರ ಮತ್ತು ಪಾಂಡುಕುಮಾರರು ದಾಸಿಯ ಮಗನಾದ ವಿದುರನೊಂದಿಗೆ ಬೆಳೆದು ದೊಡ್ಡವರಾಗಲು, ಅವರಿಗೆ ...

ಭಾವ ಚಿತ್ರಗಳನ್ನು ಹೊತ್ತ ಗೋಡೆ ಮೌನದಲ್ಲೂ ಇತಿಹಾಸ ಬಿಂಬಿಸುತ್ತದೆ. ಗೋಡೆಗಳು ಕಿಟಕಿಗಳು, ಬಾಗಿಲುಗಳು ತಮ್ಮೊಳಗೆ ಮನೆಯ ಮನಸ್ಸಿನ ಕಂಪನಗಳ ಬಗ್ಗೆ ಮಾತನಾಡಿಕೊಳ್ಳುತ್ತವೆ. ಮತ್ತೆ ಇರುವೆಗಳು ಎಲ್ಲಾ ಜಾಗಗಳನ್ನು ಮೂಸಿಸುತ್ತವೆ ಹಿತವಾಗಿ. ಬಚ್ಚಲ ಮನ...

ಜಯ ಭಾರತ ನವ ಭಾರತ ಜಯ ಭಾರತವೆನ್ನಿ || ಜಯ ಜಯ ಘೋಷಣೆಯ ಮೊಳಗಿಸಿ ನವ ಚೇತನದೆಡೆಗೆ ನಡೆಯಿರಿ || ಜ || ವೀರ ಯೋಧರು ಬೆಳಗಿದ ಭೂಮಿ ಜನನಿಯ ಜೊಗುಳದ ಐಸಿರಿ ಎನ್ನಿರಿ || ಜ || ನವಋತುಗಳ ನವ ಭಾಷೆಯೆ | ನವ ಜೀವನದ ಜೀವನದಿಗಳ ತಾಣವೆನ್ನಿರಿ || ಜ || ದ...

ಮಾತೆ ಭುವನೇಶ್ವರಿ ಜಗನ್ಮಾತೆ ನನ್ನನ್ನು ಮಾಯೆಯಿಂದ ನಿ ಕಾಪಾಡು ನೀನು ಎನ್ನ ಕೈ ಬಿಟ್ಟ ಮೇಲೆ ನಾನು ಬದುಕುಳಿಯುವದೇ ಇದು ಕಾಡು ವಿಷಯ ಸುಖಕ್ಕೆ ಇಂದ್ರಿಯಗಳ ಚಡಪಡಿಕೆ ಮನಸ್ಸು ಇಂದ್ರಿಯಗಳ ಮೇಲೆ ಸವಾರಿ ಅವುಗಳ ನಡುವೆ ನಾನು ಅನಾಥ ನರಕವೇ ಗತಿ ನಾ ಜನ...

ಮಾರನೆಯ ದಿನ ಬೆಳಗಾಗುತ್ತಲೆ ಸುಭದ್ರೆಯು ಎಂದಿನಂತೆ ಪಾಠಶಾಲೆಗೆ ಹೋದಳು. ಅಲ್ಲಿ ಆಕೆಯ ಮುಖವು ಬಾಡಿರುವುದನ್ನು ಉಪಾಧ್ಯಾಯೆಯೂ, ಸುಭಧ್ರೆಯಸಂಗಾತಿಯರೂ ನೋಡಿದರು. ಕಾರಣವು ಯಾರಿಗೂ ತಿಳಿಯದು. ಸುಭದ್ರೆ ಯಾವಾ ಗಲೂ ಪಾಠವನ್ನು ತಪ್ಪುತ್ತಿದ್ದವಳಲ್ಲ. ಈ...

ಕಮಲವನ ಸಂಚಾರಿಣಿಯೆ ಮಹಾಲಕ್ಷ್ಮೀ ಬೇಕೇ ಆಸನ ಅರುಣಚರಣೇ ಮಾಡು ನನ್ನೀ ಹೃದಯವನೆ ಸಿಂಹಾಸನ ವಿಶ್ವಸುಂದರಿ ನಿಖಿಲಜಗದಾನಂದಕರಿ ಹೇ ಯೋಗಿನೀ ವಿರಸ ಹೃದಯತ್ಯಾಗಿ ನೀರಸ ಭಕ್ತಿ ಬಂಧನ ಭೋಗಿನೀ ವಾಪದೂರೇ ಮಾಡು ನನ್ನನು ನಿನ್ನನುಗ್ರಹದಾಗರಾ ಮಧುರ ಕೌಶಲ ಮಾಯ...

(ಜೀವನದಲ್ಲಿಯ ಒಂದು ಅನುಭವದ ಅನ್ಯೋಕ್ತಿಯಿದು.) ೧ ‘ಇರುಳೆಲ್ಲವೂ ತಿರುಗಿ ತಿರೆಗೆ ಚೆಲುವನು ಬೀರಿ, ನರರ ಕಣ್‌ಮನ ತಣಿವ ತೆರದಿ ಒಲವನು ತೂರಿ, ಚರಿತಾರ್ಥನಾಗಲಿಕೆ ಸರಿಯಿದೇದಿನ’ ಎಂದು, ಹುಣ್ಣಿಮಯ ತಣ್‌ಗದಿರ ತುಂಬುಮೊಗದಲಿ ಬಂದು, ಅಳತೆಯಿಲ್ಲದ ಪಳು...

ಏಕೆ ಹುಟ್ಟಿಸಿದೆ ನನ್ನನು? ಎಂದು ಪ್ರಶ್ನೆಯ ಕೇಳದೆ ಇಲ್ಲಿ ಹುಟ್ಟಿಸಿ ನಿನ್ನಯ ಕರ್‍ಮವ ಕಳೆಯೆ ಅವಕಾಶಕಲ್ಪಿಸಿದಕೆ ಕೃತಜ್ಞನಾಗಿರು|| ಏಕೆ ನನಗೆ ಈ ಸ್ಥಿತಿಯ ನೀಡಿದೆ ಎನ್ನುವುದಕಿಂತ ಇದಕಿಂತ ಕೆಳಗಿನ ಪರಿಸ್ಥಿತಿಯ ಅವಲೋಕಿಸಿ, ಇದೇ ನನಗೆ ಉತ್ತಮವೆಂ...

ಕೋಟೆ ಕೊತ್ತಲದಲ್ಲಿ ಕತ್ತಿ ಗೊರಸಿನ ಸದ್ದು ಒಳಗೆ ಅಂತಃಪುರದಲ್ಲಿ ರಾಣಿ ಒಂಟಿ. ಹೆಪ್ಪುಗಟ್ಟಿದ ನೆತ್ತರಲ್ಲಿ ಸೇಡು ಸೆಣಸಿನ ಹೆಜ್ಜೆ ಒಳಗೆ ಮಿಡಿಯುವ ನಾಡಿ ವಿವೇಕ ಒಂಟಿ. ಕೋಟೆ ಕಲ್ಲುಗಳಿಂದ ಕಾದ ನಿಟ್ಟುಸಿರು ಕತೆ ಬರೆಯುತ್ತಿದೆ ಮಣ್ಣು ಕಾಯುತ್ತ ಕ...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...