ಕೌರವ ಸಂತಾನದ
ಭ್ರಷ್ಟಾಚಾರ ಅನಾಚಾರಗಳ ಭಾರಕೆ
ನಲುಗಿಹಳು ವಸುಂಧರೆ
ಕುಸಿದಿವೆ ಕಟ್ಟಡಗಳು ಚಮೋಲಿಯಲಿ
ಹಾನಿಗೊಂಡಿವೆ ಮನೆ ಮಠಗಳು
ಅರಣ್ಯರೋದನ ದೃಶ್ಯಗಳು
ಚೇತರಿಸಿಕೊಳ್ಳುವ ಮೊದಲೇ
ಪುನಃ ಕಂಪಿಸಿದಳು ಚಮೋಲಿ
ದಿನಗಳು ಕಳೆದರೂ ಕೇಳುವವರಿಲ್ಲ
ಹಕ್ಕಿಗಳ ನೋವು ನಲುವಿನ ಹಾಡ
ಸಾಲದೆಂಬುದಕೆ ವರುಣನ ಅವಕೃಪೆ ಬೇರೆ
ಬದುಕಿ ಉಳಿದವರೆಷ್ಟೋ ತತ್ತರಿಸಿದವರೆಷ್ಟೋ
ಜೀವಂತ ಸಮಾಧಿಗಳೆಷ್ಟೋ
ಅಂಧಕಾರದ ನಾಡಿನಲಿ
ಅಮಲಿನ ಬಿಳಿ ಟೋಪಿ
ಬಿಳಿ ಆನೆಗಳ ಜೇಬು ತುಂಬುತಿಹುದು
ಸಂತ್ರಸ್ಥರ ಕಥೆ-ವ್ಯಥೆಯಲಿ
ಎದೆ ನಡುಗಿದೆ ಝಲ್ಲೆಂದಿದೆ
ಹಕ್ಕಿ-ಪಕ್ಕಿ ಕಾಕ-ಪಿಕಗಳ ದನಿ ಉಡುಗಿದೆ
ಗಿಡ-ಮರ ಬಳ್ಳಿಗಳು ರೋಧಿಸುತಿವೆ
ದುಃಖ ದುಮ್ಮಾನದಲಿ ಎಲ್ಲಿದೆ ಬೆಳಕು
ಪ್ರೀತಿ ಕರುಣೆಗಳಡಗಿಹವೆಲ್ಲೊ
ನೋವು ನಲಿವು ಮಣ್ಣೂಳಗೆ ಮಣ್ಣಾಗಿವೆ
*****