
೧
ಹೊಸದಿವಸವೀದಿವಸ! ಇಗೋ ತಗೋ ಮೆಲ್ಲೀಗ!
ಬೆಲ್ಲ ಬೆರಸಿರುವ ಬೇವು!
ಹುಸಿಯಲ್ಲ! ಹೊಸ ಹಾದಿಗರು- ಬೇವಿನೊಳು ಬೆಲ್ಲ-
ವನು ಕಾಣಬೇಕು ನಾವು!
೨
ಹೊಸ ಹಾದಿಗರು ತಾವು ಹಿಂದೊಮ್ಮೆ ಹುಟ್ಟಿಸಿದರೈ
ಬೇವಿನಲ್ಲಿ ಬೆಲ್ಲ
ವಿಷವು ಜನಿಸಿದ ಕಡಲಿನಲ್ಲಿಂದ ಪೀಯೂಷ-
ವನ್ನವರು ತೆಗೆದರಲ್ಲ!
*****
ಕನ್ನಡ ನಲ್ಬರಹ ತಾಣ