ಜಯ ಭಾರತ ನವ ಭಾರತ
ಜಯ ಭಾರತವೆನ್ನಿ ||
ಜಯ ಜಯ ಘೋಷಣೆಯ ಮೊಳಗಿಸಿ
ನವ ಚೇತನದೆಡೆಗೆ ನಡೆಯಿರಿ || ಜ ||

ವೀರ ಯೋಧರು ಬೆಳಗಿದ ಭೂಮಿ
ಜನನಿಯ ಜೊಗುಳದ ಐಸಿರಿ ಎನ್ನಿರಿ || ಜ ||

ನವಋತುಗಳ ನವ ಭಾಷೆಯೆ |
ನವ ಜೀವನದ ಜೀವನದಿಗಳ ತಾಣವೆನ್ನಿರಿ || ಜ ||

ದ್ವೇಷ ಕ್ಲೇಶಗಳ ತೊರೆದು |
ಮಾನವೀಯತೇಯಲಿ ಮೇರೆದು |
ಮನುಜ ಕುಲದ ಜ್ಯೋತಿಯಾಗಿರಿ || ಜ ||
*****