ನಟ ತೆರೆಯ ಮರೆಯಾದ ಆಟ ತೀರಿಸಿಕೊಂಡು, ಭಟ ಸಮರದಿಂದ ತೆರಳಿದ ಅರಸನರಮನೆಗೆ; ಪಟು ಪಾಡುಗಾರ ತುಟಿ ಮುಚ್ಚಿದನು ನಾಡು- ನುಡಿಗಳ ಹಾಡುಗಳನು ಹಾಡಿ. ಅಟಮಟದ ಮಾತಲ್ಲ; ನಾಡೆ ನಾರಾಯಣನು, ದಿಟವಾಗಿ ‘ನುಡಿಯೆ ಸಿರಿ’ ಎಂದು ಕೀರ್ತನೆಗೈದು ಹಟದಿ ಕೀರ್ತನಗಾರ ಬೆವರನೊರಿಸಲು ಹಿಂದೆ ಸರಿದ ವಿಶ್ರಾಂತಿಗಾಗಿ. ...

ನಾ ಕುಡದಾಡೋ ಪದಗೊಳ್ನೆಲ್ಲ ಬೀದೀಯೋರ್ ಜನಗೋಳು ಈಟೊಂದ್ ಒಗಳಾಕ್ ಏನ್ ಕಾರಣಾಂದ್ರೆ ಯೋಳ್ತೀನ್ ಚೆಂದಾಗ್ ಕೇಳು. ೧ ಯಿದ್ದೇಗೆಲ್ಲ ದೇವ್ರಾಗೌಳೆ- ಔಳ್ ಆ ಸರಸೋತಮ್ಮ; ಯೀಣೆ ಯಿಡದಿ ಔಳ್ ಆಡಿದ್ರೆ ನಾ ಕುಡದ್ ಆಡ್ತೀನಮ್ಮ! ೨ ಸರಸೋತಮ್ಮನ್ ಎಡದೋಳ್ ನೋಡು...

ರವಿ ಶಶಿಯ ಮತ್ತೆ ನೀನಿತ್ತ ಬೆಳಕಲಿ ಗುರುತಿ- ಸುವೆ, ಗುರುವೆ ! ಗುರು ಬುಧರ ಹಾಸಂಗಿಯಲ್ಲಿ ಲೆತ್ತ- ವಾಡುತಿರೆ ಹೊತ್ತು, ಚಿಕ್ಕೆಯ ಪಟ್ಟದಲ್ಲದರ ಲೆಕ್ಕವನು ಗುಣಿಸಿ ಎಣಿಸುವೆ, ಮಲೆಯ ಬನಬನವ ತರಿವ ಮೂಡಲಗಾಳಿ, ಹಸಿರು ಬಯಲಿಗೆ ತರುತ- ಲಿರುವ ಪಡುವಲ ...

ಸಣ್ಣ ಮಕ್ಕಳು ಬೀಡಿ ಸೇದಬಾರದು. ಬೀಡಿ ಸೇದುವದೊಂದು ವ್ಯಸನವು ಇಂಥ ವ್ಯಸನಕ್ಕೆ ಬಲಿಬಿದ್ದು ತಮ್ಮ ಶೀಲ ಕೆಡಿಸಿಕೊಳ್ಳಬಾರದು. ಮುಂತಾದ ವ್ಯಾಖ್ಯಾನವನ್ನು ನಾನು ಬಹಳ ಜನರ ಬಾಯಿಂದ ಕೇಳಿದ್ದೇನೆ. ನನ್ನ ಮತವಾದರೂ ಹಾಗೆ ಇದ್ದುದರಿಂದ ಈ ಉಪದೇಶಾಮೃತದಿಂದ...

ಜಾರುಗತಿಯೊಳೆಮ್ಮ ಬೇಕಿನೊಳನ್ನ ಮೊದಲೊ ಳಿರುತಿರಲು ಅನ್ನದುದ್ಯೋಗವೆಲ್ಲದಕು ಮೊದಲಿರಬೇಕು ವಸ್ತ್ರ ವಸತಿಯುದ್ಯೋಗಗಳದರ ಹಿಂದಿರಬೇಕು ನೇರ ನಡೆಯಲರಿಯದದೇನು ಸಾಧನೆಯೋ ಶಿರಸಾಸನವನೆಲ್ಲರೆಲ್ಲೆಲ್ಲೂ ಮಾಳ್ಪರಲಾ – ವಿಜ್ಞಾನೇಶ್ವರಾ *****...

