ಸುಮ್ಮನೆ ನಿಂತಿದ್ದ
ನೆನಪಿಗೆ
ಚಲನೆ ಕರುಣಿಸಿದ ಅವಳ ನಗೆಗೆ
ನಾಲ್ಕು ತದುಕುವ ಸಲುವಾಗಿ
ಮುಖ ಸಿಂಡರಿಸಿಕೊಂಡ ನನಗೆ
ನನ್ನದೇ ಮುಖಭಂಗದ ಮುಖ
ನೋಡುವ
ಸದಾವಕಾಶ ಒಲಿಯಿತು
*****