ಆ ಕರುಣೆಯೆಳನಗೆಯ ಕಡೆನೋಟದೊಂದು ಕಳೆ ಮನಕಿತ್ತ ಸದ್ಭಾವ ಸಂದೀಪ್ತಿಯೊಳಗೆ ನನ್ನೊಳಗು ಹೊರಗು ನಾ ಗುಡಿಬಳಸಿನೊಳಗಲೆದ ಚರಿತಾರ್ಥವೆಡೆಗೊಂಡಿತೀ ಕಬ್ಬದೊಳಗೆ. ಜೀವ ಮಾನುಷ್ಯದೊಳು ಪಡೆವಮಿತ ಭಾವಗಳ ಪಾರಮ್ಯವಿಲ್ಲೆಂಬ ಭೂಮಾನುಭೂತಿ ಋತಸತ್ಯಸಂಜನ್ಯ ರೂಪಸಂಕೇತಗಳ ಸೂಕ್ತಿ ಸಂಗೀತದೀ ದೇಗುಲದ ರೀತಿ ಜೀವವಿದು ಆತ್ಮದೂಷರವಾ...

ಬೀದಿ ಬದಿಯಲ್ಲಿ ಬಿದ್ದ ಹೆಣ ನಾನು ಶತಶತಮಾನದ ಕತೆಗಾರ ಕತ್ತಲು ಬೆಳಕಿನ ಕಾಳಗ ನಡೆದು ಸಾವಿರ ಸಾವಿನ ಸರದಾರ. ರಾಜರ ನಡುವೆ ನಡೆಯಿತು ಯುದ್ಧ ಸಿಂಹಾಸನದ ಸಲುವಾಗಿ ಕುದುರೆಯ ಗೊರಸು ಕತ್ತಿಯ ಬಿರುಸು ಬಿದ್ದೆನು ಕೆಳಗೆ ನೆಲವಾಗಿ. ನೆಣ ನೆತ್ತರಿನ ಓಕುಳ...

Medea ಯೂರಿಪಿಡಿಸ್ ಬರೆದ ದುರಂತ ನಾಟಕ. ಗ್ರೀಕ ದಂತಕಥೆಗಳಲ್ಲಿ ಬರುವ ಮೆಡಿಯಾ Euripides ಈ ನಾಟಕದ ಪ್ರಮುಖ ಪಾತ್ರ. Medea ಧೈರ್ಯಶಾಲಿ, ಬುದ್ಧಿವಂತೆ. ಶಾಂತ ಮನಸ್ಸಿನ ಸದ್ಗುಣಿ, ಕಷ್ಟಕ್ಕೆ ಕಣ್ಣೀರು ಹರಿಸುವ ಹೆಣ್ಣಲ್ಲ ಆಕೆ. ಏಸಿಯಾ ಮೂಲದ ಆಕೆ...

ಬುಗುರಿಯ ಆಡಿಸೊ ಕಾಲ ಬರುವದು ತಪ್ಪದೆ ಆ ಜಾಲ ರಂಗನು ಅಪ್ಪಗೆ ದುಂಬಾಲು ಬುಗುರಿ ನನಗೆ ಬೇಕೆನಲು ಅಪ್ಪನು ಹೋದನು ಪೇಟೆಗೆ ಬಣ್ಣದ ಬುಗುರಿಯ ರಂಗನಿಗೆ ತಂದುಕೊಟ್ಟನು ಚಾಟಿ ಸಹಿತ ದಿನದೂಡಿದ ಕನಸು ಕಾಣುತ ಚಾಟಿಯ ಭರ ಭರ ಸುತ್ತುತ್ತ ರಂಗನು ನಡೆದ ಮಿತ್...

ನಾನು ಮೀನಾಗಿದ್ದಿದ್ರೆ ಎಷ್ಟೊಂದ್ ಚೆನ್ನಾಗಿರ್ತಿತ್ತು ದಿನವೂ ನೀರಲಿ ಆಟ ಆಡ್ಕೊಂಡ್ ಖುಷಿ ಖುಷಿಯಾಗಿ ಇರ್ತಿದ್ದೆ ಮುಖ ತೊಳೆಯೊ ಬಾರೋ ಅಂತ ಅಮ್ಮ ಕೂಗಿ ಹೇಳಿದ್ರೆ ಆಗ್ಲೆ ತೊಳೆದಾಯ್ತಮ್ಮ ನಾನು ಕಾಫಿ ಕೊಡು ಅನ್ತಿದ್ದೆ ಸ್ನಾನ ಮಾಡೋ ಬಾರೋ ಅಂತ ಅಮ್...

ಸೃಷ್ಟಿ ಸೂಬಗನು ಮೊಗೆ ಮೊಗೆದು ಕುಡಿದು ಮೌನದರಮನೆಯಲ್ಲಿ ಗರಿ ಬಿಚ್ಚಿದ ಕಥನ ಹಿಮದೊಳಗಿನ ಬೆಂಕಿಯಂತೆ ಸಂತೈಸಿಕೊಂಡವನು ಮಣ್ಣ ಕಣದಿಂದ ಮಿಡತೆಯಾಗಿ ಎದ್ದು ಬಂದವನು. ಹುಲ್ಲು ಗರಿಕೆ ಬಿದಿರ ಮೇಳೆಯ ಕಾಡಿನ ಜಿನುಗುವ ನೀರ ಒರತೆಯಾಗಿ ಹುಟ್ಟು ಸಾವುಗಳ ಜ...