ಸಾಲಕ್ಕೆ ಕೊನೆಯಿಲ್ಲ ಆಲಕ್ಕೆ ನೆರುಳಲ್ಲಾ ನಾನ್ ಹುಟ್ಟಿ ಮನಿಗೇ ಹೆಸುರಾದೆ ಕೋಲೇ || ೧ || ತಂದಿದ್ದರೆ ತವರಕ ಹೆಚ್ಚು ತಾಯಿದ್ದರೆ ಬಳಗೆ ಹೆಚ್ಚು ಸಾವಿರಕ್ಕೆ ಹೆಚ್ಚು ಪತಿ ಪುರಷ ಕೋಲೇ || ೨ || ಮಾಣಿಕದ ಹರಳು ಮಗ ಹೆಚ್ಚುಲಾದರೆ ಮಾಣಿಕದ ಹರಳು ಮಗ ...

ಅವರು ಲೆಬ್ಲಾಂಕನನ್ನು ಹಗ್ಗದಿಂದ ಬಿಗಿದು ಕಟ್ಟಿ ಪೂರಯಿಸಿದ ಕೂಡಲೆ ಥೆನಾರ್ಡಿಯರನು ಒಂದು ಕುರ್ಚಿಯನ್ನೆತ್ತಿಕೊಂಡು ಬಂದು ಅವನ ಎದುರಲ್ಲಿ ಕುಳಿತು, ‘ ಮನ್ಸಿಯುರ್, ನೀನು ಕಿಟಕಿಯಿಂದ ಹೊರಕ್ಕೆ ಧುಮ್ಮಿಕ್ಕಿ ಹೋಗಲು ಪ್ರಯತ್ನಿಸಿ ದುದು ತಪ್ಪ...

ದೇವಾ ನಿನಗೊಂದು ಕೋರಿಕೆ ಮಾಡದಿರು ನನ್ನ ಬದುಕು ತೋರಿಕೆ ಹೃದಯದಲಿ ಅರಳಲಿ ಜ್ಞಾನ ಆ ಜ್ಞಾನದಲ್ಲಿ ಬೆಳಗಲಿ ದಿವ್ಯ ಧ್ಯಾನ ಈ ವಿಶಾಲ ಲೋಕದಲ್ಲೂ ನಾ ನಿನ್ನ ಕೃಪೆಯಿಲ್ಲದೆ ತಬ್ಬಲಿ ನನ್ನವರೆಂಬುವವರೆಲ್ಲ ಇಲ್ಲಿ ಹುಟ್ಟು ಸಾವಿನ ಮಾತ್ರ ಮಧ್ಯದಲಿ ಓ ಪ್ರ...

ನೋಡಾ ಗುಲಾಬಿ ತಾನರಳಿ ಸಾರುವುದಿಂತು: “ಜಗದೊಳಕೆ ನಾಂ ಬಂದು ನಗು ನಗುತೆ ನಿಂತು, ಬಿಗಿದಿರದೆ ಪಟ್ಟು ಚೀಲವನಿತ್ತ ಬಿಚ್ಚುತ್ತೆ ಮಗ ಮುಗಿಪ ನಿಧಿಯನೆಲ್ಲವನೆರೆಯುತಿಹೆನು.” *****...

ಪ್ರತಿಯೋರ್ವ ಮಾನವನಲ್ಲಿ ತೀರಾ ಅವಶ್ಯವಾಗಿ ಇರಲೇಬೇಕಾದ ಸದ್ಗುಣಗಳಲ್ಲಿ ‘ಕ್ಷಮಾಗುಣ’ ಅತ್ಯಂತ ಪ್ರಮುಖವಾಗಿದೆ. ‘ಕ್ಷಮೆ’ ನಮ್ಮಲ್ಲಿದ್ದರೆ ಅದೊಂದು ನಮ್ಮ ಆದರ್ಶಕ್ಕೆ ಇಂಬಾಗಲು ಸಾಧ್ಯ. ನಿತ್ಯ ಬಾಳಿನಲ್ಲಿ ಕ್ಷಮಾಗುಣವೊ...

“ಏನೇ ಗೌರಿ ಯಾವಾಗ ಬಂದೆ ಗಂಡನ ಮನ್ಯಾಗೆಲ್ಲಾ ಘನಾಗಿದ್ದಾರೇನೆ?” ಎಂದು ಕಂಕುಳಲ್ಲೊಂದು, ಕೈಯಲ್ಲೊಂದು ಮಕ್ಕಳನ್ನು ಹಿಡ್ಕೊಂಡು ವಾರಗಿತ್ತಿಯರು ಕೇಳುವವರೇ. “ವೂ ಕಣೇ, ವೂ ಕಣಕ್ಕ, ನೀವೆಲ್ಲಾ ಘನಾಗಿದೀರೇ” ಎಂದು ಹೇಳಿ ಉತ್ತರಕ್ಕೂ ಕಾಯದೆ ಮನೆ ಸೇರಿದಳು. ಗ...

