ಕಮಲವನ ಸಂಚಾರಿಣಿಯೆ ಮಹಾಲಕ್ಷ್ಮೀ ಬೇಕೇ ಆಸನ
ಅರುಣಚರಣೇ ಮಾಡು ನನ್ನೀ ಹೃದಯವನೆ ಸಿಂಹಾಸನ

ವಿಶ್ವಸುಂದರಿ ನಿಖಿಲಜಗದಾನಂದಕರಿ ಹೇ ಯೋಗಿನೀ
ವಿರಸ ಹೃದಯತ್ಯಾಗಿ ನೀರಸ ಭಕ್ತಿ ಬಂಧನ ಭೋಗಿನೀ

ವಾಪದೂರೇ ಮಾಡು ನನ್ನನು ನಿನ್ನನುಗ್ರಹದಾಗರಾ
ಮಧುರ ಕೌಶಲ ಮಾಯೆಯಲಿ ಮಾಡೆನ್ನ ಪ್ರೇಮದ ಸಾಗರಾ.
*****