ಚದುರೆ ನೀನಿರದಾಟ ಅದೆಂತು ಚದುರಂಗದಾಟ ನೀ ಸದರ ಮಾಡಿ ಮದಿರಂಗಿ ಕೈಗಳಲಿ ಕುದುರೆ ನಡೆಸುವಾಟ ಅದುವ ಚದುರಂಗದಾಟ ಬಟ್ಟ ಕಂಗಳ ಅಂಗಳದಾಟ ಕೂದಲ ಸುಳಿಯಲಿ ಬೆರಳುಗಳಾಟ ಅಂಗಾಂಗವೆಲ್ಲಾ ಕಚಗುಳಿಯಾಟ ರಕ್ಷಣಾಭಂಗ ತಕ್ಷಣದಾಟ ತದೇಕ ಚಿತ್ತ ನೋಡುವಾಟ ಚಿತ್ತವೃತ...

ಭವ್ಯ ಭಾರತದ ಎರಡನೆಯ ಪ್ರಧಾನ ಮಂತ್ರಿಯಾಗಿ ೧೯೬೪ ರಲ್ಲಿ ಶಾಸ್ತ್ರಿಯವರು… ಅಧಿಕಾರ ವಹಿಸಿಕೊಂಡಾಗ, ದೇಶದ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿತು! ಇದೇ ಸಮಯದಲ್ಲಿ ನೆರೆಯ ರಾಷ್ಟ್ರ ಚೀನಾ ದೇಶವು ಕಾಲು ಕೆದರಿ ಜಗಳ ತೆಗೆದು ಯುದ್ಧ ಮಾಡಲು ಶು...

ಬಾಳಿಽಯ ಬನದಾಗ ಬಾಲ ಚೆಂಡಾಡ್ಯಾನ ಬಾ ನನ್ನ ಮಗನಽ ಅಬರಂಗ ಧೊರಿಯಽ ಬಾಳಿಕಿಂತಾ ಛೆಲಿವ್ಯೋ | ನನ ಸೊಸಿ | ಬಂದೊಮ್ಮೆ ಮಕದೋರೊ ||೧|| ಬಾಳಿಕಿಂತ ಛೆಲಿವ್ಯಾದ್ರ ಭಾಂಯಾಗ ನುಗಸವ್ವಾ ಉಟ್ಟೀದ ದಟ್ಟಿಽ ಕಳಕೋರ್ಹಡದವ್ವಾ ಬಿಟ್ಹಚ್ಚ ತವರ್ಮನಿಽಗೇ | ನಾ ನನ್...

ಕೃಷ್ಣನಿಗಾಸೆ ನೂರು ಅದಕೆ ಹೆಂಡಿರು ಮೂರು ಹೆಂಡಿರಿಗಾಸೆಯೆ ಇಲ್ಲ ಮರ್‍ಮವ ತಿಳಿದವರಾರು? ಪತಿವ್ರತೆಯೆಂಬುದು ಧರ್‍ಮ ಪುರುಷನಿಗ್ಯಾವುದು ಧರ್‍ಮ ಧರ್‍ಮವನೇರಿದ ತಪ್ಪಿಗೆ ಕಾವಲು ಇವನ ಕರ್‍ಮ! ಹೆಣ್ಣು ಪೂರ ಅಬಲೆ ಜೊತೆಗೆ ಕೊಂಚ ಚಂಚಲೆ ಯಾರ ಬಾಯಿಂದ ಈ...

ಇಂಚಿಂಚೇ ಪ್ರತ್ಯಕ್ಷವಾಗುವ ಇದು ಇನ್ನೂ ಐದು ವರ್ಷ ಅಥವಾ ಆರೋ? ಇವತ್ತೇ ಏಕೆ ವಿಕಾರ ಮುಖ ದರ್ಶನ? ಬರುವ ವರಸೆಗೋ ಆಹಾ ಜೀವ ತಲ್ಲಣ ಪಕ್ಕ ಕುಳಿತು ತಲೆಸವರಿ ಮುತ್ತಿಟ್ಟು ಮೈ ಮರೆಸಿದ ದೇಹವೇ ಉದುರಿಸಿ ದಳ ದಳ ಕಳಚುತ್ತಾ ಕಣ್ಣು ಕಿವಿ ಒಂದೊಂದೇ ಬರಿದಾ...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...

ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...

ಮಧುಮಾಸದ ಮೊದಲ ದಿನಗಳು. ಎಲ್ಲಿ ನೋಡಿದರೂ ತಾಯಿಯ ವಿವಿಧ ವಿಲಾಸ……. ಪುಷ್ಪಶೃಂಗಾರ!! ವರ್‍ಣವೈಖರಿ!! ಮಧುಪಾನದಿಂದ ಮೈಮರೆತು ಮೊರೆಯುತಿಹೆ ಉನ್ಮತ್ತ ಭೃಂಗ ಸಂಕುಲದ ಎಣೆಯಿಲ್ಲದ ಪ್ರಣಯ ಕೇಳಿ! ಸಹಸ್ರಸಹಸ್ರ ಖಗಕಂಠಗಳಿಂದೆ ದಿಕ್ಕುದಿಕ್ಕಿಗೆ ಪಸರಿಸುತಿಹ ಸುಮಧುರ ಗಾನ ತರಂಗ...

ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...