ನಮ್ಮ ಹಳ್ಳಿ ಬಹಳ ಚಿಕ್ಕದು. ಇರುವುದೆಲ್ಲಾ ನೂರು ಮನೆಗಳು. ಸುಮಾರು ಆರುನೂರು ಪ್ರಜಾಸಂಖ್ಯೆ. ಒಟ್ಟಿನಲ್ಲಿ ನೆಮ್ಮದಿ ಗ್ರಾಮವೆಂದೇ ಹೇಳಬೇಕು. ನಮ್ಮ ಪಟೇಲ ಒಳ್ಳೆಯವನೆಂದೇ ಹೆಸರು ಪಡೆದಿದ್ದಾನೆ. ಅವನು ತನ್ನ ಕೈಲಾದಷ್ಟು ಗ್ರಾಮಸ್ಥರಿಗೆ ಉಪಕಾರ ಮಾಡಿದ್ದಾನೆ. ಒಂದು ದೇವಸ್ಥಾನ, ಒಂದು ಅ...

ಒಂದೇ ರೂಮಿನಲ್ಲಿದ್ದರೂ ಅವನನ್ನು ನನ್ನ ಸ್ನೇಹಿತ ಎಂದು ಮನಸ್ಸು ಒಪ್ಪಿಕೊಂಡಿರಲಿಲ್ಲ. ರಾತ್ರಿ ನಿದ್ದೆಗಾಗಿ ಮಾತ್ರ ಅವನಿಗದೊಂದು ರೂಮು. ಊಟತಿಂಡಿ ಎಲ್ಲಾ ಹೋಟೆಲ್ಲು. ನಾನು ಸಂಜೆ ಏಳಕ್ಕೆ ರೂಮಿಗೆ ಬಂದರೆ ಅವನು ಹತ್ತಕ್ಕೆ ಬರುತ್ತಿದ್ದ. ಬೆಳಿಗ್ಗೆ ಅವನು ಹತ್ತಕ್ಕೆ ಹೊರಟರೆ ನಾನು ಒಂದ...

ಚಾಮುಂಡಿ, ದುರ್ಗಿ, ಕಾಳಿ, ಶಂಕರಿ, ಮಾರಿ ಮೊದಲಾದ ದೇವಿಗಳಿಗೂ : ಆಂಜನೇಯ, ವಲ್ಲಭರಾಯ, ನರಸಿಂಹ ಮೊದಲಾದ ದೇವರುಗಳಿಗೂ ನಮ್ಮೂರಲ್ಲಿ ಏನೂ ಕೊರತೆಯಿಲ್ಲ. ಇಲ್ಲೊಂದು ಶಂಕರಿ ದೇವಾಲಯ ಬಹುಕಾಲದಿಂದಲೂ ಇದೆ. ಅದನ್ನು ಕಟ್ಟಿಸಿದವರು ಯಾರೆಂಬುದೇ ಗೊತ್ತಿಲ್ಲ. ಪ್ರತಿ ಶನಿವಾರ ಅಭಿಷೇಕ, ಶುಕ್ರ...

ರಾಜ ನಿಮಗೆ ಗೊತ್ತೆ? ಇಲ್ಲ? ಆತ ನನ್ನ ಸ್ನೇಹಿತ, ಆಪ್ತ ಸ್ನೇಹಿತ. ಅವನಿಗೂ ಕತೆ ಬರೆಯುವ ಹುಚ್ಚಿದೆ. ಆದರೆ ಬರೆದು ಸಂಪಾದಿಸಿ ಬದುಕುವ ಹಟವಿಲ್ಲ. ಹಾಗೆಂದೇ, ತಕ್ಕಮಟ್ಟಿಗೆ ಸಂಪಾದನೆ ಇರುವ ಬೇರೆ ಉದ್ಯೋಗದಲ್ಲಿದ್ದಾನೆ! ರಾಜ ಬರೆದಿರುವ ಒಂದು ಕಥೆ ನನ್ನಲ್ಲಿದೆ. ಓದಿ ನೋಡುತ್ತೀರಾ? ನಿಮ...

ಅಂದು ನಾನು, ನಮ್ಮ ತಾತ, ನನ್ನ ತಂಗಿ ಎಲ್ಲರೂ ಕಣದಲ್ಲಿ ಕುಳಿತುಕೊಂಡು ಹರಟೆ ಹೊಡೆಯುತ್ತಿದ್ದೆವು. ಸುಗ್ಗಿಯ ಕಾಲವಾದ್ದರಿಂದ ರೈತರು ಮತ್ತು ಆಳುಗಳು ಕಣದಲ್ಲಿ ಕೆಲಸ ಮಾಡುತ್ತಿದ್ದರು. ನಮ್ಮ ತಾತನು ಆ ಮಾತು ಈ ಮಾತು ಆಡುತ್ತಿದ್ದರೂ, ಆತನ ಒಂದು ಕಣ್ಣು ಮಾತ್ರ ಕೆಲಸಗಾರರ ಮೇಲೆಯೇ ಇರುತ್...