
ನಾ… ಗುರುತಿಸಬಲ್ಲೆ ಅವಳು, ಅವಳೇ ನನ್ನ ಮಗಳು ಮುದ್ದಾದ ಜಿಂಕೆ, ನವಿಲು ಸುರಗಿ, ರಂಜ, ಜಾಜಿ ದೇವ ಕಣಗಿಲೆ ಹೂವಿನಂತವಳು ಹಂಚಿಕೊಂಡೆವು ಪ್ರೀತಿಯ ಅಗುಳು ನೋವಿನಲ್ಲೊಂದು ಪಾಲು ನೀಡಿ ಬೇಡಿ ಪಡೆದವಳು ಬುಟ್ಟಿಯ ತುಂಬ ನಕ್ಷತ್ರಗಳನ್ನು ತುಂಬಿಕೊ...
ಗಡಿಯಾರ ಬಲಗೈಯಿಂದ ಎಡಗೈಗೆ ಬಂತು. ಅದು ನನಗರಿವಿಲ್ಲದಂತೆ ಆದ ಕೆಲಸ, ಅತಿಯಾದ ನನ್ನ ಭಾವುಕತೆಯನ್ನು ಹದ್ದುಬಸ್ತಿನಲ್ಲಿಡುವ, ನನ್ನ ಮೇಲೆ ನಾನು ನಿಗ್ರಹ ಪಡೆಯಲು ಮಾಡುತ್ತಿರುವ ಯತ್ನಗಳಲ್ಲಿ ಅದೂ ಒಂದು. ಬಹು ದಿನಗಳಿಂದ ಬಲಗೈಗೆ ಗಡಿಯಾರ ಕಟ್ಟುವುದನ...
ಮೋಡಗಳೇ ಎತ್ತ ಹೋದರೆಲ್ಲಿ? ಬನ್ನಿ ಈ ನಾಡ ಪ್ರವೇಶ ಮಾಡಿ ನೀರ ಹನಿಗಳ ಚೆಲ್ಲಿ ಹಾತೊರೆಯುತಿಹವು ಮೊಳಕೆಯೊಡೆಯಲು ಕಾಳು ಕಮರುವ ಮೊದಲಲ್ಲಿ ಮೋಡಗಳೇ ಬನ್ನಿರಿಲ್ಲಿ ನೀರ ಹನಿಗಳ ಚೆಲ್ಲಿ ನಮ್ಮೂರ ಹಾದು ಹೋಗುವ ಮುನ್ನ ಎಮ್ಮ ಜೀವಕೆ ಕಳೆಯ ತನ್ನಿ ಸಾವಿರಾರ...
ಮನುಷ್ಯನಿಗೆ ಬರುವುದು ಕಷ್ಟ ನಿಜ ಈಗ ಮರಕ್ಕೆ ಬರುವ ಕಷ್ಟವು ನೂರಕ್ಕೆ ನೂರು ನಿಜ. *****...
ಮೌನವಾಗಿದೆ ಧರಿತ್ರಿ ಮೌನವಾಗಿದೆ ದಿಗಂತ ಮೌನವಾಗಿದೆ ಸಾಗರ; ಒಂದಾಗಿದೆ ಭೂಮಂಡಲವಾಗಿ. ಜತೆಯಾಗಿದೆ ಮೌನದಲಿ ಅಖಂಡವಾದ ನಂಟಿನಲಿ ನಿರಂತರತ್ವದ ಸಂಕೇತದಲಿ ಅವಿಚ್ಛಿನ್ನತೆಯ ಭಾವದಲಿ. ನೆಲವ ಬಿಟ್ಟು ಜಲವಿಲ್ಲ ಜಲವಬಿಟ್ಟು ಗಗನವಿಲ್ಲ ಒಂದಕ್ಕೊಂದು ಜತೆಯ...
ನಿನ್ನ ನೆತ್ತಿಗೆ ಛತ್ರ ಹಿಡಿದು ಹೊರಗಿನ ಮಂದಿ- ಯೆದುರು ಗೌರವ ಮೆರೆದರದು ನನಗೆ ಲಾಭವೇ? ಸುಸ್ಥಿರ ಭವಿಷ್ಯ ಜೀವನಕೆಂದು ಅಡಿಪಾಯ ಹಾಕುವುದು ವ್ಯರ್‍ಥ ಎಂದೇನು ನಾ ಅರಿಯೆನೆ ? ಸರಳನಡೆ ನೀಗಿ, ಆಡಂಬರಕೆ ಬಲಿ ಹೋಗಿ, ಅಂತಸ್ತು ಠೀವಿ ಸಭೆಮನ್ನಣೆಗೆ ಸಿ...
