ಇಂಚಿಂಚೇ ಪ್ರತ್ಯಕ್ಷವಾಗುವ ಇದು
ಇನ್ನೂ ಐದು ವರ್ಷ ಅಥವಾ ಆರೋ?
ಇವತ್ತೇ ಏಕೆ ವಿಕಾರ ಮುಖ ದರ್ಶನ?
ಬರುವ ವರಸೆಗೋ ಆಹಾ ಜೀವ ತಲ್ಲಣ
ಪಕ್ಕ ಕುಳಿತು ತಲೆಸವರಿ ಮುತ್ತಿಟ್ಟು
ಮೈ ಮರೆಸಿದ ದೇಹವೇ ಉದುರಿಸಿ
ದಳ ದಳ ಕಳಚುತ್ತಾ ಕಣ್ಣು ಕಿವಿ
ಒಂದೊಂದೇ ಬರಿದಾಗುವ ಪರಿ
ಉಸಿರಿನ ಮೇಲೇರಿ ಕುಳಿತು ಸಾವು
ನನ್ನನ್ನು ನೋಡಿ ನಸುನಕ್ಕು ಕೈ ಬೀಸಿತು.
ಬಾ ಎಂದೋ? ಅಥವಾ……
ಬರಲೇ? ಎಂದೋ
ತಿಳಿಯದಲ್ಲಾ.
*****