ಹುಚ್ಚನೇ ಹೌದೇ? ಪ್ರಥಮ ಪರಿಚ್ಛೇದ ದಫೆೇದಾರ ನರಸಿಂಗರಾಯನು ಬಹು ಬುದ್ದಿವಂತೆ. ಅನೇಕ ಕಳ್ಳರನ್ನು ಹಿಡಿದುಕೊಟ್ಟು, ಮೇಲಿನ ಅಧಿಕಾರಿಗಳಲ್ಲಿ ಪ್ರೀತಿ ಗೌರವಗಳನ್ನು ಸಂಪಾದಿಸಿದ್ದನು. ಆದರೂ ಈ ಹಾಳು ಜನರ ಬಾಯಿ] ಸುಮ್ಮನಿರದು. ‘ ಜೇಷ್ಟ ಆಷ...
ಕಡಲಬಸಿರು ನೋಡುವ ಆಸೆಕಣ್ಗಳು- ತನ್ನವೇ ಐದಾರು ಬಸಿರು ನೆಲಕ್ಕುರುಳಿ ಬೆಳೆದು ನೀರಿಗಿಳಿದು ಜಾಲರಿ ತುಂಬಿ ತುಂಬಿ ಮೀನುಗಳ ತರುವ ಮಕ್ಕಳ ನೋಡಿ ನಕ್ಕಾಕೆ… ಬೆಂಕಿಯ ನಾಲಿಗೆಗೆ ಸಿಕ್ಕು ಸುಟ್ಟ ಮೀನುಗಳಿಗೆ ಅತ್ತಾಕೆ…. ಕತ್ತಲಕಾಯಕಕೆ ಬೆ...
ಸುಮ್ಮನೆ ನಿಂತಿದ್ದ ನೆನಪಿಗೆ ಚಲನೆ ಕರುಣಿಸಿದ ಅವಳ ನಗೆಗೆ ನಾಲ್ಕು ತದುಕುವ ಸಲುವಾಗಿ ಮುಖ ಸಿಂಡರಿಸಿಕೊಂಡ ನನಗೆ ನನ್ನದೇ ಮುಖಭಂಗದ ಮುಖ ನೋಡುವ ಸದಾವಕಾಶ ಒಲಿಯಿತು *****...
ಅನಿವಾರ್ಯತೆ ಬದುಕನ್ನು ನಿರ್ಮಿಸುತ್ತದೆ. ಅಸಹಾಯಕತೆ ಬದುಕನ್ನು ನಿರ್ನಾಮ ಮಾಡುತ್ತದೆ. *****...
ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...
“ಕಿಟ್ಟೂ…….! ಚಳಿಯೊ……! ಹೊಟ್ಟೆಯಲ್ಲಿ ನಡುಕ……! ಅಯ್ಯೋ ಸಾಯ್ತಿನೊ ……. ಕಿಟ್ಟೂ ….. ಅಯ್ಯೋ….. ಅಯ್ಯೋ…. ಹ….. ಯ್ಯೋ…. ಎಂಥಾ… ವೇಳೆ ತಂದೆಪ್ಪಾ ಭಗವಂತಾ!…. ಅಯ್ಯ...
ಬೆಳಿಗ್ಗೆಯಿಂದ ಕತ್ತಲೆಯವರೆಗೂ ಬಸ್ ಸ್ಟಾಂಡಿನಲ್ಲಿ ಬಸ್ಸುಗಳಿಗೆ ಹತ್ತಿ ಇಳಿದುಕೊಂಡು ಎಷ್ಟು ಗೋಗರೆದು ಬಿಕ್ಷೆ ಬೇಡಿದರೂ ಆ ಹುಡುಗನಿಗೆ ಮಧ್ಯಾಹ್ನದ ಊಟ ಮಾಡುವಷ್ಟು ಹಣ ಸಂಗ್ರಹವಾಗುತ್ತಿರಲಿಲ್ಲ. ಮಧ್ಯಾಹ್ನ ಬಿಸ್ಕಿಟು ಮತ್ತು ನಲ್ಲಿ ನೀರು ಕುಡಿದು ಹಸಿವು ತಣಿಸಿದರೂ ರಾತ್ರಿಯ ಊಟಕ್ಕ...
ಈ ಮಾಹಾತ್ಮ್ಯೆ ಯಾವ ಪುರಾಣದಲ್ಲಿದೆ? ಎಲ್ಲಿ ಯಾರು ಹೇಳಿದ್ದು? ಯಾರು ಕೇಳಿದ್ದು? ಯಾವ ಇಷ್ಟಾರ್ಥಸಿದ್ದಿಗಾಗಿ? ಎಂದೆಲ್ಲ ಪ್ರಶ್ನೆಗಳನ್ನು ನೀವು ಕೇಳಬಹುದು. ಉತ್ತರ ಹೇಳುತ್ತಾ ಹೋದರೆ ಪೀಠಿಕಾ ಪ್ರಕರಣವೇ ಉದ್ದ ಬೆಳೆದು ಮಹಾತ್ಮ್ಯೆಯನ್ನು ಕೇಳುವಷ್ಟರಲ್ಲಿ ನಿಮಗೆ ಹಾಕಳಿಗೆ ತೊಡಗಿ ತೂಕಡ...
(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...















